Home maid mixing urine in food : ಉತ್ತರ ಪ್ರದೇಶದ ಗಾಜಿಯಾಬಾದ್ನ ಮನೆಯೊಂದರಲ್ಲಿ ಆಘಾತಕಾರಿ ಸಂಗತಿ ನಡೆದಿದೆ. ಮನೆ ಕೆಲಸದಾಕೆ ದುಷ್ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಅಡುಗೆ ಕೆಲಸದವಳು ಹಿಟ್ಟಿನಲ್ಲಿ ಮೂತ್ರ ಬೆರೆಸಿರುವುದು ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಮನೆ ಕೆಲಸದಾಕೆ, ಪಾತ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿ, ಅಡುಗೆ ಮಾಡಲು ಬಳಸುತ್ತಿರುವುದನ್ನು ಕಾಣಬಹುದು. ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಗಾಜಿಯಾಬಾದ್ನ ಕ್ರಾಸಿಂಗ್ ರಿಪಬ್ಲಿಕ್ ಸೊಸೈಟಿಯಲ್ಲಿ ಈ ಆಘಾತಕಾರಿ ಅಸಹ್ಯಕರ ನಡೆದಿದೆ.
ಇದನ್ನೂ ಓದಿ:3 ತಿಂಗಳಿನಿಂದ ಉಪಟಳ ಕೊಡುತ್ತಿದ್ದ ಚಿರತೆ ಬೋನಿಗೆ ಸೆರೆ
ಕುಟುಂಬದಲ್ಲಿ ಎಲ್ಲರೂ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದರು, ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿದಾಗ, ಅವರಿಗೆ ಎನಾಗಿದೆ ಅಂತ ಕಂಡುಹಿಡಿಯಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಈ ವೇಳೆ ಅವರು ತಿನ್ನುತ್ತಿರುವ ಆಹಾರದ ಮೇಲೆ ಅನುಮಾನ ಬಂದು ಅಡುಗೆ ಕೋಣೆಯಲ್ಲಿ ರಹಸ್ಯ ಕ್ಯಾಮರಾ ಇಟ್ಟು, ಏನಾಗುತ್ತಿದೆ ಎಂದು ಪತ್ತೆ ಹಚ್ಚಿದ್ದಾರೆ.
ವಿಡಿಯೋ ನೋಡಿದ ಮನೆ ಮಂದಿ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.. ಅಕ್ಟೋಬರ್ 14 ರಂದು ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಘಟನೆ ಕಂಡ ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮತ್ತೆ ಮಳೆ ಕಂಟಕ ಫಿಕ್ಸ್ !ಹವಾಮಾನ ಇಲಾಖೆ ಮುನ್ಸೂಚನೆ
ಕೆಲಸದಾಕೆ ಕಳೆದ 8 ವರ್ಷಗಳಿಂದ ಮನೆಯವರಿಗೆ ಅಡುಗೆ ಮಾಡುತ್ತಿದ್ದಳು ಎನ್ನಲಾಗುತ್ತಿದೆ. ಇತ್ತೀಚೆಗೆ ಈ ಕುಟುಂಬ ಲಿವರ್ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿತ್ತು ಎಂದು ತಿಳಿದು ಬಂದಿದೆ.. ಇನ್ನು ಮನೆ ಕೆಲಸದಾಕೆ, ರೊಟ್ಟಿ ತಯಾರಿಕೆಗೆ ಬಳಸುವ ಹಿಟ್ಟಿನಲ್ಲಿ ನೀರಿನೊಂದಿಗೆ ಮೂತ್ರ ಬೆರೆಸುತ್ತಿದ್ದ ವಿಷಯ ಪತ್ತೆಯಾಗಿದೆ.
A shocking incident has come to light from #Ghaziabad, #UttarPradesh, where a maid has been arrested for preparing food with her urine. The house help identified as #Reena was caught red handed in the kitchen urinating in a vessel.
The incident occurred on Monday and was… pic.twitter.com/5Hi1YiKIZz
— Hate Detector 🔍 (@HateDetectors) October 16, 2024
ಕುಟುಂಬದವರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಲು ನಿರ್ಧರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮನೆಕೆಲಸದಾಕೆ ರೀನಾಳನ್ನು ಬಂಧಿಸಲಾಗಿದೆ. ಮೊದಲು ವಿಚಾರಣೆ ವೇಳೆ, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದಳು, ವಿಡಿಯೋವನ್ನು ತೋರಿಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಸಣ್ಣಪುಟ್ಟ ತಪ್ಪುಗಳಿಗೂ ಮಾಲೀಕರು ಬೈಯುತ್ತಿದ್ದರು ಅದಕ್ಕೆ ಹೀಗೆ ಮಾಡಿದೆ ಎಂದು ರೀನಾ ಹೇಳಿದ್ದಾಳೆ.. ಪಿಎನ್ಎಸ್ ಸೆಕ್ಷನ್ 272 (ಮಾರಣಾಂತಿಕ ಕಾಯಿಲೆ ಹರಡುವ ಮಾರಣಾಂತಿಕ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ