ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವೈರಲ್ ಆಗುವ ವಿಡಿಯೋಗಳನ್ನು ಕಂಡರೆ ಬಿದ್ದು ಬಿದ್ದು ನಗುತ್ತೇವೆ. ಇತ್ತೀಚೆಗೆಯಷ್ಟೇ ವ್ಯಕ್ತಿಯೊಬ್ಬ ವರ್ಕ್ ಫ್ರಂ ಹೋಂ ಮಾಡುತ್ತಾ ಲೈವ್ ನಲ್ಲಿರುವಾಗಲೇ ಬೆಕ್ಕೊಂದು ಆತನ ಮೈಮೇಲೆ ಹತ್ತಿ ಪೆಟ್ಟು ಕೊಡುವ ದೃಶ್ಯ ಸಖತ್ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ, ಲಾಕ್ಡೌನ್ ಸಂದರ್ಭದಲ್ಲಿ ಇಂತಹ ಫನ್ನಿ ಘಟನೆಗಳು ನಡೆದ ಅನೇಕ ನಿದರ್ಶನಗಳಿವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸಖತ್ ವೈರಲ್ ಆಗಿದ್ದು, ಒಂದೆಡೆ ನಗು ತರಿಸಿದರೆ, ಇನ್ನೊಂದೆಡೆ ಆಕೆಯ ಛಲಕ್ಕೆ ಶಹಬ್ಬಾಶ್ ಎನ್ನಬೇಕು ಎಂಬಂತಿದೆ.
ಇದನ್ನೂ ಓದಿ: ಅಧಿಕಾರದ ದರ್ಪ ತೋರಿಸಿದ ಬಾಸ್ ಗೆ ನಡುರಸ್ತೆಯಲ್ಲೇ ‘ಅವಮಾನ’: Funny Video ನೋಡಿದ್ರೆ ನಗು ತಡೆಯೋದಿಲ್ಲ
ಪಾಕಿಸ್ತಾನದ ಪತ್ರಕರ್ತೆ ಫರಾ ನಾಸೀರ್ ಎಂಬವರು ಈ ಪೇಚಿಗೆ ಸಿಲುಕಿರುವ ನಿರೂಪಕಿ. ಆದರೆ ಲೈವ್ ನಲ್ಲಿ ಅಂತಹ ಘಟನೆ ನಡೆದರೂ ಸಹ ಆ ಸಂದರ್ಭವನ್ನು ನಿಭಾಯಿಸಿದ ರೀತಿ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಫರಾ ಅವರು ಲೈವ್ನಲ್ಲಿದ್ದಾಗ ನೊಣವೊಂದನ್ನು ಆಕಸ್ಮಾತ್ ಆಗಿ ನುಂಗಿದ್ದಾರೆ. ಆದರೆ ಅದು ಲೈವ್ ಆಗಿದ್ದ ಹಿನ್ನೆಲೆಯಲ್ಲಿ ಅದರ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳದೆ ಮಾತನ್ನು ಮುಂದುವರೆಸಿದ್ದಾರೆ. ಈ ವಿಡಿಯೋ ಕೊಂಚ ನಗು ತರಿಸಿದರೂ ನಿರೂಪಕಿಯ ಚತುರತೆಯನ್ನು ಮೆಚ್ಚಲೇಬೇಕು.
“ಸದ್ಯ ಪಾಕಿಸ್ತಾನದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಿಂದೆಂದೂ ಇಂತಹ ಮಳೆಯನ್ನು ಪಾಕ್ ಕಂಡಿಲ್ಲ. ಎಂಟು ವಾರಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಈ ಕಾರಣದಿಂದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ” ಎಂಬ ಸುದ್ದಿಯನ್ನು ಫರಾ ಓದುತ್ತಿದ್ದರು. ಈ ಸಂದರ್ಭದಲ್ಲಿ ನೊಣವೊಂದು ಬಾಯಿಯೊಳಗೆ ನುಗ್ಗಿದೆ. ಆದರೆ ಅವರು ಧೃತಿಗೆಡದೆ ಅದನ್ನು ನುಂಗಿ, ಲೈವ್ ಮುಂದುವರೆಸಿದ್ದಾರೆ.
Sharing because we all need a laugh these days. Turns out it's not just @fordnation, I swallowed a fly on air today.
(Very much a first world problem given the story I'm introducing). pic.twitter.com/Qx5YyAeQed
— Farah Nasser (@FarahNasser) August 29, 2022
ಈ ವಿಡಿಯೋವನ್ನು ಫರಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ‘ಈ ದಿನಗಳಲ್ಲಿ ನಮಗೆಲ್ಲರಿಗೂ ನಗು ಬೇಕಿದೆ. ಹಾಗಾಗಿಯೇ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ. ನಾನು ಇಂದು ಲೈವ್ ನಲ್ಲಿ ನೊಣವನ್ನು ನುಂಗಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Baby Name: ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ: ಹೆಸರೇನು ಗೊತ್ತಾ?
ಸದ್ಯ ಈ ವಿಡಿಯೋಗೆ ಸಖತ್ ಮೆಚ್ಚುಗೆ ವ್ಯಕ್ತವಾಗಿದ್ದು, ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಕ್ಕಾಗಿ ನೆಟ್ಟಿಗರು ಅವರನ್ನು ಪ್ರಶಂಸಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.