ವಿಶ್ವದ ಈ 27 ದೇಶಗಳು ಇಂದಿಗೂ ರೈಲು ಸೇವೆ ಪಡೆದುಕೊಂಡಿಲ್ಲ!

Countries Without a Railway Network: ಜಗತ್ತಿನಲ್ಲಿ ರೈಲುಗಳು ಕ್ರಿಸ್ತನ ಆರು ನೂರು ವರ್ಷಗಳ ಹಿಂದೆ ಗ್ರೀಸ್‌ನಲ್ಲಿ ಪ್ರಾರಂಭವಾದವು. ಇದು ಇಂದು ಸಾರಿಗೆಯ ಪ್ರಮುಖ ಸಾಧನವಾಗಿದೆ.. ಆದರೆ ಇಂದಿಗೂ ಅನೇಕ ದೇಶಗಳಲ್ಲಿ ರೈಲಿನ ಕುರುಹು ಇಲ್ಲ.. ಹಾಗಾದರೆ ಯಾವ ದೇಶಗಳು ರೈಲು ಸೇವೆಯನ್ನು ಹೊಂದಿಲ್ಲ ಎನ್ನುವುದರ ಮಾಹಿತಿ ಇಲ್ಲಿದೆ..  

Written by - Savita M B | Last Updated : Feb 9, 2024, 02:59 PM IST
  • ಕಲ್ಲಿದ್ದಲು ಮತ್ತು ಉಗಿ ಎಂಜಿನ್‌ಗಳೊಂದಿಗೆ ರೈಲುಗಳನ್ನು ಓಡಿಸಲು ಪ್ರಾರಂಭಿಸಲಾಯಿತು..
  • ಭಾರತದಲ್ಲಿ ಪ್ರತಿದಿನ 11 ಸಾವಿರ ರೈಲುಗಳು ಸೇವೆ ನೀಡುತ್ತವೆ
  • ರೈಲು ನೆಟ್‌ವರ್ಕ್ ಅಥವಾ ರೈಲುಗಳು ಓಡದ ಇನ್ನೂ ಅನೇಕ ದೇಶಗಳು ಜಗತ್ತಿನಲ್ಲಿವೆ
ವಿಶ್ವದ ಈ 27 ದೇಶಗಳು ಇಂದಿಗೂ ರೈಲು ಸೇವೆ ಪಡೆದುಕೊಂಡಿಲ್ಲ!  title=

Railway Services: ಮೊದಲನೆಯದಾಗಿ, ಕಲ್ಲಿದ್ದಲು ಮತ್ತು ಉಗಿ ಎಂಜಿನ್‌ಗಳೊಂದಿಗೆ ರೈಲುಗಳನ್ನು ಓಡಿಸಲು ಪ್ರಾರಂಭಿಸಲಾಯಿತು.. ಇದರಿಂದ ಈ ರೈಲುಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳುತಿದ್ದವು.. ಇದಾದ ನಂತರ ವಾಣಿಜ್ಯ ರೈಲುಗಳು ಆರಂಭಗೊಂಡವು. ಇದರಿಂದ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ಹೆಚ್ಚು ಅನುಕೂಲವಾಯಿತು. ಈಗ ಅನೇಕ ದೇಶಗಳಲ್ಲಿ ರೈಲ್ವೆ ಸಾಮಾನ್ಯ ಜೀವನದ ಭಾಗವಾಗಿದೆ. ಇದು ಪ್ರತಿದಿನ ಜನರನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಕರೆದೊಯ್ಯುವುದು ಮಾತ್ರವಲ್ಲದೆ ವ್ಯವಹಾರದ ದೃಷ್ಟಿಕೋನದಿಂದ ಮುಖ್ಯವಾಗಿದೆ..

ಭಾರತದಲ್ಲಿ ಪ್ರತಿದಿನ 11 ಸಾವಿರ ರೈಲುಗಳು ಸೇವೆ ನೀಡುತ್ತವೆ.. ಪ್ರಪಂಚದ ಅತಿದೊಡ್ಡ ರೈಲು ಜಾಲವೆಂದರೆ ಅದು ಅಮೆರಿಕ... ಆದರೆ ರೈಲು ನೆಟ್‌ವರ್ಕ್ ಅಥವಾ ರೈಲುಗಳು ಓಡದ ಇನ್ನೂ ಅನೇಕ ದೇಶಗಳು ಜಗತ್ತಿನಲ್ಲಿವೆ ಎಂಬುದು ನಿಮಗೆ ತಿಳಿದಿದೆಯೇ. ಹಾಗಾದರೆ ಆ ದೇಶಗಳು ಯಾವುವು ಎಂದು ತಿಳಿಯೋಣ.

ಇದನ್ನೂ ಓದಿ-ಇದು ವಿಶ್ವದ ಅತ್ಯಂತ ದುಬಾರಿ ಶಾಲೆ.. ಫೀಜ್ ಕೇಳಿದರೆ ಶಾಕ್‌ ಆಗೋದು ಫಿಕ್ಸ್!

ಈ ದೇಶಗಳಲ್ಲಿ ಯಾವುದೇ ರೈಲು ಜಾಲವಿಲ್ಲ: 
ರೈಲು ಜಾಲವನ್ನು ಹೊಂದಿರದ ಹೆಚ್ಚಿನ ದೇಶಗಳು ಸಣ್ಣ ಮತ್ತು ದ್ವೀಪ ರಾಷ್ಟ್ರಗಳಾಗಿವೆ. ಉದಾಹರಣೆಗೆ, ಭಾರತದ ನೆರೆಯ ದೇಶ ಭೂತಾನ್ ಸ್ವತಃ ರೈಲು ಜಾಲವನ್ನು ಹೊಂದಿಲ್ಲ. ಆದರೆ ಈಗ ಭಾರತವು ಅಲ್ಲಿ ರೈಲು ಮಾರ್ಗವನ್ನು ನಿರ್ಮಿಸುತ್ತಿದೆ, ಅದರ ಕೆಲಸವು 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ-ಭಾರತಕ್ಕೆ ಕಳವಳ ತಂದ ಮಾಲ್ಡೀವ್ಸ್‌ಗೆ ಚೀನಾ ನೌಕೆಯ ಭೇಟಿ

ಇದಲ್ಲದೆ, ಅಂಡೋರಾ, ಭೂತಾನ್, ಸೈಪ್ರಸ್, ಪೂರ್ವ ಟಿಮೋರ್, ಗಿನಿಯಾ-ಬಿಸ್ಸಾವು, ಐಸ್ಲ್ಯಾಂಡ್, ಕುವೈತ್, ಲಿಬಿಯಾ, ಮಕಾವು, ಮಾಲ್ಟಾ, ಮಾರ್ಷಲ್ ದ್ವೀಪಗಳು, ಮಾರಿಷಸ್, ಮೈಕ್ರೋನೇಷಿಯಾ, ನೈಜರ್, ಓಮನ್, ಪಪುವಾ ನ್ಯೂ ಗಿನಿಯಾ, ಕತಾರ್, ರುವಾಂಡಾ, ಸ್ಯಾನ್ ಮರಿನೋ, ಸೊಲೊಮನ್ ದ್ವೀಪಗಳು, ಸೊಮಾಲಿಯಾ, ಸುರಿನಾಮ್, ಟೊಂಗಾ, ಟ್ರಿನಿಡಾಡ್ ಮತ್ತು ಟೊಬಾಗೊ, ಟುವಾಲು, ವನವಾಟು ಮತ್ತು ಯೆಮೆನ್‌ನಲ್ಲಿ ಇನ್ನೂ ಯಾವುದೇ ರೈಲು ಜಾಲವಿಲ್ಲ. 

ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿಯೂ ರೈಲು ಜಾಲವಿಲ್ಲ: 
ಈ ಪಟ್ಟಿಯಲ್ಲಿ ರೈಲು ಜಾಲವಿಲ್ಲದ ವಿಶ್ವದ ಶ್ರೀಮಂತ ರಾಷ್ಟ್ರಗಳಾದ ಕತಾರ್, ಕುವೈತ್ ಮತ್ತು ಓಮನ್‌ಗಳ ಹೆಸರುಗಳೂ ಸೇರಿವೆ. ಅಲ್ಲಿ, ರಸ್ತೆ ಸಾರಿಗೆಯ ಮೂಲಕ ಮಾತ್ರ ಕೆಲಸ ಮಾಡಲಾಗುತ್ತಿದೆ.. ಯಾವುದೇ ರೈಲು ಜಾಲವನ್ನು ನಿರ್ಮಿಸಲಾಗಿಲ್ಲ.      

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

          

Trending News