ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಕಂಗೆಟ್ಟು ಆರ್ಥಿಕ ಪರಿಸ್ಥಿತಿಯಿಂದ ನೊಂದಿದ್ದ ಜನಸಮಾನ್ಯರು ನಾಡಿನೆಲ್ಲಡೆ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ರಾಜ್ಯದ ಪ್ರಸಿದ್ಧ ಲಕ್ಷ್ಮಿ ದೇವಾಲಯಗಳಲ್ಲಿ ಒಂದಾದ ತುಮಕೂರು ಜಿಲ್ಲೆ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯ ಕೊರೊನಾ ಕರಿ ಛಾಯೆಯಿಂದ ಹೊರ ಬಂದಿದ್ದು, ಎಂದಿನಂತೆ ತಾಯಿಯ ದರ್ಶನ ಭಾಗ್ಯ ಭಕ್ತರಿಗೆ ಲಭ್ಯವಾಗಿದೆ. ಅಷ್ಟೇ ಸಡಗರದಲ್ಲಿ ದೂರದ ಊರುಗಳಿಂದಲೂ ಭಕ್ತರು ಬಂದು ತಾಯಿಯ ಕೃಪಾಶೀರ್ವಾದಕ್ಕೆ ಪಾತ್ರರಾದರು