Gold Price Today: ಕೆಲ ದಿನಗಳಿಂದ ಚಿನ್ನದ ಬೆಲೆ ಗಗನಕ್ಕೇರಿತ್ತು. ದಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು. ಬಂಗಾರ ಕೊಳ್ಳುವುದು ಇನ್ನೂ ಕನಸು ಮಾತ್ರ ಎಂಬಂತಾಗಿತ್ತು. ಆದರೆ ಇದೀಗ ಸತತ ಎರಡು ದಿನ ಚಿನ್ನದ ಬೆಲೆ ಕುಸಿದಿರುವುದು ಕೊಂಚ ನೆಮ್ಮದಿ ತಂದಿದೆ. ಅಂತಾರಾಷ್ಟ್ರೀಯ ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ 2000 ಡಾಲರ್‌ಗಿಂತ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಸ್ಪಾಟ್ ಬೆಳ್ಳಿ ದರವು ಪ್ರತಿ ಔನ್ಸ್‌ಗೆ 25.25 ಡಾಲರ್‌ಗಳನ್ನು ತಲುಪಿತು. ಡಾಲರ್ ಕುಸಿಯುತ್ತಿರುವಾಗ, ರೂಪಾಯಿ ಬೆಲೆ ಏರಿಕೆಯಾಗುತ್ತಿದೆ. ಪ್ರಸ್ತುತ, ಡಾಲರ್ ಎದುರು ರೂಪಾಯಿ ವಿನಿಮಯ ದರ 81.925 ರೂ.ನಲ್ಲಿ ಮುಂದುವರಿದಿದೆ.
ಈಗ ಭಾರತದಲ್ಲಿ 10 ಗ್ರಾಂ 22k ಚಿನ್ನದ ಬೆಲೆ ₹55,940 ಆಗಿದ್ದರೆ, 10 ಗ್ರಾಂ 24k ಬಂಗಾರದ ಬೆಲೆ ₹61,030 ಆಗಿದೆ. ಇನ್ನೂ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೆಳ್ಳಿಯ ದರ ಸ್ಥಿರವಾಗಿದ್ದು, ಕೆಜಿಗೆ ₹78,500 ಗೆ ವಹಿವಾಟು ನಡೆಸುತ್ತಿದೆ.
ಇದನ್ನೂ ಓದಿ: ಕೇವಲ ರೂ.456 ಕ್ಕೆ ಸಿಗಲಿದೆ 4 ಲಕ್ಷ ರೂ.ಗಳ ಲಾಭ, ಸರ್ಕಾರಿ ಬ್ಯಾಂಕುಗಳಿಗೆ ಆದೇಶ ನೀಡಿದ ಕೇಂದ್ರ ಸರ್ಕಾರ!
ಹೈದರಾಬಾದ್ ನಗರದಲ್ಲಿ 10 ಗ್ರಾಂ ಚಿನ್ನದ ಬೆಲೆ ಇತ್ತೀಚೆಗೆ 22 ಕ್ಯಾರೆಟ್‌ಗಳಿಗೆ ಸ್ವಲ್ಪ ಇಳಿಕೆಯಾಗಿ 55,940 ರೂ.ಗೆ ತಲುಪಿದೆ. ಇನ್ನೊಂದೆಡೆ 24ಕ್ಯಾರೆಟ್ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿ ರೂ.61,030 ಆಗಿದೆ. ದೆಹಲಿಯಲ್ಲೂ 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ ರೂ.56,090 ತಲುಪಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ರೂ.61,180ಕ್ಕೆ ತಲುಪಿದೆ.
ಹೈದರಾಬಾದ್, ದೆಹಲಿಯಲ್ಲಿ ಬೆಳ್ಳಿ ದರ ಸ್ಥಿರವಾಗಿದೆ. ದೆಹಲಿಯಲ್ಲಿ ಇತ್ತೀಚಿನ ಬೆಳ್ಳಿ ದರವು ಪ್ರತಿ ಕೆಜಿಗೆ 78,500 ರೂ. ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿಯ ಇತ್ತೀಚಿನ ಬೆಲೆ ರೂ.81,500 ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (10ಗ್ರಾಂ) :
ಬೆಂಗಳೂರು
24K - ₹56,090
22K - ₹61,180
ಚೆನ್ನೈ
24K - ₹56,500
22K - ₹61,640
ಮುಂಬೈ
24K - ₹55,940
22K - ₹61,030
ದೆಹಲಿ
24K - ₹56,090
22K - ₹61,180
ಕೋಲ್ಕತ್ತಾ
24K - ₹55,940
22K - ₹61,030
ಹೈದರಾಬಾದ್
24K - ₹55,940
22K - ₹61,030
ಇದನ್ನೂ ಓದಿ: ಅಕ್ಷಯ ತೃತೀಯ ದಿನ ಚಿನ್ನದ ವಿಚಾರದಲ್ಲಾಗಲಿದೆ ಈ ಬದಲಾವಣೆ! ಖರೀದಿಸುವಾಗ ನೆನಪಿರಲಿ ಈ ವಿಚಾರ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆ (1 ಕೆಜಿ) :
ಚೆನ್ನೈ - ₹81,500
ಮುಂಬೈ - ₹78,500
ದೆಹಲಿ - ₹78,500
ಕೋಲ್ಕತ್ತಾ - ₹78,500
ಬೆಂಗಳೂರು - ₹81,500
ಹೈದರಾಬಾದ್ - ₹81,500
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.