ವೇದ... ಶಿವಣ್ಣ ಅಭಿನಯದ 125ನೇ ಚಿತ್ರ. ಬುಧವಾರ ಸಿನಿಮಾದ ಟೀಸರ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ವೈಟ್ ಪೆಟಲ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರದ ಟೀಸರ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಯ್ತು.. ಇದೇ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್, ನನ್ನ ಯಶಸ್ಸಿಗೆ ಕುಟುಂಬ, ಇಡೀ ಚಿತ್ರರಂಗ ಕಾರಣ.. ಇನ್ನು ನಿರ್ಮಾಪಕರು ನನ್ನನ್ನು ಯಾವಾಗಲು ಬ್ಯುಸಿಯಾಗಿ ಇಟ್ಟಿದ್ದಾರೆ. ಅವರಿಗೆ ನನ್ನ ಸಲಾಂ ಅಂತಾ ಹೇಳಿದ್ರು.