UCAV Arrow: ವಿಶ್ವದ ಮೊಟ್ಟಮೊದಲ ಮಾನವರಹಿತ ಸೂಪರ್ ಸಾನಿಕ್ ಯುದ್ಧ ಡ್ರೋನ್ ಬಿಡುಗಡೆ

World's First Pilotless Super Sonic Fighter Drone: ವಿಶ್ವದ ಮೊಟ್ಟಮೊದಲ ಸೂಪರ್ ಸೋನಿಕ್ ಅಂದರೆ ಶಬ್ದದ ವೇಗಕ್ಕಿಂತ ವೇಗವಾಗಿ ಚಲಿಸುವ ಯುದ್ಧ ಡ್ರೋನ್ ಸಿದ್ಧಪಡಿಸಲಾಗಿದೆ. ಇದರ ವೈಶಿಷ್ಟ್ಯ ಎಂದರೆ ಇದು ಸಂಪೂರ್ಣ ಮಾನವರಹಿತ ಡ್ರೋನ್ ಆಗಿರಲಿದ್ದು, ಯುದ್ಧ ಮೈದಾನದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಬನ್ನಿ ಹಾಗಾದರೆ ಈ ಯುದ್ಧ ಡ್ರೋನ್ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

Written by - Nitin Tabib | Last Updated : Mar 6, 2021, 06:29 PM IST
  • ವಿಶ್ವದ ಮೊಟ್ಟಮೊದಲ ಮಾನವರಹಿತ ಸೂಪರ್ ಸೋನಿಕ್ ಯುದ್ಧ ಡ್ರೋನ್ ಸಿದ್ಧ.
  • ಧ್ವನಿ ವೇಗಕ್ಕಿಂತಲೂ ವೇಗವಾಗಿ ಚಲಿಸಬಲ್ಲದು.
  • 17000 ಕೆ.ಜಿ ತೂಕ ಹೊತ್ತು 4800 ಕಿಮೀ ಪ್ರಯಾಣ ಬೆಳೆಸುವ ಸಾಮರ್ಥ್ಯ ಇದರಲ್ಲಿದೆ.
UCAV Arrow: ವಿಶ್ವದ ಮೊಟ್ಟಮೊದಲ ಮಾನವರಹಿತ ಸೂಪರ್ ಸಾನಿಕ್ ಯುದ್ಧ ಡ್ರೋನ್ ಬಿಡುಗಡೆ  title=
World's First Pilotless Super Sonic Fighter Drone (Photo Courtesy-Wion)

ನವದೆಹಲಿ: World's First Pilotless Super Sonic Fighter Drone - ಸಿಂಗಾಪುರ್ ಮೂಲದ ಕೆಲಿ ಏರೋಸ್ಪೇಸ್ (Kelley Aerospace of Singapore) ವಿಶ್ವದ ಮೊಟ್ಟಮೊದಲ ಸೂಪರ್ ಸೋನಿಕ್ ಮಾನವರಹಿತ ಕೊಂಬಾಟ್ ಏರಿಯಲ್ ವೆಹಿಕಲ್ (UCAV) ಬಿಡುಗಡೆಗೊಳಿಸಿದೆ. ಇದರ ಮಾರುಕಟ್ಟೆಯ ಬೆಲೆ ಸುಮಾರು 1.6 ಕೋಟಿ ಡಾಲರ್ ಅಂದರೆ ಸುಮಾರು 117 ಕೋಟಿ ರೂ.ಗಳಾಗಿದೆ. ಈ ಜೆಟ್ ಡ್ರೋನ್ ಗೆ Arrow  ಎಂದು ಹೆಸರಿಡಲಾಗಿದೆ ಹಾಗೂ ಇದು ಶಬ್ದದ ವೇಗಕ್ಕಿಂತಲೋ ಹೆಚ್ಚು ವೇಗದಲ್ಲಿ ಹಾರಾಟ ನಡೆಸಬಲ್ಲದು. ಇದು MACH 2.1 ಅಂದರೆ 2593 ಕಿಲೋಮೀಟರ್ ಪ್ರತಿ ಸೆಕೆಂಡ್ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಧ್ವನಿಗಿಂತಲೂ ಹೆಚ್ಚು ವೇಗ
ಈ ಜೆಟ್ ಡ್ರೋನ್ ಬಿಡುಗಡೆಯ ವೇಳೆ ಮಾತನಾಡಿರುವ ಕೆಲಿ ಏರೋಸ್ಪೇಸ್ ಪ್ರಧಾನ ಕಾರ್ಯದರ್ಶಿ ಇಯಾನ್ ಲಿಮ್ (Kelly Aerospace Chief Executive Ian Lim), UAV ಗಳು ಎಂದಿಗೂ ಕೂಡ ತಮ್ಮ ವೇಗದ ಕಾರಣ ಗುರುತಿಸಲ್ಪಡುವುದಿಲ್ಲ. ಆದರೆ, Arrow ಸೂಪರ್ ಸೋನಿಕ್ UAV ವೇಗ ಹಾಗೂ ಗುರಿಯ ಅಡೆತಡೆಗಳನ್ನು ಮೀರಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-Pizzaದಿಂದ Vaccineವರೆಗೆ ಡ್ರೋನ್ ಮೂಲಕ ವಿತರಣೆ, ಈ ಕಂಪನಿಗಳಿಗೆ ಸಿಕ್ತು ಅನುಮತಿ

ಶತ್ರುಗಳನ್ನು ಈ ರೀತಿ ಸದೆಬಡಿಯಲಿದೆ
ಈ UCAV ನಲ್ಲಿ ರೇಡಾರ್ ಕ್ರಾಸ್-ಸೆಕ್ಷನ್ ಹಾಗೂ ಇನ್ಫ್ರಾರೆಡ್ ಸಿಗ್ನೇಚರ್ ಗಳನ್ನು ಅಳವಡಿಸಲಾಗಿದೆ. ಕೊಂಬಾಟ್ ಹಾಗೂ ರೆಕಿ ಬಳಕೆಯ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಇವುಗಳನ್ನು (First Pilotless Supersonic Fighter Drone) ವಿವಾದಿತ ಕ್ಷೇತ್ರಗಳಲ್ಲಿ ಮಿಸೈಲ್ ಗಳ ದಾರಿ ತಪ್ಪಿಸಲು, ಶತ್ರುಗಳ ಸೈನಿಕರನ್ನು ಎದುರಿಸಲು ಅಥವಾ ಅವರ ಸಂವಹನ ಸಾಧನಗಳನ್ನು ನಿಷ್ಕ್ರೀಯಗೊಳಿಸಲು ಬಳಸಬಹುದಾಗಿದೆ. ಇದರ ಗರಿಷ್ಟ ಟೆಕ್ ಆಫ್ ತೂಕ 16,800 ಇರಬಹುದು ಹಾಗೂ ಇದು 4,800 ಕಿ.ಮೀ ಗೂ ಅಧಿಕ ದೂರದವರೆಗೆ ಸಂಚರಿಸಬಲ್ಲದು.

ಇದನ್ನೂ ಓದಿ-190 ಅಡಿ ಎತ್ತರದಿಂದ ಡ್ರೋನ್ ಮೂಲಕ ಶರೀರ ತಾಪಮಾನ ತಪಾಸಣೆ,..

ಇದುವರೆಗೆ 100ಕ್ಕೂ ಅಧಿಕ ಆರ್ಡರ್ ಗಳು ಬಂದಿವೆ
ಹಲವು ಏರೋ ಡ್ರೋನ್ ಗಳನ್ನು ಪೈಲೆಟ್ ಹೊಂದಿರುವ ಕೊಂಬಾಟ್ ಏರ್ಕ್ರಾಫ್ಟ್ ಗಳ ಮೂಲಕ ಕಂಟ್ರೋಲ್ ಮಾಡಲಾಗುತ್ತದೆ. ಇದರಿಂದ ಅವರು ಯುದ್ಧಭೂಮಿಯಲ್ಲಿ ಹಲವು ಕೆಲಸಗಳನ್ನು ನಿರ್ವಹಿಸಬಹುದು. ಇವುಗಳನ್ನು ಗ್ರೌಂಡ್ ಸ್ಟೇಷನ್ ಗಳಿಂದ ರಿಮೋಟ್ ಕಂಟ್ರೋಲ್ ಕೂಡ ಮಾಡಬಹುದು. ಈ ಡ್ರೋನ್ ಗಳನ್ನು ಕಾರ್ಬನ್ ಫೈಬರ್ ನ ಒಂದು ಸೆಲ್ ನಿಂದ ತಯಾರಿಸಲಾಗಿದೆ. ಇವುಗಳನ್ನು ಡ್ರೋನ್ ಸ್ವಾರ್ಮ್ ಅಥವಾ ಫಾರ್ಮೇಶನ್ ಗಳಲ್ಲಿಯೂ ಕೂಡ ಉಡಾವಣೆ ಮಾಡಬಹುದು. ಸಾಮಾನ್ಯವಾಗಿ ಶತ್ರುಗಳ ಏರ್ ಡಿಫೆನ್ಸ್ ಸಿಸ್ಟಂನ ದಾರಿ ತಪ್ಪಿಸಲು ಇವುಗಳನ್ನು ಬಳಸಲಾಗುತ್ತದೆ. ಇದುವರೆಗೆ ಕೆಲಿ ಏರೋಸ್ಪೇಸ್ (Singapore's Kelly Aerospace) 100ಕ್ಕೂ ಅಧಿಕ ARROW ಡ್ರೋನ್ ಗಳ ಆರ್ಡರ್ ಪಡೆದಿರುವುದಾಗಿ ಹೇಳಿಕೊಂಡಿದೆ.

ಇದನ್ನೂ ಓದಿ-ನಿಮ್ಮ ಬಳಿಯೂ ಡ್ರೋನ್ ಇದ್ದರೆ ಈಗಲೇ ನೋಂದಾಯಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News