24 ಸಾವಿರ ಸಣ್ಣ ಡ್ಯಾಮ್ ಗಳಿಂದ ಬತ್ತುತ್ತಿದೆ ಚೀನಾದ ಯಾಂಗ್ಟ್ಜೆನದಿ

   

Last Updated : Jun 26, 2018, 12:26 AM IST
24 ಸಾವಿರ ಸಣ್ಣ ಡ್ಯಾಮ್ ಗಳಿಂದ ಬತ್ತುತ್ತಿದೆ ಚೀನಾದ ಯಾಂಗ್ಟ್ಜೆನದಿ title=
Photo courtesy: ANI

ಹಾಂಗ್ ಕಾಂಗ್ : ಚೀನಾದ ಯಾಂಗ್ಟ್ಜೆನದಿ ಮತ್ತು ಅದರ ಉಪ ನದಿಗಳು ಸಣ್ಣ ಅಣೆಕಟ್ಟುಗಳ ನಿರ್ಮಾಣದಿಂದ ಬತ್ತುತ್ತಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ನ್ಯಾಷನಲ್ ಆಡಿಟ್ ಆಫೀಸ್ ನಡೆಸಿರುವ ಅಧ್ಯಯನದಲ್ಲಿ ಈ ಅಂಶವು ಬೆಳಕಿ ಬಂದಿದ್ದು, ಚೀನಾದಲ್ಲಿ ನೀಲಿ ನದಿ ಎಂದು ಕರೆಯಲ್ಪಡುವ ಯಾಂಗ್ಟ್ಜೆ ನದಿಯು ಸಾವಿರಾರು ಸಣ್ಣ ಮಟ್ಟದ ಅಣೆಕಟ್ಟುಗಳನ್ನು ನದಿಯುದ್ದಕ್ಕೂ ಕಟ್ಟುತ್ತಿರುವುದರಿಂದ ನದಿ ಬರಿದಾಗಿ ಒಣಗುತ್ತಿದೆ ಎನ್ನುವ ಆಘಾತಕಾರಿ ಅಂಶವನ್ನು ಈ ಅಧ್ಯಯನ ಕಂಡು ಹಿಡಿದಿದೆ.

2017 ರ ವರದಿಯನ್ವಯ  NAO ದತ್ತಾಂಶವು ನದಿಯುದ್ದಕ್ಕೂ ಸುಮಾರು 24,000 ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದೆ. ಇವುಗಳಲ್ಲಿ ಬಹುತೇಕ ಅಣೆಕಟ್ಟುಗಳು ಹೈಡ್ರಾಲಿಕ್ ಕೃತಿಗಳು ಸಣ್ಣ ಮತ್ತು ಮಧ್ಯಮ ಗಾತ್ರದ್ದಾಗಿವೆ. ಪ್ರತಿಯೊಂದರ ನಡುವಿನ ಅಂತರ ನೂರು ಮೀಟರ್ ಎಂದು ಹೇಳಲಾಗಿದೆ, ಇದರಿಂದಾಗಿ ಸುಮಾರು 300 ಸಣ್ಣ ನದಿಗಳು ನಿರಂತರವಾಗಿ ಒಣಗುತ್ತವೆ ಎಂದು  ತಿಳಿಸಿದೆ.

6,000 ಕಿಲೋಮೀಟರ್ ಉದ್ದದ ಯಾಂಗ್ಟ್ಜೆ ಈ ಕೃತಕ ಅಣೆಕಟ್ಟುಗಳ ನಿರ್ಮಾಣದಿಂದಾಗಿ ಅದರ ಅಸ್ತಿತ್ವಕ್ಕೆ ಈಗ ಕುತ್ತು ಬಂದಿದೆ ಎಂದು ಅಧ್ಯಯನ ತಿಳಿಸಿದೆ.

 

 

 

Trending News