ಮೆಕ್ಸಿಕೋ: ಮೆಕ್ಸಿಕೊದ ಡುರಾಂಗೊದಲ್ಲಿ ಏರೊಮೆಕ್ಸಿಕೊ ಜೆಟ್ ವಿಮಾನ ಮಂಗಳವಾರ ಪತನಗೊಂಡಿದ್ದು, 85 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 97 ಮಂದಿ ಪ್ರಯಾಣಿಕರು ಮತ್ತು ನಾಲ್ಕು ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಮೆಕ್ಸಿಕೋದ ಡುರಾಂಗೋ ನಗರದಿಂದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಪತನಗೊಂಡಿದೆ. ಹವಾಮಾನ ವೈಪರಿತ್ಯದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ವರದಿ ತಿಳಿಸಿದೆ.