Wedding Viral Video: ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ವಿಡಿಯೋಗಳು ನೋಡುಗರ ಗಮನ ಸೆಳೆಯುತ್ತವೆ. ಮದುವೆ ಸಮಾರಂಭಗಳಲ್ಲಿನ ಫನ್ನಿ ಘಟನೆಗಳು, ಚಿತ್ರ-ವಿಚಿತ್ರ ಘಟನೆಗಳು, ಆಸಕ್ತಿದಾಯಕ ದೃಶ್ಯಗಳು ವೈರಲ್ ಆಗುತ್ತಿರುತ್ತವೆ. ಇದೀಗ ಮತ್ತೊಂದು ಮದುವೆ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ನೋಡುಗರು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದೆ.
ಸದ್ಯ ವೈರಲ್ ಆಗಿರೋ ಈ ವಿಡಿಯೋದಲ್ಲಿ ವೇದಿಕೆ ಮೇಲೆಯೇ ವರನಿಗೆ ವಧು ಶಾಕ್ ನೀಡಿದ್ದಾಳೆ. ಆದರೆ ವಧುವಿನ ಈ ವರ್ತನೆಗೆ ನೆಟಿಜನ್ಸ್ ಕೋಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ವರನಿಗೆ ಚಮಕ್ ನೀಡಲು ಹೋದ ವಧು ಆತನನ್ನು ಕೆಳಗೆ ಬೀಳಿಸಿದ್ದಾಳೆ. @ArpitKushwah ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: 28 ಸಾವಿರ ರೂ.ಗೆ 1 ಲೋಟ ಕಾಫಿ..! ಇದರ ವಿಶೇಷತೆ ಕೇಳಿದ್ರೆ ಸಾಲ ಮಾಡಿಯಾದ್ರೂ ಮುಗಿಬಿದ್ದು ಕುಡಿತೀರಾ..
Aage kya hoga iska 😂 pic.twitter.com/cFXBteOPRV
— Arpit~Kushwah (@ArpitKushwah3) November 27, 2024
ವೈರಲ್ ವಿಡಿಯೋ ಪ್ರಕಾರ, ಮದುವೆ ಸಮಾರಂಭ ನಡೆಯುತ್ತಿದೆ. ಈ ವೇಳೆ ವರ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತಿದ್ದನು. ವಧು ಆಗಷ್ಟೇ ಮೆಟ್ಟಿಲುಗಳನ್ನು ಏರಿ ಮೇಲೆ ಬರುತ್ತಿದ್ದಳು. ಈ ವೇಳೆ ವರ ಆಕೆಯ ಬಳಿ ಹೋಗಿ ಕೈ ಹಿಡಿಯುವಂತೆ ಮುಂದೆ ಬಂದಿದ್ದಾನೆ. ಆದರೆ ವಧು ವರನ ಕೈ ಹಿಡಿದು ಬಲವಾಗಿ ಎಳೆದು ಕೆಳಗೆ ಬೀಳಿಸಿದ್ದಾಳೆ. ವಧು ವೇದಿಕೆ ಮೇಲೆ ಹೋಗಿ ನಕ್ಕರೆ ಕೆಳಗೆ ಬಿದ್ದ ವರ ಪೆಚ್ಚಾಗಿ ಸಪ್ಪೆ ಮೋರೆ ಹಾಕಿದ್ದಾನೆ.
ವರನನ್ನು ವೇದಿಕೆಯಿಂದ ಕೆಳಕ್ಕೆ ಬೀಳಿಸಿದ ವಧು ನಗುತ್ತಿದ್ದರೆ, ಸುತ್ತಮುತ್ತಲು ನೆರೆದಿದ್ದ ಜನರು ಆಶ್ಚರ್ಯದಿಂದ ಈ ದೃಶ್ಯವನ್ನು ನೋಡುತ್ತಿದ್ದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ವಿಡಿಯೋವನ್ನು ಇದುವರೆಗೆ 8.5 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಮುಸ್ಲಿಂ ಆಳ್ವಿಕೆ ಪ್ರಾರಂಭವಾಗಲಿದೆ..! ಸಂಚಲನ ಸೃಷ್ಟಿಸುತ್ತಿದೆ ಬಾಬಾ ವಂಗಾ ಭವಿಷ್ಯವಾಣಿ
ಕೆಲವರು ವಧುವಿನ ವರ್ತನೆಯನ್ನು ಖಂಡಿಸಿ ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಮದುವೆ ಅಂದ್ರೆ ಇದೇ ನೋಡಿ ವಧುವಿನಿಂದ ವರನಿಗೆ ʼಚಮಕ್ʼ ಅಂತಾ ಕೆಲವರು ತಮಾಷೆ ಮಾಡಿದ್ದಾರೆ. ಈ ವಿಡಿಯೋ ನೋಡಿದ ಬಹುತೇಕರು ʼನಾವು ನಕ್ಕು ನಕ್ಕು ಸುಸ್ತಾಗಿದ್ದೇವೆʼ ಅಂತಾ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.