ಜೌನ್ಪುರ(ಉತ್ತರಪ್ರದೇಶ): ಪ್ರೀತಿಗೆ ಜಾತಿ-ಧರ್ಮ ಮತ್ತು ವಯಸ್ಸಿನ ಅಂತರವಿಲ್ಲವೆಂದು ಅನೇಕರು ಲವ್ ಮಾಡಿ ಮದುವೆಯಾಗುತ್ತಾರೆ. ‘ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿ ಕುರುಡಲ್ಲ’ ಎಂಬ ಮಾತಿನಂತೆ ಉತ್ತರಪ್ರದೇಶದಲ್ಲಿ ವಿಚಿತ್ರ ಮದುವೆಯೊಂದು ನಡೆದಿದೆ. ಇಲ್ಲಿ ಚಿಕ್ಕಪ್ಪನನ್ನೇ ಪ್ರೀತಿಸಿ ಮಗಳು ಮದುವೆಯಾಗಿದ್ದಾಳೆ.
ಹೌದು, ನೀವು ನಂಬಲೇಬೇಕು, ಇದು ನಿಜವಾಗಿಯೂ ನಡೆದಿರುವ ಘಟನೆ. ಉತ್ರರಪ್ರದೇಶದ ಜೌನ್‍ಪುರ ಜಿಲ್ಲೆಯ ತಾಜುದ್ದೀನ್‌ಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗಳನ್ನೇ ಮದುವೆಯಾಗಿದ್ದಾನೆ. ಈ ವಿವಾಹಕ್ಕೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಆದರೆ ಇಬ್ಬರೂ ತಮ್ಮ ಕುಟುಂಬಗಳ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.
ಇದನ್ನೂ ಓದಿ: Viral Video: ಈ ಬಾಬಾ ತಲೆ ಮೇಲೆ ಬೆಳೆಯೋದು ಕೂದಲಲ್ಲ, ಗಿಡಗಳು..!
ಶುಭಂ ಎನ್ನುವ ವ್ಯಕ್ತಿ ತನ್ನ ಸ್ವಂತ ಅಣ್ಣನ ಮಗಳಾದ ರಿಯಾಳನ್ನು ಮಡಿಯಾಹುನ್ ಕೊಟ್ವಾಲಿ ಪ್ರದೇಶದಲ್ಲಿರುವ ಹನುಮಾನ್ ಮಂದಿರದಲ್ಲಿ ಮದುವೆಯಾಗಿದ್ದಾನೆ. ಇವರಿಬ್ಬರು ಸಂಬಂಧದಲ್ಲಿ ತಂದೆ ಮಗಳು ಆಗಬೇಕು. ಹೀಗಾಗಿ ಆರಂಭದಲ್ಲಿ ಕುಟುಂಬವು ಇವರ ಸಂಬಂಧವನ್ನು ವಿರೋಧಿಸಿತ್ತು. ಆದರೆ ಅಂತಿಮವಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.
ಕುಟುಂಬಸ್ಥರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಈ ಜೋಡಿಯ ಮದುವೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಇವರಿಬ್ಬರ ಸಂಬಂಧದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ನಾವಿಬ್ಬರೂ ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ, ಹೀಗಾಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆಂದು ಶುಭಂ ಮತ್ತು ರಿಯಾ ಪೋಷಕರಿಗೆ ತಿಳಿಸಿದ್ದಾರೆ. ಇದರಿಂದ ಆಘಾತಗೊಂಡ ಮನೆಯವರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ವಿಧಿಯಿಲ್ಲದೆ ಇವರ ಮದುಗೆ ಒಪ್ಪಿಕೊಂಡಿದ್ದಾರೆ. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಾರ್ಕ್ ಬಿಟ್ಟು ಮೆಟ್ರೋದಲ್ಲಿ ರೋಮ್ಯಾನ್ಸ್ ಶುರು ಮಾಡಿದ ಲವ್ ಬರ್ಡ್ಸ್..! ವಿಡಿಯೋ ವೈರಲ್..
ವರದಿಗಳ ಪ್ರಕಾರ, ಶುಭಂ ಅವರು ಕಳೆದ 3 ವರ್ಷಗಳಿಂದ ರಿಯಾಳನ್ನು ಪ್ರೀತಿಸುತ್ತಿದ್ದರಂತೆ. ಹೀಗಾಗಿ ಇಬ್ಬರೂ ತಮ್ಮ ಸ್ವ ಇಚ್ಛೆಯಿಂದ ಮದುವೆಯಾಗಿದ್ದಾರೆನ್ನಲಾಗಿದೆ. ಈ ಮದುವೆಯನ್ನು ಗ್ರಾಮಸ್ಥರು ಮತ್ತು ಮುಖಂಡರು ಖಂಡಿಸಿದ್ದು, ಇದು ಧರ್ಮ ಮತ್ತು ಹಿಂದೂ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ. ನಮ್ಮ ಧರ್ಮದ ಪ್ರಕಾರ ಅಣ್ಣನ ಮಗಳು ಆತನಿಗೂ ಮಗಳು, ಇದು ಪಾಪದ ಮದುವೆ, ಇದನ್ನು ಸಮಾಜ ಒಪ್ಪಲು ಸಾಧ್ಯವಿಲ್ಲವೆಂದು ಕಿಡಿಕಾರಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.