ಇಸ್ಲಾಮಾಬಾದ್: ಜಾಗತಿಕ ಮಾರುಕಟ್ಟೆಯಲ್ಲಿ ಯುಎಸ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮಧ್ಯೆ ಹಳದಿ ಲೋಹ ಚಿನ್ನದ ಬೆಲೆಗಳು ಆಕಾಶವನ್ನು ಮುಟ್ಟಿವೆ. ಕೊಲ್ಲಿ ಪ್ರದೇಶದಲ್ಲಿನ ಮಿಲಿಟರಿ ಉದ್ವಿಗ್ನತೆಯ ನಂತರ ಭಾರತದ ಮಾರುಕಟ್ಟೆಯಲ್ಲಿ ಎರಡು ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,800 ರೂ.ಗಳಷ್ಟು ಏರಿಕೆಯಾಗಿದೆ. ಆದರೆ ಹಳದಿ ಲೋಹವು ಸ್ಪಾಟ್ ಮಾರುಕಟ್ಟೆಯಲ್ಲಿ 42 ನೇ ಸ್ಥಾನದಲ್ಲಿದೆ. ಆದರೆ ಈ ಸಮಯದಲ್ಲಿ, ಪಾಕಿಸ್ತಾನ(Pakistan)ದ ಸರಫಾ ಬಜಾರ್ನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದರೆ ನೀವು ಖಂಡಿತವಾಗಿಯೂ ಶಾಕ್ ಆಗ್ತೀರಾ....
ಹೌದು, ಪ್ರಸ್ತುತ ಪಾಕಿಸ್ತಾನದಲ್ಲಿ, ಪ್ರತಿ ತೊಲ ಚಿನ್ನ 93 ಸಾವಿರ ರೂ.ಗಳನ್ನು ದಾಟಿದೆ. ಪಾಕಿಸ್ತಾನದಲ್ಲಿ 2020 ರ ಜನವರಿ 06 ರಂದು ಪ್ರತಿ ತೊಲ ಚಿನ್ನದ ಬೆಲೆ 93,400 ರೂ., 10 ಗ್ರಾಂ ಚಿನ್ನದ ಬೆಲೆ 80,075 ರೂ. ಮುಟ್ಟಿದೆ.
ಪಾಕಿಸ್ತಾನದ ವಿವಿಧ ನಗರಗಳಲ್ಲಿ ಚಿನ್ನದ ದರಗಳು ವಿಭಿನ್ನ ಸಮಯಗಳಲ್ಲಿ ಬದಲಾಗುತ್ತವೆ. ಕರಾಚಿ, ಲಾಹೋರ್, ಇಸ್ಲಾಮಾಬಾದ್, ರಾವಲ್ಪಿಂಡಿ, ಪೇಶಾವರ್, ಫೈಸಲಾಬಾದ್ ಮತ್ತು ಕ್ವೆಟ್ಟಾ ಸೇರಿದಂತೆ ವಿವಿಧ ನಗರಗಳಲ್ಲಿ ಕಳೆದ ಸೋಮವಾರದಂದು ಚಿನ್ನದ ಬೆಲೆಗಳು ಹೀಗಿವೆ…
ಪಾಕಿಸ್ತಾನದಲ್ಲಿ 2020 ರ ಜನವರಿ 06 ರಂದು ಪ್ರತಿ ತೊಲ ಚಿನ್ನದ ಬೆಲೆ(Gold Price) 93,400 ರೂ ... ಫೋಟೋ ಕೃಪೆ- geo.tv