ಸಾಮಾನ್ಯವಾಗಿ ಪ್ಯಾರಾಗ್ಲೈಡಿಂಗ್'ಗಾಗಿ ವಿಮಾನದಿಂದ ವ್ಯಕ್ತಿಗಳು ಜಿಗಿಯುವುದನ್ನು ನೋಡಿದ್ದೇವೆ. ಆದರೆ, ವಿಮಾನದಿಂದ ಮೀನುಗಳು ಉದುರುವುದನ್ನು ಎಂದಾದರೂ ಕಂಡಿದ್ದೀರಾ? ವಿಚಿತ್ರ ಅನಿಸುತ್ತಿದೆಯಲ್ಲವೇ? ಆದರೂ ಇದು ಸತ್ಯ!
ಅಮೇರಿಕಾದ ಉಟಾಹ್ ಎಂಬ ಪರ್ವತ ಶ್ರೇಣಿಯಲ್ಲಿರುವ ಸರೋವರದ ಬಳಿ ಇಂಥ ದೃಶ್ಯ ಆಗಾಗ ಕಂಡುಬರುತ್ತದೆ. ಏಕೆಂದರೆ ಈ ಸರೋವರದಲ್ಲಿ ಮೀನುಗಳ ಸಂತತಿ ಹೆಚ್ಚಿಸುವ ಉದ್ದೇಶದಿಂದ ವಿಮಾನದಲ್ಲಿ ಮೀನುಗಳನ್ನು ತಂದು ಈ ಸರೋವರಕ್ಕೆ ಸುರಿಯಲಾಗುತ್ತದೆ. ಈ ಮೀನುಗಳ ಗಾತ್ರ ಬಹಳ ಪುಟ್ಟದಾಗಿದ್ದು, ಎಲ್ಲಾ ಸ್ಥಳಗಳಿಗೂ ಹೊಂದಿಕೊಂಡು ಬದುಕುವ ಶಕ್ತಿ ಹೊಂದಿವೆ.
ಹೀಗೆ ಈ ಮೀನುಗಳನ್ನು ವಿಮಾನದಿಂದ ಸರೋವರಕ್ಕೆ ಸುರಿಯುವ ವೀಡಿಯೋವೊಂದನ್ನು ಉಟಾಹ್ ದ ವನ್ಯಜೀವಿ ಸಂಪನ್ಮೂಲ ವಿಭಾಗ ಟ್ವೀಟ್ ಮಾಡಿದೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Fun fact: We stock many of Utah's high-mountain lakes from the air. The fish are tiny — anywhere from 1–3 inches long — which allows more than 95% of them to survive the fall. #Utah #TroutTuesday pic.twitter.com/kotDe91Zzw
— Utah DWR (@UtahDWR) August 21, 2018