EPFO Big Decision: ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯ, ಇಲ್ಲದಿದ್ದರೆ ಹಾನಿ ಸಾಧ್ಯತೆ

EPFO New Rule - ಪ್ರಾವಿಡೆಂಟ್ ಫಂಡ್ ಖಾತೆದಾರರಿಗಾಗಿ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. PF ಗೆ ಸಂಬಂಧಿಸಿದಂತೆ EPFO ಮಹತ್ವದ ನಿರ್ಧಾರ ಕೈಗೊಂಡಿದೆ. ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯಿಸಲಿದೆ.

Written by - Nitin Tabib | Last Updated : May 29, 2021, 06:25 PM IST
  • ಜೂನ್ 1 ರಿಂದ EPFO ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ.
  • ಕಂಪನಿಗಳಿಗೆ ತಮ್ಮ ನೌಕರರ ಆಧಾರ್ ಜೋಡಣೆಯ ಜವಾಬ್ದಾರಿ ನೀಡಿದ EPFO.
  • ಆಧಾರ್ ಜೋಡಣೆಯಾಗದ ಖಾತೆಗಳ ECR ನಿಂತುಹೋಗಲಿದೆ ಎಂದ EPFO.
EPFO Big Decision: ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯ, ಇಲ್ಲದಿದ್ದರೆ ಹಾನಿ ಸಾಧ್ಯತೆ title=
EPFO New Rule (File Photo)

ನವದೆಹಲಿ: EPFO New Rule - ಪ್ರಾವಿಡೆಂಟ್ ಫಂಡ್ ಖಾತೆದಾರರಿಗಾಗಿ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. PF ಗೆ ಸಂಬಂಧಿಸಿದಂತೆ EPFO ಮಹತ್ವದ ನಿರ್ಧಾರ ಕೈಗೊಂಡಿದೆ. ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯಿಸಲಿದೆ. ನಿಮ್ಮ ನೌಕರಿದಾತರು ನಿಮ್ಮ PF ಖಾತೆಗಳನ್ನು ಆಧಾರ್ ನೊಂದಿಗೆ ದೃಡಪಡಿಸುವ ಜವಾಬ್ದಾರಿ ನೀಡಲಾಗಿದೆ. ಇದು ಒಂದು ವೇಳೆ ಮಾಡದೆ ಹೋದಲ್ಲಿ ನಿಮಗೆ ಭಾರಿ ಹಾನಿಯಾಗುವ ಸಾಧ್ಯತೆ ಇದೆ. ನಿಮ್ಮ ಖಾತೆಗೆ ಬರುವ ನೌಕರಿದಾತರ ಕೊಡುಗೆ ನಿಂತುಹೋಗಬಹುದು. ಹೀಗಾಗಿ ಸಮಯ ಇರುವಂತೆಯೇ ನೀವೂ ಕೂಡ ನಿಮ್ಮ PF ಖಾತೆಯನ್ನು ಆಧಾರ್ ಗೆ ಲಿಂಕ್ ಮಾಡಿ. ಜೊತೆಗೆ UAN ಕೂಡ ಅಧಾರ ವೆರಿಫೈಡ್ ಆಗಿರಬೇಕು.

ಏನಿದು ಹೊಸ ಆದೇಶ?
EPFO
ಸೋಸಿಯಲ್ ಸೆಕ್ಯೂರಿಟಿ ಕೋಡ್ 2020ರ ಸೆಕ್ಷನ್ 142 ಅಡಿ ಈ ಹೊಸ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ನೌಕರಿದಾತ ಕಂಪನಿಗೆ ನಿರ್ದೇಶನಗಳನ್ನು ನೀಡಿರುವ EPFO, ಜೂನ್ 1ರ ಬಳಿಕ ಒಂದು ವೇಳೆ ಯಾವುದೇ ಒಂದು PF ಖಾತೆ ಆಧಾರ್ ಜೊತೆಗೆ ಲಿಂಕ್ ಆಗಿಲ್ಲ ಅಥವಾ UAN ಆಧಾರ್ ವೆರಿಫೈಡ್ ಆಗಿಲ್ಲ ಎಂದಾದರೆ, ಆ ನೌಕರರ ECR- ಇಲೆಕ್ಟ್ರಾನಿಕ್ ಚಲಾನ್ ಕಮ್ ರಿಟರ್ನ್(Electronic Challan cum Return) ಭರ್ತಿ ಮಾಡಲಾಗುವುದಿಲ್ಲ ಎಂದಿದೆ. ಇಂತಹ ಪರಿಸ್ಥಿತಿಯಲ್ಲಿ PF ಖಾತೆದಾರರಿಗೂ ಕೂಡ ನೌಕರಿದಾತರಿಂದ ಬರುವ ಭಾಗ ನಿಂತುಹೋಗುವ ಸಾಧ್ಯತೆ ಇದೆ.

ಇದನ್ನೂ ಓದಿ0-Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI

ಅಧಿಸೂಚನೆ ಜಾರಿ
ಇದಕ್ಕೆ ಸಂಬಂಧಿಸಿದಂತೆ EPFO ನೌಕರಿದಾತ ಕಂಪನಿಗೆ ನೋಟಿಸ್ ಕೂಡ ಜಾರಿಮಾಡಿದೆ. ಈ ಅಧಿಸೂಚನೆಯಲ್ಲಿ ಜೂನ್ 2021ರಿಂದ ಯಾವುದೇ ಸದಸ್ಯರ ಖಾತೆ ಆಧಾರ್ ಜೊತೆ ಲಿಂಕ್ ಇಲ್ಲ ಎಂದಾದಲ್ಲಿ ECR ಸಲ್ಲಿಸುವ ಅವಕಾಶ ಅವರಿಗೆ ನೀಡಲಾಗುವುದಿಲ್ಲ ಎಂದಿದೆ. ಜೊತೆಗೆ ಒಂದು ವೇಳೆ PFಖಾತೆದಾರರ ಅಕೌಂಟ್ ಆಧಾರ್ ಜೊತೆಗೆ ಲಿಂಕ್ ಇಲ್ಲ ಎಂದಾದರೆ, ಅವರು EPFO ಸೇವೆಗಳನ್ನು ಬಳಸುವ ಹಾಗಿಲ್ಲ. ನಮ್ಮ ಅಂಗ ಸಂಸ್ಥೆ ZEE BUSINESS ಬಳಿ ಈ ಅಧಿಕೃತ ಆದೇಶದ ಪ್ರತಿ ಇದೆ.

ಇದನ್ನೂ ಓದಿ-RBI News - ಬ್ಯಾಂಕ್ ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಶೀಘ್ರವೇ ನಿಮ್ಮ ಹಣದ ಸುರಕ್ಷತೆಗೆ ಜಾರಿಯಾಗಲಿದೆ ಈ ಸಿಸ್ಟಂ

PF ಖಾತೆಯನ್ನು AADHAAR ಜೊತೆಗೆ ಲಿಂಕ್ ಮಾಡಲು ಇಲ್ಲಿವೆ ಐದು ಸುಲಭ Steps
>>ಸ್ಟೆಪ್ 1 -
ಎಲ್ಲಕ್ಕಿಂತ ಮೊದಲು ನೀವು PFನ ಅಧಿಕೃತ ವೆಬ್ ಸೈಟ್ ಆಗಿರುವ www.epfindia.gov.inಗೆ ಭೇಟಿ ನೀಡಬೇಕು.

>>ಸ್ಟೆಪ್ 2 - ಇದಾದ ಬಳಿಕ Online Services >> e-KYC Portal>> link UAN aadhar ಲಿಂಕ್ ಮೇಲೆ ಕ್ಲಿಕ್ಕಿಸಬೇಕು.

>>ಸ್ಟೆಪ್ 3 - ಇಲ್ಲಿ ನೀವು ನಿಮ್ಮ UAN ಸಂಖ್ಯೆ ಹಾಗೂ UAN ಖಾತೆಗೆ ಜೋಡಿಸಲಾಗಿರುವ ರಿಜಿಸ್ಟರ್ ಮೊಬೈಲ್ ಅನ್ನು ನಮೂದಿಸಬೇಕು.

>>ಸ್ಟೆಪ್ 4 - ಇದೀಗ ನೀವು ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ, ಅದರ ಕೆಳಗೆ ನೀಡಲಾಗಿರುವ ಬಾಕ್ಸ್ ನಲ್ಲಿ ನಿಮ್ಮ 12 ಅಂಕಗಳ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಅದಾದ ಬಳಿಕ ನೀವು ಫಾರ್ಮ್ ಸಬ್ಮಿಟ್ ಮಾಡಬೇಕು. ಈಗ ನಿಮ್ಮ ಮುಂದೆ ಪ್ರೋಸೀಡ್ ಟು OTP ವೆರಿಫಿಕೆಶನ್ ಆಪ್ಶನ್ ಕಾಣಿಸಿಕೊಳ್ಳಲಿದೆ, ನೀವು ಅದನ್ನು ಕ್ಲಿಕ್ಕಿಸಬೇಕು.

>>ಸ್ಟೆಪ್ 5 - ಇದೀಗ ಮತ್ತೊಮ್ಮೆ ನೀವು ನಿಮ್ಮ ಆಧಾರ್ ಡಿಟೇಲ್ ಗಳನ್ನು ಪರಿಶೀಲನೆಗೆ ಒಳಪಡಿಸಲು ನಿಮ್ಮ ಆಧಾರ್ ಜೊತೆಗೆ ಲಿಂಕ್ ಮಾಡಲಾಗಿರುವ ಮೊಬೈಲ್ ಸಂಖ್ಯೆಗೆ OTP ಜನರೇಟ್ ಮಾಡಬೇಕು. ಈ ವೆರಿಫಿಕೆಶನ್ ಪೂರ್ಣಗೊಂಡ ಬಳಿಕ ನಿಮ್ಮ ಆಧಾರ್ ಸಂಖ್ಯೆ ನಿಮ್ಮ PF ಖಾತೆ ಜೊತೆಗೆ ಲಿಂಕ್ ಆಗಲಿದೆ. 

ಇದನ್ನೂ ಓದಿ-SBI Bank Latest Update: ನಿಮಗೂ Online Bankingನಲ್ಲಿ ಈ ಸಮಸ್ಯೆ ಎದುರಾಗುತ್ತಿದೆಯೇ? ಈ ಲಿಂಕ್ ಬಳಸಿ ಸಮಸ್ಯೆ ಪರಿಹರಿಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News