ಏಷ್ಯಾದ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಗೆ ಈ ಒಂದು ದಾಳಿಯೇ ಕಾರಣ!

ಸ್ಪುಟ್ನಿಕ್ ಪ್ರಕಾರ, ಏಷ್ಯಾದ ಮಾರುಕಟ್ಟೆಗಳಲ್ಲಿ ಬೆಳಗಿನ ವಹಿವಾಟಿನ ಸಮಯದಲ್ಲಿ ಬ್ರೆಂಟ್ ಕಚ್ಚಾ ಶೇ. 1.31 ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 67.12 ಡಾಲರ್‌ಗೆ ತಲುಪಿದೆ.

Last Updated : Jan 3, 2020, 11:25 AM IST
ಏಷ್ಯಾದ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಗೆ ಈ ಒಂದು ದಾಳಿಯೇ ಕಾರಣ! title=

ಹಾಂಗ್ ಕಾಂಗ್: ಇರಾನ್‌ನ ಅಧಿಕಾರದಲ್ಲಿದ್ದ ಇರಾನ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ಜನರಲ್ ಖಾಸೆಮ್ ಸೊಲೈಮಾನಿ ಇರಾಕ್‌ನಲ್ಲಿ ಅಮೆರಿಕದ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಇದರ ನಂತರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಏಷ್ಯಾದ ವ್ಯಾಪಾರ ಮಾರುಕಟ್ಟೆಯಲ್ಲಿ, ತೈಲ ಬೆಲೆಗಳು ಹೆಚ್ಚಾಗಿದೆ. ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಹೆಲಿಕಾಪ್ಟರ್‌ಗಳು ನಡೆಸಿದ ದಾಳಿಯಲ್ಲಿ ಜನರಲ್ ಕಾಸಿಮ್ ಸುಲೇಮನಿ ಮೃತಪಟ್ಟರು.

ಜನರಲ್ ಸುಲೇಮನಿ 1998 ರಿಂದ ಇರಾನ್‌ನ ಕುಡ್ಸ್ ಫೋರ್ಸ್‌ನ ಮುಖ್ಯಸ್ಥರಾಗಿದ್ದರು. (ಫೈಲ್ ಫೋಟೋ)

ಸ್ಪುಟ್ನಿಕ್ ಪ್ರಕಾರ, ಏಷ್ಯಾದ ಮಾರುಕಟ್ಟೆಗಳಲ್ಲಿ ಬೆಳಗಿನ ವಹಿವಾಟಿನ ಸಮಯದಲ್ಲಿ ಬ್ರೆಂಟ್ ಕಚ್ಚಾ ಶೇ. 1.31 ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 67.12 ಯುಎಸ್ ಡಾಲರ್‌ಗೆ ತಲುಪಿದ್ದರೆ, ಯುಎಸ್ ಕಚ್ಚಾ ಬ್ಯಾರೆಲ್‌ಗೆ 1.24 ಶೇಕಡಾ ಜಿಗಿದು 61.94 ಯುಎಸ್ ಡಾಲರ್‌ಗೆ ತಲುಪಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಕೈಗೊಂಡ ರಕ್ಷಣಾತ್ಮಕ ಕ್ರಮದಲ್ಲಿ ಸುಲೇಮನಿ ಹತರಾಗಿದ್ದಾರೆ ಎಂದು ಅಮೆರಿಕ ಖಚಿತಪಡಿಸಿದೆ.

ಬಾಗ್ದಾದ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಸ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಲೈಮಾನಿ ಹೊರತುಪಡಿಸಿ, ಕಮಾಂಡರ್ ಅಬು ಮಹ್ದಿ ಅಲ್-ಮುಹಂದಿಸ್ ಮತ್ತು ಇತರ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾಕಿ ಅಧಿಕಾರಿಗಳು ಮತ್ತು ದೇಶದ ದೂರದರ್ಶನ ವರದಿ ಮಾಡಿದೆ.
 

Trending News