Toll Plaza Rules Change: ಟೋಲ್ ಪ್ಲಾಜಾ ನಿಯಮಗಳಲ್ಲಿ ಭಾರೀ ಬದಲಾವಣೆ!

Toll Plaza Rules Change: ನೀವು ಸಹ ಹೆದ್ದಾರಿಯಲ್ಲಿ ಪ್ರಯಾಣಿಸಲು ಟೋಲ್ ತೆರಿಗೆಯ ಬಗ್ಗೆ ಚಿಂತಿಸುತ್ತಿದ್ದರೆ, ಇನ್ಮುಂದೆ ನಿಮ್ಮ ಚಿಂತೆ ದೂರವಾಗಬಹುದು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. 

Written by - Yashaswini V | Last Updated : Apr 12, 2023, 06:26 PM IST
  • ಹೆದ್ದಾರಿ ಪ್ರಯಾಣಿಕರಿಗೆ ಗುಡ್ ನ್ಯೂಸ್
  • ಟೋಲ್ ಪ್ಲಾಜಾ ನಿಯಮಗಳಲ್ಲಿ ದೊಡ್ಡ ಬದಲಾವಣೆ
Toll Plaza Rules Change: ಟೋಲ್ ಪ್ಲಾಜಾ ನಿಯಮಗಳಲ್ಲಿ ಭಾರೀ ಬದಲಾವಣೆ! title=

Big change in toll tax rules: ಕೋಟ್ಯಾಂತರ ವಾಹನ ಸವಾರರಿಗೆ ಗುಡ್ ನ್ಯೂಸ್ ಒಂದಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದು ಇದು ಕೋಟ್ಯಂತರ ವಾಹನ ಮಾಲೀಕರ ಮೇಲೆ ಪರಿಣಾಮ ಬೀರಲಿದೆ. 2024 ರ ಮೊದಲು ಭಾರತದಲ್ಲಿ 26 ಹಸಿರು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುವುದು ಮತ್ತು ಅದೇ ಸಮಯದಲ್ಲಿ ಟೋಲ್ ತೆರಿಗೆಗೆ ಹೊಸ ನಿಯಮಗಳನ್ನು ಹೊರಡಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ತಂತ್ರಜ್ಞಾನದಲ್ಲಿಯೂ ಬದಲಾವಣೆಯಾಗಲಿದೆ, ಗ್ರೀನ್ ಎಕ್ಸ್ ಪ್ರೆಸ್ ವೇ ನಿರ್ಮಾಣವಾದ ನಂತರ ಭಾರತವು ರಸ್ತೆಗಳ ವಿಷಯದಲ್ಲಿ ಅಮೆರಿಕಕ್ಕೆ ಸರಿಸಾಟಿಯಾಗಲಿದೆ. ಇದರೊಂದಿಗೆ ಟೋಲ್ ತೆರಿಗೆ ಸಂಗ್ರಹಿಸುವ ನಿಯಮಗಳು ಮತ್ತು ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.  

ಇದನ್ನೂ ಓದಿ- PPF ಖಾತೆದಾರರೇ ಗಮನಿಸಿ: ಈಗಲೇ ಈ ಕೆಲಸ ಪೂರ್ಣಗೊಳಿಸದಿದ್ದರೆ ಅಕೌಂಟ್ ಲಾಕ್ ಆದೀತು ಎಚ್ಚರ!

ಮುಂದಿನ ದಿನಗಳಲ್ಲಿ ಟೋಲ್ ವಸೂಲಾತಿಗೆ 2 ಆಯ್ಕೆಗಳನ್ನು ನೀಡಲು ಸರ್ಕಾರ ಯೋಜಿಸುತ್ತಿದೆ. ಇದರಲ್ಲಿ ಕಾರುಗಳಲ್ಲಿ 'ಜಿಪಿಎಸ್' ವ್ಯವಸ್ಥೆಗಳನ್ನು ಅಳವಡಿಸುವುದು ಮೊದಲ ಆಯ್ಕೆಯಾಗಿದೆ. ಆದರೆ, ಎರಡನೆಯ ವಿಧಾನವು ಇತ್ತೀಚಿನ ನಂಬರ್ ಪ್ಲೇಟ್‌ಗೆ ಸಂಬಂಧಿಸಿದೆ. ಸದ್ಯ ಇದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ.

ಟೋಲ್ ಟ್ಯಾಕ್ಸ್ ಪಾವತಿಸದಿದ್ದಕ್ಕಾಗಿ ಯಾವುದೇ ರೀತಿಯ ಶಿಕ್ಷೆಯ ನಿಬಂಧನೆ ಇಲ್ಲ. ಮುಂದಿನ ದಿನಗಳಲ್ಲಿ ಟೋಲ್ ತೆರಿಗೆ ಸಂಗ್ರಹಿಸಲು ತಂತ್ರಜ್ಞಾನದ ಬಳಕೆ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 

ಇದನ್ನೂ ಓದಿ- IRCTC ವತಿಯಿಂದ 12 ದಿನಗಳ ಕಾಲ ವಿಶೇಷ ತೀರ್ಥಯಾತ್ರೆ! ಮೇ 4 ರಿಂದ ಅಗ್ಗದ ಬೆಲೆಯಲ್ಲಿ ತೀರ್ಥ ಕ್ಷೇತ್ರ ದರ್ಶನ

ಇಲ್ಲಿಯವರೆಗೆ ಟೋಲ್ ಪಾವತಿಸದಿದ್ದಕ್ಕಾಗಿ ಶಿಕ್ಷೆಯ ನಿಬಂಧನೆ ಇಲ್ಲ, ಆದರೆ ಟೋಲ್ ಬಗ್ಗೆ ಬಿಲ್ ತರಲು ಸಿದ್ಧತೆ ನಡೆಯುತ್ತಿದೆ. ಈಗ ಟೋಲ್ ತೆರಿಗೆಯನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಇದಕ್ಕೆ ಪ್ರತ್ಯೇಕ ಕ್ರಮ ಕೈಗೊಳ್ಳುವುದಿಲ್ಲ. ಈಗ ಟೋಲ್ ಟ್ಯಾಕ್ಸ್ ಕಟ್ಟಬೇಕಾಗಿಲ್ಲ, ನಿಮ್ಮ ಖಾತೆಯಿಂದ ನೇರವಾಗಿ ಹಣ ಕಡಿತಗೊಳಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News