ಬೀಚಿಂಗ್: ನೈಋತ್ಯ ಚೀನಾದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಎರಡು ಪ್ರಬಲ ಭೂಕಂಪದಲ್ಲಿ ಸುಮಾರು 12 ಮಂದಿ ಸಾವನ್ನಪ್ಪಿದ್ದು, 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮೊದಲ ಭೂಕಂಪವು ಯಿಬಿನ್ ನಗರದ ಚಾನ್ನಿಂಗ್ ಕೌಂಟಿಯಲ್ಲಿ ಸೋಮವಾರ ರಾತ್ರಿ 10.55ರ ಸಂದರ್ಭದಲ್ಲಿ ರಿಕ್ಟರ್ ಮಾಪಕ 6.0 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು, ಎರಡನೇ ಭೂಕಂಪ ಮಂಗಳವಾರ ಮುಂಜಾನೆ 5.30ರಲ್ಲಿ ಸಂಭವಿಸಿದೆ ಎಂದು ಚೀನಾ ಭೂಕಂಪ ಕೇಂದ್ರ ತಿಳಿಸಿದೆ.
ಈಗಾಗಲೇ ರಕ್ಷಣಾ ಸಚಿವಾಲಯವು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಸಿಬ್ಬಂದಿಯನ್ನು ನಿಯೋಜಿಸಿದೆ. ರಕ್ಷಣಾ ಕಾರ್ಯಾಚರಣೆಗಾಗಿ 63 ಅಗ್ನಿಶಾಮಕ ವಾಹನಗಳು ಮತ್ತು ಸಿಚುವಾನ್ ಪ್ರಾಂತ್ಯಕ್ಕೆ ಸುಮಾರು 302 ಅಗ್ನಿಶಾಮಕ ದಳಗಳನ್ನು ಕರೆದೊಯ್ಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.