ಮೂರು ವಿಶ್ವವಿದ್ಯಾಲಯ ಹೊಂದಿರುವ ಧಾರವಾಡದಲ್ಲಿ ಮತ್ತೊಂದು ವಿವಿ ನಿರ್ಮಾಣಕ್ಕೆ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕು ಸ್ಥಾಪನೆ ನೆರವೇರಿಸಿದರು. ರಾಜ್ಯದ ಟಾಪ್ ಮೋಸ್ಟ್ ವಿವಿ ಹೊಂದಿರುವ ವಿದ್ಯಾಕಾಶಿ ಧಾರವಾಡಕ್ಕೆ ಈಗ ಇನ್ನೊಂದು ಗರಿ ಮೂಡಿದೆ. ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಯಿತು.