ಬೆಂಗಳೂರು : ಮಳೆಗಾಲದಲ್ಲಿ ರೆಫ್ರಿಜರೇಟರ್ ಅನ್ನು ಸರಿಯಾದ ತಾಪಮಾನದಲ್ಲಿ ಇಡುವುದು ಮುಖ್ಯ.ಇದರಿಂದ ರೆಫ್ರಿಜರೇಟರ್ನಲ್ಲಿ ಇರಿಸಲಾದ ವಸ್ತುಗಳು ತಂಪಾಗಿ, ತಾಜಾವಾಗಿ ಸುರಕ್ಷಿತವಾಗಿ ಉಳಿಯುತ್ತವೆ.ಮಳೆಯ ಸಮಯದಲ್ಲಿ ತಾಪಮಾನದಲ್ಲಿ ಬದಲಾವಣೆಗಳಾಗುತ್ತವೆ. ಆದ್ದರಿಂದ ಫ್ರಿಜ್ನ ತಾಪಮಾನವನ್ನು ಸರಿಯಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ.
ಮಳೆಗಾಲದಲ್ಲಿ ರೆಫ್ರಿಜರೇಟರ್ನ ತಾಪಮಾನಎಷ್ಟಿರಬೇಕು ? :
ಮಳೆಗಾಲದಲ್ಲಿ ರೆಫ್ರಿಜರೇಟರ್ನ ತಾಪಮಾನ ಎಷ್ಟಿರಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವುದಿಲ್ಲ.ಮಳೆಗಾಲ ಬಂದಾಗ ಸುತ್ತಮುತ್ತಲಿನ ತಾಪಮಾನವು ಕಡಿಮೆಯಾಗುತ್ತದೆ. ಹೀಗಾದಾಗ ವಾತಾವರಣದಲ್ಲಿನ ತೇವಾಂಶದ ಪ್ರಮಾಣವು ಹೆಚ್ಚಾಗುತ್ತದೆ.ಆದರೆ,ಈ ಆರ್ದ್ರ ಋತುವಿನಲ್ಲಿ,ಆಹಾರ ಪದಾರ್ಥಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ರೆಫ್ರಿಜರೇಟರ್ ತಾಪಮಾನವನ್ನು ಸರಿಯಾಗಿ ಇಡುವುದು ಬಹಳ ಮುಖ್ಯ.
ಮಳೆಗಾಲದಲ್ಲಿ ಫ್ರಿಜ್ಗೆ ಸರಿಯಾದ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ಎಂದು ಸ್ಯಾಮ್ಸಂಗ್ನ ಬ್ಲಾಗ್ ಪೋಸ್ಟ್ನಲ್ಲಿ ಹೇಳಲಾಗಿದೆ.ಈ ತಾಪಮಾನದಲ್ಲಿ ಇರಿಸಲಾದ ರೆಫ್ರಿಜರೇಟರ್ ಆಹಾರ ಪದಾರ್ಥಗಳನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ. ಇನ್ನು ಮಳೆಗಾಲ ಅಥವಾ ಇತರ ಯಾವುದೇ ಋತುವಿನಲ್ಲಿ, ಫ್ರಿಜ್ ನ ತಾಪಮಾನ 1.7 ಡಿಗ್ರಿಗಳಿಂದ 3.3 ಡಿಗ್ರಿಗಳ ನಡುವೆ ಇರಬೇಕು ಎನ್ನುತ್ತಾರೆ ತಜ್ಞರು.
ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆಯಲು ಫ್ರಿಜ್ ಅನ್ನು ಈ ತಾಪಮಾನದಲ್ಲಿ ಸೆಟ್ ಮಾಡಿಕೊಳ್ಳುವುದು ಸೂಕ್ತ.ಇದು ಆಹಾರವನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸಅಳು ಸಹಾಯ ಮಾಡುತ್ತದೆ.ಈ ತಾಪಮಾನದಲ್ಲಿ ಸೆಟ್ ಮಾಡಲಾದ ರೆಫ್ರಿಜರೇಟರ್ ಆಹಾರದ ರುಚಿ ಕೆಡದಂತೆಯೂ ನೋಡಿಕೊಳ್ಳುತ್ತದೆ.
ಇದನ್ನೂ ಓದಿ : Screen Time For Children: ಯಾವ ವಯಸ್ಸಿನ ಮಕ್ಕಳು ಎಷ್ಟೊತ್ತು ಸ್ಕ್ರೀನ್ ವೀಕ್ಷಿಸಬಹುದು? ಇಲ್ಲಿದೆ ಮಹತ್ವದ ಮಾಹಿತಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.