H-1B Visa: ಭಾರತೀಯರಿಗೆ ಗುಡ್ ನ್ಯೂಸ್

H-1B ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು ಯುಎಸ್ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

Written by - Yashaswini V | Last Updated : Mar 30, 2023, 12:53 PM IST
  • H-1B ವೀಸಾಗೆ ಸಂಬಂಧಿಸಿದಂತೆ ಯುಎಸ್ ನ್ಯಾಯಾಲಯದ ಮಹತ್ವದ ತೀರ್ಪು
  • ಸೇವ್ ಜಾಬ್ಸ್ ಯುಎಸ್ಎ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ

    H-1B ವೀಸಾ ಹೊಂದಿರುವವರ ಸಂಗಾತಿಯೂ ದೇಶದಲ್ಲಿ ಕೆಲಸ ಮಾಡಲು ಅವಕಾಶವಿದೆ ಎಂದು ಯುಎಸ್ ನ್ಯಾಯಾಲಯದ ಸ್ಪಷ್ಟನೆ
H-1B Visa: ಭಾರತೀಯರಿಗೆ ಗುಡ್ ನ್ಯೂಸ್  title=
Good News For H-1B visa holders

Good News For H-1B visa holders: ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಉದ್ಯೋಗಿಗಳ ಕುರಿತು ಅಮೆರಿಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಯಾರಾದರೂ H-1B ವೀಸಾ ಹೊಂದಿದ್ದರೆ, ಅವರ ಸಂಗಾತಿಯೂ ದೇಶದಲ್ಲಿ ಕೆಲಸ ಮಾಡಲು ಅವಕಾಶವಿದೆ ಎಂದು ಯುಎಸ್ ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೆಚ್ಚಿನ ಸಂಖ್ಯೆಯ ಭಾರತೀಯರು ಸಹ H-1B ವೀಸಾ ಹೊಂದಿರುವವರಾಗಿರುವ ಕಾರಣ ಭಾರತೀಯರು ನ್ಯಾಯಾಲಯದ ಈ ನಿರ್ಧಾರದಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.

ಯುಎಸ್ ಜಿಲ್ಲಾ ನ್ಯಾಯಾಧೀಶರಾದ ತಾನ್ಯಾ ಚುಟ್ಕಾನ್ ಅವರು, ಸೇವ್ ಜಾಬ್ಸ್ ಯುಎಸ್ಎ ಅರ್ಜಿಯನ್ನು ತಿರಸ್ಕರಿಸಿದರು. ಇದಲ್ಲದೆ, H-1B ವೀಸಾ ಹೊಂದಿರುವವರ ಸಂಗಾತಿಯು ಕೂಡ ಯುಎಸ್ನಲ್ಲಿ ಕೆಲಸ ಮಾಡಲು ಅನುಮತಿಸಲಾಗಿದೆ ಎಂದು ಹೇಳಿದರು. ನ್ಯಾಯಾಲಯದ ಈ ತೀರ್ಪಿನಿಂದ ಒಂದು ಲಕ್ಷ ಎಚ್-1ಬಿ ವೀಸಾದಾರರಿಗೆ ಅನುಕೂಲವಾಗಲಿದೆ. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಸೇರಿದ್ದಾರೆ. 

ಇದನ್ನೂ ಓದಿ- New Ocean: 14 ಕೋಟಿ ವರ್ಷಗಳ ಬಳಿಕ ಹುಟ್ಟಲಿದೆ ಹೊಸ ಮಹಾಸಾಗರ! ಈ ಖಂಡ ಇಬ್ಭಾಗ, 6 ದೇಶಗಳ ನಕ್ಷೆಯೇ ಬದಲಾಗುತ್ತೆ!

ವಾಸ್ತವವಾಗಿ, ಸೇವ್ ಜಾಬ್ಸ್ ಯುಎಸ್ಎ ಎಂಬ ಸಂಸ್ಥೆಯು H-1B ವೀಸಾ ಹೊಂದಿರುವ ಕೆಲವು ವರ್ಗಗಳ ಸಂಗಾತಿಗಳಿಗೆ ಕೆಲಸ ಮಾಡುವ ಹಕ್ಕನ್ನು ನೀಡುವ ನಿಯಮಗಳನ್ನು ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿತ್ತು. ಈ ನಿಯಮಗಳನ್ನು ಬರಾಕ್ ಒಬಾಮಾ ಅವರ ಅಧ್ಯಕ್ಷತೆಯಲ್ಲಿ ಮಾಡಲಾಯಿತು. ಸೇವ್ ಜಾಬ್ಸ್ ಯುಎಸ್‌ಎ ಅರ್ಜಿಯನ್ನು ಅಮೆಜಾನ್, ಆಪಲ್, ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ಟೆಕ್ ಕಂಪನಿಗಳು ವಿರೋಧಿಸಿವೆ. 

H-4 ವೀಸಾ ಹೊಂದಿರುವ ವಿದೇಶಿ ಪ್ರಜೆಗಳ ಸಂಗಾತಿಗಳು ಯುಎಸ್ನಲ್ಲಿ ಕೆಲಸ ಮಾಡಲು ಅನುಮತಿಸಲು ಕಾಂಗ್ರೆಸ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಗೆ ಅಧಿಕಾರವನ್ನು ನೀಡಿಲ್ಲ ಎಂದು ಸೇವ್ ಜಾಬ್ಸ್  ಯುಎಸ್ಎ ವಾದಿಸಿದೆ. ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿದ್ದು, H-4 ಸಂಗಾತಿಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಳಿಯಲು ಅನುಮತಿಸುವ ಷರತ್ತಾಗಿ ಉದ್ಯೋಗವನ್ನು ಅಧಿಕೃತಗೊಳಿಸಲು ಯುಎಸ್ ಸರ್ಕಾರಕ್ಕೆ ಕಾಂಗ್ರೆಸ್ ಸ್ಪಷ್ಟವಾಗಿ ಮತ್ತು ಉದ್ದೇಶಪೂರ್ವಕವಾಗಿ ಅಧಿಕಾರ ನೀಡಿದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. 

ಇದನ್ನೂ ಓದಿ- Earthquake: ಜಪಾನ್‌ನಲ್ಲಿ 6.1 ತೀವ್ರತೆಯ ಭೂಕಂಪ

ಮಾಧ್ಯಮ ವರದಿಯ ಪ್ರಕಾರ, ವಲಸಿಗರಿಗೆ ಕಾನೂನು ನೆರವು ನೀಡುವ ವಕೀಲ ಅಜಯ್ ಭುಟೋರಿಯಾ ಅವರು ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿದ್ದಾರೆ, ಇತರ ದೇಶಗಳಿಂದ ನುರಿತ ಉದ್ಯೋಗಿಗಳು ಯುಎಸ್‌ಗೆ ಬಂದು ಇಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡಲು H1B ವೀಸಾ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ. ಇಲ್ಲಿಯವರೆಗೆ ಪತಿ ಅಥವಾ ಹೆಂಡತಿಗೆ ಇದರ ಅಡಿಯಲ್ಲಿ ಕೆಲಸ ಮಾಡಲು ಅವಕಾಶವಿರಲಿಲ್ಲ. ಇದರಿಂದ ಇಲ್ಲಿ ವಾಸಿಸುವ ಕುಟುಂಬಗಳಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ. ಇದೀಗ ನ್ಯಾಯಾಲಯದ ತೀರ್ಪಿನಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News