ಇಸ್ಲಾಮಾಬಾದ್: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೆ ಬುಧವಾರ ಮತದಾನ ಮುಕ್ತಾಯಗೊಂಡಿದ್ದು, ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ- ಇನ್ಸಾಫ್ ಪಕ್ಷ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದು, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಪಕ್ಷ ಹಿನ್ನಡೆ ಸಾಧಿಸಿದೆ.
ಆರಂಭಿಕ ಸುತ್ತಿನಲ್ಲಿ ಪಿಟಿಐ 112 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಆಡಳಿತಾರೂಢ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) 64 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) 44 ಸ್ಥಾನಗಳಲ್ಲಿದೆ ಮತ್ತು ಸ್ವತಂತ್ರರು 50 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅದೇ ಸಮಯದಲ್ಲಿ, ಭಯೋತ್ಪಾದಕ ದರೋಡೆಕೋರ ಹಫಿಜ್ ಸಯೀದ್ ಖಾತೆಯು ಅಲ್ಲಾ-ಓ-ಅಕ್ಬರ್ ತೆಹ್ರಿಕ್ ಖಾತೆಯನ್ನೂ ತೆರೆದಿಲ್ಲ.
#PakistanGeneralElections: According to ARY news, Imran Khan’s PTI is leading in trends pic.twitter.com/EB3z3jbgmU
— ANI (@ANI) July 25, 2018
ರಾಷ್ಟ್ರೀಯ ಅಸೆಂಬ್ಲಿಯ 272 ಕ್ಷೇತ್ರಗಳಿಗೆ ಒಟ್ಟು 3,459 ಅಭ್ಯರ್ಥಿಗಳು ಹಾಗೂ 577 ಪ್ರಾಂತೀಯ ಅಸೆಂಬ್ಲಿಗೆ 8,396 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್), ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಪಿಟಿಐ ಪಕ್ಷಗಳು ಪ್ರಮುಖವಾಗಿವೆ.
ಮತದಾನದ ಸಂದರ್ಭದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ಬಲೂಚಿಸ್ತಾನದ ಕ್ವೆಟ್ಟಾ ಪ್ರದೇಶದಲ್ಲಿ ಹಿಂಸಾಚಾರ ನಡೆದಿತ್ತು. ಮತಗಟ್ಟೆಯೊಂದರ ಹೊರಗೆ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 31 ಜನ ಸತ್ತಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ವಿವಿದೆಡೆ ನಡೆದ ಹಿಂಸಾಚಾರದಲ್ಲಿ ಜನ ಮರಣ ಹೊಂದಿದ್ದಾರೆ.