ನವದೆಹಲಿ : ಉಕ್ರೇನ್ನಲ್ಲಿ (Ukraine)ಯುದ್ಧದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದೆ (Oxygen Crisis). ಕಿವಾ (Kyiv)ಸೇರಿದಂತೆ ಇತರ ನಗರಗಳ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ತಕ್ಷಣವೇ ತಲುಪಿಸದಿದ್ದರೆ (Oxygen Supply), ಪರಿಸ್ಥಿತಿಯು ತುಂಬಾ ಅಪಾಯಕಾರಿಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದೆ. WHO ಪ್ರಕಾರ, ಉಕ್ರೇನ್ನಲ್ಲಿ 600 ಆಸ್ಪತ್ರೆಗಳಿವೆ. ಅಲ್ಲಿ ಇನ್ನೂ 1700 ಕೊರೊನಾ ರೋಗಿಗಳು ದಾಖಲಾಗಿದ್ದಾರೆ.
ಉಕ್ರೇನ್ನಲ್ಲಿ ಆಕ್ಸಿಜನ್ ಸಮಸ್ಯೆ :
ಕರೋನಾ ರೋಗಿಗಳನ್ನು ಹೊರತುಪಡಿಸಿ (Corona Patient), ಉಕ್ರೇನ್ನಲ್ಲಿ ನವಜಾತ ಶಿಶುಗಳು, ಗರ್ಭಿಣಿಯರು ಮತ್ತು ವಯಸ್ಸಾದವರಿಗೆ ಕಾಲಕಾಲಕ್ಕೆ ಆಮ್ಲಜನಕದ ಅಗತ್ಯವಿರಬಹುದು ಎಂದು WHO ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಯುದ್ಧದ ಭರಾಟೆಯಲ್ಲಿ ಜನರ ಮನಸ್ಥಿತಿಯ ಮೇಲೂ ಪರಿಣಾಮ ಬೀರಿ ಪರಿಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ : ಪರಮಾಣು ನಿರೋಧಕ ಪಡೆಗಳಿಗೆ ಹೈಅಲರ್ಟ್ ನಲ್ಲಿರಲು ಸೂಚಿಸಿದ ಪುಟಿನ್..!
ಈ ವಿಷಮ ಪರಿಸ್ಥಿತಿಯಿಂದಾಗಿ ಅಲ್ಲಿನ ಎಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಎದುರಾಗಿದೆ (Oxygen Crisis). ಆಕ್ಸಿಜನ್ ಜನರೇಟರ್ ಪ್ಲಾಂಟ್ನಿಂದ ಆಸ್ಪತ್ರೆಗೆ ಆಮ್ಲಜನಕ ಸಾಗಿಸುವಲ್ಲಿಯೂ ಲಾರಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ.
ವಿದ್ಯುತ್ ಬಿಕ್ಕಟ್ಟು ಕೂಡ ತೀವ್ರಗೊಂಡಿದೆ :
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ 100 ಗಂಟೆಗಳು ಕಳೆದಿವೆ (Russia Ukraine war). ಇಂದು ಐದನೇ ದಿನದ ದಾಳಿ ನಡೆದಿದೆ. ದೇಶಾದ್ಯಂತ ಬಂದಿರುವ ಈ ಬಿಕ್ಕಟ್ಟಿನ ಮಧ್ಯೆ ಉಕ್ರೇನ್ನಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ಇದರಿಂದಾಗಿ ಆಸ್ಪತ್ರೆಗಳು ಅಂದರೆ ಆರೋಗ್ಯ ಸೇವೆಗಳ ಮೇಲೆ ಗಂಭೀರ ಪರಿಣಾಮ ಕಾಣಿಸಿಕೊಂಡಿದೆ. ಅದೇ ರೀತಿ ಆಂಬ್ಯುಲೆನ್ಸ್ ಮೂಲಕ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವಾಗ ಅವರ ಮೇಲೆ ಗುಂಡು ಹಾರಿಸುವ ಅಪಾಯವೂ ಹೆಚ್ಚಾಗಿದೆ.
ಇದನ್ನೂ ಓದಿ : Russia Ukraine War: ಅಂತರಾಷ್ಟ್ರೀಯ ಕೋರ್ಟ್ ಗೆ ಮೊರೆ ಹೋದ ಉಕ್ರೇನ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.