India Blocks Pakistani YouTube Channels: - ಭಾರತ (India) ವಿರೋಧಿ ಪ್ರಚಾರ (Anti-India Propaganda) ಮತ್ತು ನಕಲಿ ಸುದ್ದಿಗಳನ್ನು (Fake News) ಹರಡುವಿಕೆಯ ಹಿನ್ನೆಲೆ ಪಾಕಿಸ್ತಾನದ (Pakistan) 20 ಯೂಟ್ಯೂಬ್ ಚಾನೆಲ್‌ಗಳು (YouTube Channels) ಮತ್ತು ಎರಡು ವೆಬ್‌ಸೈಟ್‌ಗಳನ್ನು (Websites) ನಿರ್ಬಂಧಿಸಲು ಕೇಂದ್ರ ಸರ್ಕಾರ (Central Government) ಸೋಮವಾರ ಆದೇಶಿಸಿದೆ. ಗುಪ್ತಚರ ಸಂಸ್ಥೆಗಳು (Intelligence Department) ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (Information And Broadcasting Ministry) ಪ್ರಯತ್ನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಪ್ರಕಾರ, ಈ ಚಾನೆಲ್‌ಗಳು ಕಾಶ್ಮೀರ, ಭಾರತೀಯ ಸೇನೆ, ಭಾರತದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳು, ರಾಮಮಂದಿರ, ಸಿಡಿಎಸ್ ಜನರಲ್ ರಾವತ್, ಇತ್ಯಾದಿಗಳ ಬಗ್ಗೆ ವಿತರಣೆಯಾಗುವ ವಿಷಯಗಳ ರಚನೆಯಲ್ಲಿ ತೊಡಗಿವೆ. ಅಷ್ಟೇ ಅಲ್ಲ ಈ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳು (Pakistani YouTube Channels) ರೈತರ ಚಳವಳಿ ಮತ್ತು ಸಿಎಎ ವಿರೋಧಿ ಪ್ರದರ್ಶನಗಳಂತಹ ವಿಷಯಗಳ ಕುರಿತು ವಿಷಯವನ್ನು ಪೋಸ್ಟ್ ಮಾಡುತ್ತಿವೆ ಮತ್ತು ಸರ್ಕಾರದ ವಿರುದ್ಧ ಅಲ್ಪಸಂಖ್ಯಾತರ ದಾರಿತಪ್ಪಿಸುತ್ತಿವೆ ಎಂದು ಹೇಳಲಾಗಿದೆ. ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಈ ಚಾನೆಲ್‌ಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಧಕ್ಕೆ ತರುವ ವಿಷಯವನ್ನು ಪೋಸ್ಟ್ ಮಾಡುತ್ತವೆ ಎಂಬ ಆತಂಕವೂ ಇದೆ ಎಂದು ಕೇಂದ್ರ ಹೇಳಿದೆ.
ಇದನ್ನೂ ಓದಿ-YouTube ವೀಡಿಯೋ ಗಳಿಂದ ತಿಂಗಳಿಗೆ 4 ಲಕ್ಷ ರೂ. ಗಳಿಸಿದ ನಿತಿನ್ ಗಡ್ಕರಿ..!
ನಯಾ ಪಾಕಿಸ್ತಾನ ಗುಂಪು ಅಪಪ್ರಚಾರ ನಡೆಸುತ್ತಿದೆ: ಸರ್ಕಾರ
ನಯಾ ಪಾಕಿಸ್ತಾನ್ ಗ್ರೂಪ್ (Naya Pakistan Group) ಭಾರತ ವಿರೋಧಿ ಪ್ರಚಾರವನ್ನು ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅದನ್ನು ಪಾಕಿಸ್ತಾನದಿಂದಲೇ ನಡೆಸಲಾಗುತ್ತಿತ್ತು. ಈ ಗುಂಪು ಅನೇಕ ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿದೆ ಮತ್ತು ಈ ಗುಂಪಿನ ಹೊರತಾಗಿ ಕೆಲ ಪ್ರತ್ಯೇಕ ಯೂಟ್ಯೂಬ್ ಚಾನೆಲ್‌ಗಳೂ ಕೂಡ ಇದ್ದು, ಅವು NPG ಗೆ ಸಂಬಂಧಿಸಿಲ್ಲ. ಈ ಚಾನೆಲ್‌ಗಳು 35 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, ಇದುವರೆಗೆ 55 ಕೋಟಿಗೂ ಹೆಚ್ಚು ವೀಕ್ಷಣೆಗಳು ತಮ್ಮ ವಿಡಿಯೋಗಳ ಮೂಲಕ ಪಡೆದುಕೊಂಡಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಪಾಕಿಸ್ತಾನದ ಸುದ್ದಿ ವಾಹಿನಿಗಳ ಆ್ಯಂಕರ್‌ಗಳ ಮೂಲಕ ನಯಾ ಪಾಕಿಸ್ತಾನ ಗುಂಪನ್ನು ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ-YouTube's new feature: ಯೂಟ್ಯೂಬ್ ಬಳಕೆದಾರರೇ ನೀವೂ ಕೂಡ ಈ ಅದ್ಭುತ ವೈಶಿಷ್ಟ್ಯವನ್ನು ಬಳಸಿದ್ದೀರಾ!
ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ವಿಷಯವು ಸೂಕ್ಷ್ಮವಾಗಿದೆ ಮತ್ತು ತಥ್ಯಾತ್ಮಕವಾಗಿ ತಪ್ಪಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದ್ದರಿಂದ, ತುರ್ತು ಅಧಿಕಾರವನ್ನು ಬಳಸಿಕೊಂಡು ಮಾಹಿತಿ ತಂತ್ರಜ್ಞಾನದ ನಿಯಮ 16 ರ ಅಡಿಯಲ್ಲಿ ಈ ಚಾನಲ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ-YouTube ವಿಡಿಯೋ ಮೂಲಕ ನೀವು ಮಿಲಿಯನೇರ್ ಆಗಬಹುದು : ಹೇಗೆ? ಇಲ್ಲಿ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.