ರಷ್ಯಾ: ರಷ್ಯಾದ ಪೆರ್ಮ್ ಸ್ಟೇಟ್ ಯೂನಿವರ್ಸಿಟಿ(Russia's Perm University)ಯಲ್ಲಿ ಅಪರಿಚಿತನೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, 8 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಯೂನಿವರ್ಸಿಟಿಯ ಕಟ್ಟಡದೊಳಗೆ ಪ್ರವೇಶಿಸಿದ ವ್ಯಕ್ತಿಯೊಬ್ಬ ಇದಕ್ಕಿದ್ದಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ದುಷ್ಕರ್ಮಿಯ ಗುಂಡಿನ ದಾಳಿಗೆ ಶಿಕ್ಷಣ ಸಂಸ್ಥೆಯೊಳಗಿದ್ದ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಯೂನಿವರ್ಸಿಟಿ ಪ್ರವೇಶಿಸಿದ ದುಷ್ಕರ್ಮಿ ಗುಂಡಿನ ದಾಳಿ ನಡೆಸುತ್ತಿದ್ದಂತೆ ಹಲವಾರು ವಿದ್ಯಾರ್ಥಿಗಳು ತಮ್ಮ ಕ್ಲಾಸ್ ರೂಂಗೆ ಒಳಗಿನಿಂದ ಬೀಗ ಹಾಕಿಕೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳು ತಮ್ಮ ಜೀವವನ್ನು ಉಳಿಸಿಕೊಳ್ಳಲು ಕಟ್ಟಡದ ಕಿಟಕಿಗಳ ಮೂಲಕ ಜಿಗಿದು ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಮೇಲಿನಿಂದ ಕೆಳಕ್ಕೆ ಜಿಗಿದ ಕೆಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳು ಕಿಟಕಿಯಿಂದ ಜಿಗಿಯುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿವೆ.
reports of another school shooting in Russia; this time at Perm State University. Russian agencies say there are casualties. pic.twitter.com/jkeyGDLO05
— Mike Eckel (@Mike_Eckel) September 20, 2021
ಇದನ್ನೂ ಓದಿ: SpaceX Tour: ಕಕ್ಷೆಯಲ್ಲಿ ಯಶಸ್ವಿಯಾಗಿ 3 ದಿನ ಕಳೆದು ಭೂಮಿಗೆ ಮರಳಿದ ಪ್ರವಾಸಿಗರು..!
ಘಟನೆ ನಡೆದ ಸ್ಥಳದ ವಿಡಿಯೋ ತುಣುಕನ್ನು ರಷ್ಯಾ(Russia)ದ ಸುದ್ದಿ ಸಂಸ್ಥೆ TASS ಬಿಡುಗಡೆ ಮಾಡಿದೆ. ಗುಂಡಿನ ದಾಳಿಯಲ್ಲಿ ಕೆಲವು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದ್ದು, ನಿಖರವಾಗಿ ಎಷ್ಟು ಜನರು ಸಾವನ್ನಪ್ಪಿದ್ದಾರೆಂಬ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
#UPDATE | Eight people were confirmed killed, six injured in a shooting on the campus of a university in the Russian city of Perm: Russia's RT
— ANI (@ANI) September 20, 2021
‘ರಷ್ಯಾದಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಅಪರಿಚಿತ ದುಷ್ಕರ್ಮಿ ಮಾರಕವಲ್ಲದ ಬಂದೂಕು ಬಳಿಸಿ ದಾಳಿ ನಡೆಸಿದ್ದಾನೆ’ ಅಂತಾ ಕೆಲ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಕೆಲ ಮಾಧ್ಯಮಗಳು ಅಪರಿಚಿತ ವ್ಯಕ್ತಿ ಮಾರಕ ಗನ್ ಬಳಸಿಯೇ ದಾಳಿ ನಡೆಸಿದ್ದಾನೆ ಎಂದು ತಿಳಿಸಿವೆ. TASS ಸುದ್ದಿಸಂಸ್ಥೆ ಪ್ರಕಾರ, ಪೆರ್ಮ್ ಸ್ಟೇಟ್ ಯೂನಿವರ್ಸಿಟಿ(Perm University)ಯ ಕಟ್ಟಡವೊಂದರಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಅಪರಿಚಿತ ವ್ಯಕ್ತಿ ಮನಬಂದಂತೆ ಗುಂಡು ಹಾರಿಸಿದ್ದಾನೆ. ಈ ವೇಳೆ ಭಯಭೀತರಾಗಿ ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ತಮ್ಮ ಕ್ಲಾಸ್ ರೂಂ ಬಾಗಿಲು ಮುಚ್ಚಿಕೊಂಡಿದ್ದಾರೆ. ಕೆಲವರು ಕಟ್ಟಡದ ಮೇಲಿಂದಲೇ ಹಾರಿದ್ದಾರೆ.
ಇದನ್ನೂ ಓದಿ: ಅಮೇರಿಕಾವು ತಾಲಿಬಾನ್ ನ್ನು ಪರಿಗಣಿಸದಿದ್ದರೆ ಪರಿಸ್ಥಿತಿ ಹದಗೆಡುತ್ತದೆ-ಇಮ್ರಾನ್ ಖಾನ್
ಘಟನೆ ಬಳಿಕ ಭದ್ರತಾ ಸಿಬ್ಬಂದಿ ಯೂನಿವರ್ಸಿಟಿ ಕ್ಯಾಂಪಸ್ಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಪರಿಚಿತ ವ್ಯಕ್ತಿ ಏಕೆ ಗುಂಡಿನ ದಾಳಿ ನಡೆಸಿದ್ದಾನೆಂಬುದರ ಬಗ್ಗೆ ಸದ್ಯ ತನಿಖೆ ನಡೆಯುತ್ತಿದೆ. ಘಟನೆಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ