Gujarat Election 2022: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಫ್ರಿಕನ್ನರ ಸಂಭ್ರಮಾಚರಣೆ- ವಾಚ್ ವಿಡಿಯೋ

Gujarat Election 2022: ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ  ಗುಜರಾತ್‌ನ ಮಿನಿ ಆಫ್ರಿಕನ್ ಗ್ರಾಮವಾದ ಜಂಬೂರ್‌ನಲ್ಲಿ ನೆಲೆಸಿರುವ ಆಫ್ರಿಕನ್ನರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಈ ಗ್ರಾಮಸ್ಥರಿಗೆ ಇದೇ ಮೊದಲ ಬಾರಿಗೆ ವಿಶೇಷ ಬುಡಕಟ್ಟು ಮತಗಟ್ಟೆಯಲ್ಲಿ ಮತ ಚಲಾಯಿಸುವ ಅವಕಾಶ ಸಿಕ್ಕಿದ್ದು ಇವರ ಚುನಾವಣಾ ಉತ್ಸಾಹ ಇಮ್ಮಡಿಗೊಂಡಿದೆ.

Written by - Yashaswini V | Last Updated : Dec 1, 2022, 09:04 AM IST
  • ಗುಜರಾತ್‌ನ ಜಂಬೂರ್ ಗ್ರಾಮದಲ್ಲಿ ಆಫ್ರಿಕನ್ ಜನರು ವಾಸಿಸುತ್ತಿದ್ದಾರೆ.
  • ಭಾರತದ ಮಿನಿ ಆಫ್ರಿಕನ್ ವಿಲೇಜ್ ಜಂಬೂರ್ ಜನರು ಇದೇ ಮೊದಲ ಬಾರಿಗೆ ಅವರ ನಿರ್ದಿಷ್ಟ ಬುಡಕಟ್ಟು ಮತಗಟ್ಟೆಯಲ್ಲಿ ಮತ ಚಲಾಯಿಸುತ್ತಾರೆ.
  • ಮತದಾನಕ್ಕೂ ಮುನ್ನ ಗುಜರಾತ್‌ನ ಮಿನಿ ಆಫ್ರಿಕನ್ ಗ್ರಾಮವಾದ ಜಂಬೂರ್‌ನ ಜನರು ತಮ್ಮ ವಿಶೇಷ ಬುಡಕಟ್ಟು ಬೂತ್‌ನಲ್ಲಿ ಮತ ಚಲಾವಣೆಗೆ ಅವಕಾಶ ಸಿಕ್ಕಿರುವುದನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಿದರು.
Gujarat Election 2022: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಫ್ರಿಕನ್ನರ ಸಂಭ್ರಮಾಚರಣೆ- ವಾಚ್ ವಿಡಿಯೋ  title=
Gujarat election (Image Screen Grab From ANI)

Gujarat Election 2022: ಇಂದು ಗುಜಾರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಗುಜರಾತ್ ರಾಜ್ಯದ 18 ಜಿಲ್ಲೆಗಳ 182 ಸ್ಥಾನಗಳ ಪೈಕಿ ಮೊದಲ ಹಂತದಲ್ಲಿ  89 ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.  ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ  ಗುಜರಾತ್‌ನ ಮಿನಿ ಆಫ್ರಿಕನ್ ಗ್ರಾಮವಾದ ಜಂಬೂರ್‌ನಲ್ಲಿ ನೆಲೆಸಿರುವ ಆಫ್ರಿಕನ್ನರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಈ ಗ್ರಾಮಸ್ಥರಿಗೆ ಇದೇ ಮೊದಲ ಬಾರಿಗೆ ವಿಶೇಷ ಬುಡಕಟ್ಟು ಮತಗಟ್ಟೆಯಲ್ಲಿ ಮತ ಚಲಾಯಿಸುವ ಅವಕಾಶ ಸಿಕ್ಕಿದ್ದು ಇವರ ಚುನಾವಣಾ ಉತ್ಸಾಹ ಇಮ್ಮಡಿಗೊಂಡಿದೆ.

ಗುಜರಾತ್‌ನ ಜಂಬೂರ್ ಗ್ರಾಮದಲ್ಲಿ ಆಫ್ರಿಕನ್ ಜನರು ವಾಸಿಸುತ್ತಿದ್ದಾರೆ. ಭಾರತದ ಮಿನಿ ಆಫ್ರಿಕನ್ ವಿಲೇಜ್ ಜಂಬೂರ್ (ಅಫಿಕಾನ್ಸ್ ಜಂಬೂರ್ ಗ್ರಾಮ) ಜನರು ಇದೇ ಮೊದಲ ಬಾರಿಗೆ ಅವರ ನಿರ್ದಿಷ್ಟ ಬುಡಕಟ್ಟು ಮತಗಟ್ಟೆಯಲ್ಲಿ  ಮತ ಚಲಾಯಿಸುತ್ತಾರೆ. ಮತದಾನಕ್ಕೂ ಮುನ್ನ ಗುಜರಾತ್‌ನ ಮಿನಿ ಆಫ್ರಿಕನ್ ಗ್ರಾಮವಾದ ಜಂಬೂರ್‌ನ ಜನರು ತಮ್ಮ ವಿಶೇಷ ಬುಡಕಟ್ಟು ಬೂತ್‌ನಲ್ಲಿ ಮತ ಚಲಾವಣೆಗೆ ಅವಕಾಶ ಸಿಕ್ಕಿರುವುದನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಿದರು. 

ಇದನ್ನೂ ಓದಿ- ಮಾರ್ಚ್ 2024 ರ ವೇಳೆಗೆ ಏರ್ ಇಂಡಿಯಾ, ವಿಸ್ತಾರಾ ವಿಲೀನ

ಪ್ರಜಾಪ್ರಭುತ್ವದ ಮಹಾ ಹಬ್ಬದ ಸಂದರ್ಭದಲ್ಲಿ ಆಫ್ರಿಕನ್ ಸಮುದಾಯದ ಈ ಜನರ ಸಡಗರ, ಸಂಭ್ರಮ ಹೇಳತೀರದಾಗಿದೆ. ಮತದಾನದ ಹೊಸ್ತಿಲಲ್ಲಿ ಇವರಿಂದ ಆರಂಭವಾದ ಸಂಭ್ರಮ ತಡರಾತ್ರಿಯವರೆಗೂ ನಡೆಯಿತು. ನಮ್ಮ ವಿಶೇಷ ಬುಡಕಟ್ಟು ಬೂತ್‌ನಲ್ಲಿ ಪ್ರಥಮ ಬಾರಿಗೆ ಮತ ಹಾಕಲಿದ್ದೇವೆ  ಎಂದು ಈ ಆಫ್ರಿಕನ್ ಜನರು ಕುಣಿದು ಕುಪ್ಪಳಿಸುತ್ತಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ- Sabarimala Income: ದಾಖಲೆ ಪ್ರಮಾಣದಲ್ಲಿ ಶಬರಿಮಲೆಗೆ ಹರಿದು ಬಂತು ಆದಾಯ: 10 ದಿನಗಳಲ್ಲಿ 50 ಕೋಟಿ ಸಂಗ್ರಹ!

ಸಿದ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಜಂಬೂರು ಗ್ರಾಮದ ಹಿರಿಯ ನಾಗರಿಕ ರೆಹಮಾನ್ ಮಾತನಾಡಿ, 'ಚುನಾವಣಾ ಆಯೋಗವು (ಇಸಿ) ನಮಗೆ ಮತ ಚಲಾಯಿಸಲು ವಿಶೇಷ ಬೂತ್ ಸ್ಥಾಪಿಸಿರುವುದು ಗೌರವ ಮತ್ತು ಸಂತೋಷದ ಸಂಗತಿಯಾಗಿದೆ. ನಾವು ಈ ಗ್ರಾಮದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಇಂತಹ ಅವಕಾಶ ನಮಗೆ ದೊರಕಿದೆ. ನಮ್ಮ ಪೂರ್ವಜರು ಆಫ್ರಿಕಾದಿಂದ ಬಂದವರು ಮತ್ತು ನಾವು ಹಲವು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದೇವೆ. ಜುನಾಗಢದಲ್ಲಿ ಕೋಟೆಯನ್ನು ಕಟ್ಟುವಾಗ ನಮ್ಮ ಪೂರ್ವಜರು ಇಲ್ಲಿ ಕೆಲಸ ಮಾಡಲು ಬಂದಿದ್ದರು. ಮೊದಲು ರತನ್ ಪುರ ಗ್ರಾಮದಲ್ಲಿ ನೆಲೆಸಿ ಕ್ರಮೇಣ ಈ ಗ್ರಾಮಕ್ಕೆ ಬಂದು ನೆಲೆಸಿದ್ದೇವೆ ಎಂದವರು ತಿಳಿಸಿದರು. ಕುತೂಹಲಕಾರಿ ವಿಷಯವೆಂದರೆ ಇವರೆಲ್ಲರೂ ಅತ್ಯುತ್ತಮವಾದ ಗುಜರಾತಿ ಭಾಷೆಯನ್ನು ಮಾತನಾಡುತ್ತಾರೆ. 

Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Android Link - https://bit.ly/3AClgDd
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News