ನವದೆಹಲಿ: ಅನೇಕರು ತಮ್ಮ ಆಧಾರ್ ಕಾರ್ಡ್(Aadhaar card) ನಲ್ಲಿರುವ ಫೋಟೋ ಸರಿಯಾಗಿಲ್ಲವೆಂದು ತಲೆಕೆಡಿಸಿಕೊಂಡಿರುತ್ತಾರೆ. ಹಳೆಯ ಫೋಟೋ ಬದಲು ಹೊಸ ಫೋಟೋ ಅಪ್ಡೇಟ್ ಮಾಡುವುದು ಹೇಗೆಂದು ಚಿಂತಿಸುತ್ತಿರುತ್ತಾರೆ. ಆಧಾರ್ ಕಾರ್ಡ್ನಲ್ಲಿ ನಿಮ್ಮ ವಿವರಗಳನ್ನು ಸರಿಯಾಗಿ ಅಪ್ಡೇಟ್ ಮಾಡುವುದರಿಂದ ಸರ್ಕಾರ ಮತ್ತು ಬ್ಯಾಂಕಿಂಗ್ ಸೇವೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ. ಯುಐಡಿಎಐ ಗುರುತಿನ ಚೀಟಿಯಲ್ಲಿರುವ ಅಧಿಕೃತ ಫೋಟೋವನ್ನು ಹೊಸದಕ್ಕೆ ಬದಲಾಯಿಸಲು ಅನೇಕರು ಪ್ರಯತ್ನಿಸುತ್ತಾರೆ. ಆದರೆ ಅದು ಹೇಗೆ ಮಾಡಬೇಕೆಂದು ಅನೇಕರಿಗೆ ತಿಳಿದಿರುವುದಿಲ್ಲ.
ಆಧಾರ್ ಕಾರ್ಡ್ನಲ್ಲಿರುವ ಅಧಿಕೃತ ಹಳೆಯ ಫೋಟೋ(Aadhaar card Photo) ಸ್ಪಷ್ಟವಾಗಿರುವುದಿಲ್ಲ. ಇದು ಅನೇಕ ಸಂದರ್ಭಗಳಲ್ಲಿ ಬಹುತೇಕ ಜನರಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ದಾಖಲಾತಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್ನಲ್ಲಿರುವ ಫೋಟೋ ಸ್ಪಷ್ಟವಾಗಿಲ್ಲದ್ದರಿಂದ ಸಮಸ್ಯೆ ಎದುರಾಗಬಹುದು. ಹೀಗಾಗಿ ಅದನ್ನು ಬದಲಾಯಿಸಲು ಅನೇಕರು ಬಯಸುತ್ತಾರೆ. ಹಾಗಾದರೆ ಆಧಾರ್ ನಲ್ಲಿ ಹಳೆಯ ಫೋಟೋ ಬದಲಿಗೆ ಹೊಸ ಫೋಟೋ ಅಪ್ಡೇಟ್ ಮಾಡುವುದು ಹೇಗೆ..? ಈ ಬಗ್ಗೆ ಪ್ರತಿಯೊಬ್ಬರಿಗೂ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ…
ಇದನ್ನೂ ಓದಿ: Aadhar Card ನಿಯಮಗಳಲ್ಲಿ ಬದಲಾವಣೆ : ಮಾಹಿತಿ ನೀಡಿದೆ UIDAI ; ಇದರಿಂದ ನಿಮ್ಮ ಮೇಲೆ ಏನು ಪರಿಣಾಮ ಬೀರಲಿದೆ?
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಸಂಸ್ಥೆಯು ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಅಧಿಕೃತ ಫೋಟೋ(Aadhaar card Photo Change)ವನ್ನು ಸರಳ ಮತ್ತು ಸುಲಭ ಹಂತಗಳಲ್ಲಿ ಬದಲಾಯಿಸಲು ಅನುಮತಿಸುತ್ತದೆ.
ಆಧಾರ್ ಕಾರ್ಡ್ ನಲ್ಲಿ ಅಧಿಕೃತ ಫೋಟೋ ಬದಲಾಯಿಸುವುದು ಹೇಗೆ?
UIDAI ಆಧಾರ್ ಕಾರ್ಡ್ನಲ್ಲಿ ತಮ್ಮ ಫೋಟೋವನ್ನು ಬದಲಾಯಿಸಲು ಬಯಸುವ ಜನರು ಆನ್ಲೈನ್ನಲ್ಲಿ ಮನವಿ(Online Application) ಸಲ್ಲಿಸಬೇಕಾಗುತ್ತದೆ. ಆನ್ಲೈನ್ ಅರ್ಜಿ ಸಲ್ಲಿಸಿದ ಬಳಿಕ ಹೊಸ ಅಧಿಕೃತ ಛಾಯಾಚಿತ್ರಕ್ಕಾಗಿ ತಮ್ಮ ಮನೆಯ ಹತ್ತಿರದ UIDAI ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ನಿಮ್ಮ ಆಧಾರ್ ಕಾರ್ಡ್ ಛಾಯಾಚಿತ್ರವನ್ನು ಅಪ್ಡೇಟ್ ಮಾಡಲು ಆನ್ಲೈನ್/ಆಫ್ಲೈನ್ ಪ್ರಕ್ರಿಯೆಗಳಿಗಾಗಿ ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ.
ಹಂತ 1: ಅಧಿಕೃತ UIDAI ವೆಬ್ಸೈಟ್ಗೆ ಹೋಗಿ
ಹಂತ 2: ಆಧಾರ್ ನೋಂದಣಿ ನಮೂನೆಯನ್ನು ಡೌನ್ಲೋಡ್ ಮಾಡಿ
ಹಂತ 3: ಅಗತ್ಯ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ
ಹಂತ 4: ನಿಮಗೆ ಹತ್ತಿರವಿರುವ ಆಧಾರ್ ದಾಖಲಾತಿ ಕೇಂದ್ರಕ್ಕೆ ಹೋಗಿ
ಹಂತ 5: ಫಾರ್ಮ್ ಅನ್ನು ಆಧಾರ್ ದಾಖಲಾತಿ ಕಾರ್ಯನಿರ್ವಾಹಕರಿಗೆ ಸಲ್ಲಿಸಿ
ಹಂತ 6: ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ನಿಮ್ಮ ವಿವರಗಳನ್ನು ಪರಿಶೀಲಿಸಿ
ಹಂತ 7: ಆಧಾರ್ ಸೇವಾ ಕೇಂದ್ರದಲ್ಲಿ ಸೆರೆಹಿಡಿಯಲಾದ ಹೊಸ ಅಧಿಕೃತ ಛಾಯಾಚಿತ್ರವನ್ನು ಪಡೆದುಕೊಳ್ಳಿ
ಹಂತ 8: ನಿಮ್ಮ ಛಾಯಾಚಿತ್ರವನ್ನು ನವೀಕರಿಸಲು ಶುಲ್ಕ ಪಾವತಿಸಿ (25 ರೂ. + ಜಿಎಸ್ಟಿ)
ಹಂತ 9: ನಿಮ್ಮ ಅಪ್ಡೇಟ್ ವಿನಂತಿ ಸಂಖ್ಯೆ (ಯುಆರ್ಎನ್) ತೋರಿಸುವ ಸ್ವೀಕೃತಿ ಸ್ಲಿಪ್ ಅನ್ನು ಸ್ವೀಕರಿಸಿ
ಹಂತ 10: UIDAI ವೆಬ್ಸೈಟ್ನಲ್ಲಿ ಅಧಿಕೃತ ಛಾಯಾಚಿತ್ರ ಅಪ್ಡೇಟ್ ವಿನಂತಿಯ ಸ್ಥಿತಿಯನ್ನು ಪರಿಶೀಲಿಸಲು ನೀವು ಈ URN ಅನ್ನು ಬಳಸಬಹುದು
ಹಂತ 11: ಹೊಸ ಅಧಿಕೃತ ಛಾಯಾಚಿತ್ರದೊಂದಿಗೆ ಆಧಾರ್ ಕಾರ್ಡ್ ಇ-ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ
ಹಂತ 12: ಹೊಸ ಭೌತಿಕ ಪಿವಿಸಿ ಆಧಾರ್ ಕಾರ್ಡ್ಗಾಗಿ ವಿನಂತಿಸಲು ಯುಐಡಿಎಐ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿ
ಇದನ್ನೂ ಓದಿ: Aadhaar Card: ಆಧಾರ್ ಕಾರ್ಡ್ ನಿಯಮ ಬದಲಾವಣೆ, ನಿಮ್ಮ ಮೇಲೆ ನೇರ ಪರಿಣಾಮ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.