Telangana Assembly Elections 2023 : ಇಂದು ಬೆಳಗ್ಗೆ 7 ಗಂಟೆಯಿಂದ ತೆಲಂಗಾಣ ಚುನಾವಣಾ ಮತದಾನ ಆರಂಭವಾಗಿದೆ. ಹಲವು ಚಿತ್ರರಂಗದ ಗಣ್ಯರು ಬೆಳಗ್ಗೆಯೇ ಮತದಾನದ ಹಕ್ಕನ್ನು ಚಲಾಯಿಸಿದರು. ಈ ಪೈಕಿ ನಟ ಚಿರಜೀವಿ, ಅಲ್ಲು ಅರ್ಜುನ್, ಜೂ. ಎನ್ಟಿಆರ್ ಸೇರಿದಂತೆ ಹಲವು ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಮೆಗಾಸ್ಟಾರ್ ಚಿರಂಜೀವಿಯವರು ತಮ್ಮ ಪತ್ನಿ ಸುರೇಖಾ ಜೊತೆ ಇಂದು ಬೆಳಿಗ್ಗೆ ಎಂಟು ಗಂಟೆಗೆ ಹೈದರಾಬಾದ್ನ ಜುಬಿಲಿ ಹಿಲ್ಸ್ ಕ್ಲಬ್ ನಲ್ಲಿರುವ ಮತ ಗಟ್ಟೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದರು. ಮಗಳು ಶ್ರೀಜಾ ಕೂಡ ಚಿರು ಜೊತೆಗಿದ್ದರು. ಚಿರಂಜೀವಿ ಪುತ್ರ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಇಂದು ಮಧ್ಯಾಹ್ನ 12 ಗಂಟೆಗೆ ಮತದಾನದ ಹಕ್ಕು ಚಲಾಯಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸಧ್ಯ ಚರಣ್ ಮೈಸೂರಿನಲ್ಲಿ ನಡೆಯುತ್ತಿರುವ ‘ಗೇಮ್ ಚೇಂಜರ್’ ಚಿತ್ರೀಕರಣದಿಂದ ಸ್ವಲ್ಪ ಬಿಡುವು ಮಾಡಿಕೊಂಡು ಹೈದರಾಬಾದ್ಗೆ ಬಂದು ಮತದಾನ ಮಾಡಲಿದ್ದಾರೆ.
अभिनेता चिरंजीवी अपने परिवार के साथ मतदान करने मतदान केंद्र पहुंचे#TelanganaElections2023 #TelanganaElections #TelanganaAssemblyElections2023 #Chiranjeevi #DigitalVideos pic.twitter.com/MSkuKUDqpr
— Zee News (@ZeeNews) November 30, 2023
ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆ ಯಾರು ಗೊತ್ತಾ?
ಯಂಗ್ ಟೈಗರ್ ಎನ್.ಟಿ.ಆರ್ ಕೂಡ ಬೆಳಿಗ್ಗೆ ಮತ ಚಲಾಯಿಸಿದರು. ಪತ್ನಿ ಪ್ರಣಿತಾ ಹಾಗೂ ತಾಯಿ ಶಾಲಿನಿ ಅವರೊಂದಿಗೆ ಮತಗಟ್ಟೆಗೆ ಆಗಮಿಸಿದರು. ಜನಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಎನ್ಟಿಆರ್ ವೋಟ್ ಮಾಡಿದರು. ಈ ವೇಳೆ ಅವರು ತಮ್ಮ ಅಭಿಮಾನಿಗಳೊಂದಿಗೆ ಕುಶಲೋಪರಿ ವಿಚಾರಿಸುತ್ತ ಸಾಲಿನಲ್ಲಿ ನಿಂತಿದ್ದ ವಿಡಿಯೋ ವೈರಲ್ ಆಗಿದೆ.
#JrNTR and family join the democratic process, proudly casting their votes in the Telangana General Elections 2023. A collective effort towards shaping the future 👏👏#NTR | @tarak9999 | #TelanganaElections pic.twitter.com/YouecmIGo9
— Thyview (@Thyview) November 30, 2023
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬೆಳಗ್ಗೆ ಏಳು ಗಂಟೆಗೆ ಮತದಾನದ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು. ಅಲ್ಲು ಸುಮಾರು 20 ನಿಮಿಷಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದರು. ಮತದಾನದ ನಂತರ ಎಲ್ಲರೂ ತಪ್ಪದೇ ವೋಟ್ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ:ಈ ಭಾಗಗಳಲ್ಲಿ ಮುಂದಿನ 2 ದಿನ ಭರ್ಜರಿ ಮಳೆ-ಚಂಡಮಾರುತದ ಸುಳಿಗೆ ಸಿಲುಕುವ ಭೀತಿ
#WATCH | Actor Allu Arjun after casting his vote in Hyderabad's Jubilee Hills area#TelanganaElections2023 pic.twitter.com/YbIrZxo5VM
— ANI (@ANI) November 30, 2023
ಆಸ್ಕರ್ ಪ್ರಶಸ್ತಿ ಪುರಸ್ಕೃತ ಎಂ.ಎಂ.ಕೀರವಾಣಿ, ನಿರ್ದೇಶಕ ಕೆ.ರಾಘವೇಂದ್ರ ರಾವ್, ನಾಯಕ ಸುಮಂತ್ ಮತ್ತಿತರರು ಬೆಳಗ್ಗೆಯೂ ಮತದಾನದ ಹಕ್ಕು ಚಲಾಯಿಸಿದರು. ಶ್ರೀಕಾಂತ್ ಅವರು ಪತ್ನಿ ಉಹಾ ಹಾಗೂ ಪುತ್ರ ರೋಷನ್ ಮೇಕಾ ಅವರೊಂದಿಗೆ ಮತಗಟ್ಟೆಗೆ ಬಂದಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.