ನವದೆಹಲಿ: ಕೊರೊನಾ ವೈರಸ್ ಪ್ರಕೋಪದ ಇಂದಿನ ಕಾಲದಲ್ಲಿ ಬಾವಲಿ, ಮನುಷ್ಯರು ಹಾಗೂ ನಾಯಿ-ಬೆಕ್ಕುಗಳಿಗೆ ಕೊರೊನಾ ಸೋಂಕು ತಗುಲಿರುವ ಕುರಿತಾದ ಸುದ್ದಿಗಳನ್ನು ನೀವು ಕೇಳಿರಬಹುದು. ಆದರೆ ಆಫ್ರಿಕಾದ ದೇಶವೊಂದರಲ್ಲಿ ಮೇಕೆ ಹಾಗೂ ಹಣ್ಣುಗಳಿಗೂ ಕೂಡ ಕೊರೊನಾ ಸೋಂಕು ತಗುಲಿದೆ ಎಂದರೆ ನೀವು ನಂಬುತ್ತೀರಾ? ಹೌದು, ಇದು ನಿಜ
ತಾಂಜಾನಿಯಾದಲ್ಲಿರುವ ಒಂದು ಮೇಕೆ ಹಾಗೂ ಪಾಪಾ ಹೆಸರಿನ ಒಂದು ವಿಶಿಷ್ಟ ಹಣ್ಣು ಕೊರೊನಾ ಟೆಸ್ಟ್ ಗೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿವೆ. ಆದರೆ, ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಅಲ್ಲಿನ ರಾಷ್ಟ್ರಾಧ್ಯಕ್ಷ ಜಾನ್ ಮಾಗುಫಲಿ, ಕೊರೊನಾ ಸೋಂಕಿಗೆ ಬಂದಿರುವ ಟೆಸ್ಟ್ ಕಿಟ್ ಗಳು ಸರಿಯಾಗಿಲ್ಲದೆ ಇರಬಹುದು ಎಂದು ಹೇಳಿ, ಟೆಸ್ಟ್ ಕಿಟ್ ಗಳ ತನಿಖೆ ಮಾಡುವಂತೆ ಆದೇಶ ನೀಡಿದ್ದಾರೆ.
ತಾಂಜಾನಿಯಾನಲ್ಲಿಯೂ ಕೂಡ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಲೇ ಇದೆ. ಅಷ್ಟೇ ಯಾಕೆ ಇತೀಚೆಗಷ್ಟೇ ಅಲ್ಲಿನ ಕೊರೊನಾ ರೋಗಿಗಳ ಸಂಖ್ಯೆಯ ಮಾಹಿತಿಯನ್ನು ಮುಚ್ಚಿಟ್ಟ ಕಾರಣ ಅಲ್ಲಿನ ರಾಷ್ಟ್ರಪತಿ ಮಾಗುಫಲಿ ಅವರನ್ನು ಕೂಡ ವಿಶ್ವಾದ್ಯಂತ ಮಾಧ್ಯಮಗಳು ಭಾರಿ ಟೀಕೆ ವ್ಯಕ್ತಪಡಿಸಿದ್ದವು,.
ಆದರೆ, ಇದೀಗ ಮೇಕೆ ಹಾಗೂ ಹಣ್ಣುಗಳೂ ಕೂಡ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆ, ಟೆಸ್ಟ್ ಕಿಟ್ ಗಳು ವಿದೇಶದಿಂದ ಬಂದಿದ್ದು, ಅವು ಸರಿಯಾಗಿಲ್ಲ. ಹೀಗಾಗಿ ನಾವು ಅವುಗಳ ತನಿಖೆಗಾಗಿ ಕಳುಹಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಸದ್ಯ ಮೇಕೆ ಹಾಗೂ ಹಣ್ಣುಗಳು ಕೊರೊನಾ ಪಾಸಿಟಿವ್ ಪ್ರತಿಕ್ರಿಯಿಸಿದ ಕಾರಣ ಅಲ್ಲಿನ ಸೇನೆ ವಿದೇಶಗಳಿಂದ ಬಂದ ಟೆಸ್ಟ್ ಕಿಟ್ ಗಳನ್ನು ತೀವ್ರ ತನಿಖೆಗೆ ಒಳಪದಿಸಿವೆ.
ಈ ಟೆಸ್ಟ್ ಕಿಟ್ ಗಳ ತಪಾಸಣೆಗಾಗಿ ಮೇಕೆ, ಪಾಪಾ ಹಣ್ಣು ಹಾಗೂ ಕುರಿ ಮಾದರಿಗಳ ಸ್ಯಾಂಪಲ್ ಪಡೆಯಲಾಗಿತ್ತು. ಆದರೆ, ಈ ಟೆಸ್ಟ್ ಕಿಟ್ ಗಳು ಮೇಕೆ ಹಾಗೂ ಪಾಪಾ ಹಣ್ಣಿನ ಸ್ಯಾಂಪಲ್ ಗಳಿಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿವೆ ಎಂಬುದು ಇಲ್ಲಿ ಉಲ್ಲೇಖನೀಯ.