ನವದೆಹಲಿ: ಕರೋನಾ ವೈರಸ್ ಸೋಂಕಿನಿಂದಾಗಿ, ವಿಶ್ವದ ಬಹುತೇಕ ದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಸಾಂಕ್ರಾಮಿಕ ರೋಗವನ್ನು ತಪ್ಪಿಸಲು ಇತರೆ ಕ್ರಮಗಳನ್ನು ಸಹ ಜಾರಿಗೆ ತರಲಾಗಿದೆ. ಈ ನ್ಯೂ ನಾರ್ಮಲ್ ನಡುವೆ ಜಪಾನಿನ ಅಂಗಡಿಯೊಂದು ವಿನೂತನ ಪ್ರಯತ್ನವನ್ನು ನಡೆಸಿದ್ದು , ಅದಕ್ಕೆ 'ಸ್ಮೈಲ್ ಕ್ಯಾಂಪ್' ಎಂದು ಹೆಸರಿಸಲಾಗಿದೆ.
😷コロナ禍でマスクが常態化された中、
「マスクを通してでも私は笑顔を届けたい」 という想いで
今日から「#スマイルキャンペーン」をスタート!
詳しくは⇒https://t.co/9OgaHojCKj😆スマイルマスクで笑顔になった方、
❤️ぜひリツイートしてね~#多慶屋 #上野 #ウエノスマイル #スマイルマスク pic.twitter.com/m49mcGmdil— 多慶屋(たけや)公式@スタッフ一同スマイルマスク着用中!怖がらないでね (@takeya_co_jp) August 10, 2020
ಜಪಾನ್‌ನ ರಿಯಾಯಿತಿ ಅಂಗಡಿ Takeya ಈ ಶಿಬಿರಕ್ಕಾಗಿ ತನ್ನ ಸಿಬ್ಬಂದಿಗೆ ವಿಶೇಷ ರೀತಿಯ ಮುಖವಾಡವನ್ನು ತಯಾರಿಸಿದೆ. ಸಿಬ್ಬಂದಿಗಳ ನಿಜವಾದ ಸ್ಮೈಲ್ ಅನ್ನು ಅವರ ಮುಖವಾಡದಲ್ಲಿ ಮುದ್ರಿಸಲಾಗಿದೆ. ಹೀಗಾಗಿ ಸಿಬ್ಬಂಧಿಯ ಮನಸ್ಥಿತಿ ಏನೇ ಇದ್ದರೂ ಕೂಡ ಅವರು ಗ್ರಾಹಕರನ್ನು ನೋಡಿ ನಗುತ್ತಿರುವ ಹಾಗೆ ಕಂಡುಬರುತ್ತದೆ. ಕಂಪನಿಯು ತನ್ನ ಪುರುಷ ಮತ್ತು ಮಹಿಳಾ ಉದ್ಯೋಗಿಗಳಿಗೆ ವಿಭಿನ್ನ ಮುಖವಾಡಗಳನ್ನು ಮುದ್ರಿಸಿದೆ. ಕಂಪನಿಯ ಪ್ರಕಾರ, ಈ ಕ್ಯಾಂಪೇನ್ ಉದ್ದೇಶವು ತನ್ನ ಉದ್ಯೋಗಿಗಳನ್ನು ಸ್ನೇಹಪರ ಮತ್ತು ವಿಶ್ವಾಸಾರ್ಹ ಎಂದು ತೋರಿಸುವುದಾಗಿದೆ.
ಅಂಗಡಿ ತನ್ನ ಅಭಿಯಾನವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಈ ಮೂಲಕ ಅವರು ಜನರ ಮುಖದಲ್ಲಿ ಕಿರುನಗೆ ಬೀರಲು ಬಯಸುತ್ತಾರೆ ಎಂದು ಹೇಳಿದೆ. ಟ್ವಿಟ್ಟರ್ನಲ್ಲಿ ಈ ಅಭಿಯಾನ ಪರಿಚಯಿಸಿದ ನಂತರ, ಇದು ವಿಶ್ವಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಅಂಗಡಿಯ ಹೊಸ ಮುಖವಾಡವನ್ನು ಧರಿಸುವ ಪರಿಕಲ್ಪನೆಯನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ ಹಾಗೂ ಅಪಾರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.