ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಈಗ ಟ್ರೈನ್ ಟಿಕೆಟ್'ಗಾಗಿ ಸರತಿಯಲ್ಲಿ ನಿಲ್ಲುವ ಅಗತ್ಯವಿಲ್ಲ!

South Western Railway: ಆತುರದಲ್ಲಿ ಎಲ್ಲಾದರೂ ಹೋಗುವಾಗ ಕೆಲವೊಮ್ಮೆ ಟ್ರೈನ್ ಟಿಕೆಟ್ ಪಡೆಯುವುದೇ ದೊಡ್ಡ ತಲೆಬಿಸಿ ಆಗುತ್ತದೆ. ಆದರೆ, ಇನ್ನು ಮುಂದೆ ಈ ಚಿಂತೆ ಇರುವುದಿಲ್ಲ. 

Written by - Yashaswini V | Last Updated : Nov 26, 2024, 12:46 PM IST
  • ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು ನೈರುತ್ಯ ರೈಲ್ವೆ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ.
  • ಈ ವ್ಯವಸ್ಥೆಯು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಇರುವಲ್ಲಿಯೇ ಟಿಕೆಟ್ ಪಡೆಯಲು ಅನುವು ಮಾಡಿಕೊಡುತ್ತದೆ.
  • ಈ ವ್ಯವಸ್ಥೆಯು ಪ್ರಯಾಣಿಕರಿಗೆ ಸುಲಭವಾಗಿ ಟ್ರೈನ್ ಟಿಕೆಟ್ ಪಡೆಯಲು ನೆರವಾಗಲಿದೆ.
ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಈಗ ಟ್ರೈನ್ ಟಿಕೆಟ್'ಗಾಗಿ ಸರತಿಯಲ್ಲಿ ನಿಲ್ಲುವ ಅಗತ್ಯವಿಲ್ಲ!  title=

ಬೆಂಗಳೂರು: ಟ್ರೈನ್ ಹೊರಡುವ ಸಮಯವಾದ್ರೂ ಇನ್ನೂ ರೈಲು ಟಿಕೆಟ್ ಸಿಕ್ಕೆ ಇಲ್ಲ ಎಂಬ ಚಿಂತೆ ಇನ್ನುಮುಂದೆ ಇರಲ್ಲ. ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು ನೈರುತ್ಯ ರೈಲ್ವೆ ಎಂ-ಯುಟಿಎಸ್ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆಯು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಇರುವಲ್ಲಿಯೇ ಟಿಕೆಟ್ ಪಡೆಯಲು ಅನುವು ಮಾಡಿಕೊಡುತ್ತದೆ. 

ಹೌದು, ನೈರುತ್ಯ ರೈಲ್ವೆ ಪರಿಚಯಿಸಿರುವ ಎಂ-ಯುಟಿಎಸ್ (ಮೊಬೈಲ್- ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ) ಸಹಾಯದಿಂದ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರು ಇರುವ ಸ್ಥಳದಲ್ಲೇ ಟಿಕೆಟ್ ಪಡೆಯಬಹುದಾಗಿದೆ. ಪ್ರಸ್ತುತ, ಬೆಂಗಳೂರು ನಿಲ್ದಾಣ ಸೇರಿದಂತೆ ಮೂರು ನಿಲ್ದಾಣಗಳಲ್ಲಷ್ಟೆ ಈ ಸೇವೆಯನ್ನು ಪರಿಚಯಿಸಲಾಗಿದೆ. 

ಇದನ್ನೂ ಓದಿ- ಈ ಸರ್ಕಾರಿ ಯೋಜನೆಯಲ್ಲಿ ಕೇವಲ 7 ರೂ. ಉಳಿಸಿ, ತಿಂಗಳಿಗೆ 5000 ರೂ. ಪಡೆಯಿರಿ...!

ಏನಿದು ಎಂ-ಯುಟಿಎಸ್? 
ಎಂ-ಯುಟಿಎಸ್ ಎಂಬುದು ಯಂತ್ರಗಳ ಮೂಲಕ ಸಿಗುವ ಟಿಕೆಟ್. ರೈಲ್ವೆ ನಿಲ್ದಾಣದ ಸುಮಾರು 500 ಮೀಟರ್ ಅಂತರದಲ್ಲಿ ಎಂ-ಯುಟಿಎಸ್ ಟಿಕೆಟ್ ವ್ಯವಸ್ಥೆ ಲಭ್ಯವಿರುತ್ತದೆ. ಎಂ-ಯುಟಿಎಸ್ ಯಂತ್ರಗಳ ಮೂಲಕ ಕಾಯ್ದಿರಿಸದ ಮತ್ತು ಪ್ಲಾಟ್ಫಾರ್ಮ್ ಟಿಕೆಟ್ ಗಳನ್ನು ಪಡೆಯಬಹುದು. 

ಇದನ್ನೂ ಓದಿ- ಅಮೆರಿಕಾ ಕೋರ್ಟಿನಿಂದ ಅರೆಸ್ಟ್ ವಾರಂಟ್ ಬೆನ್ನಲ್ಲೇ ಉದ್ಯಮಿ ಗೌತಮ್ ಅದಾನಿಗೆ ಮತ್ತೊಂದು ಶಾಕ್! ಕುಸಿಯುತ್ತಾ ಅದಾನಿ ಸಾಮ್ರಾಜ್ಯ?

ವಿಶೇಷವಾಗಿ ಹಬ್ಬಗಳ ಸಂದರ್ಭದಲ್ಲಿ ಲಾಂಗ್ ವೀಕ್-ಎಂಡ್ ದಿನಗಳಲ್ಲಿ ರೈಲ್ವೆ ಟಿಕೆಟ್ ಪಡೆಯುವುದು ಹರಸಾಹಸವೇ ಸರಿ. ಇಂತಹ ಸಂದರ್ಭಗಳಲ್ಲಿ ಎಂ-ಯುಟಿಎಸ್ ಪ್ರಯಾಣಿಕರಿಗೆ ಸುಲಭವಾಗಿ ಟ್ರೈನ್ ಟಿಕೆಟ್ ಪಡೆಯಲು ನೆರವಾಗಲಿದೆ. 

ನೈರುತ್ಯ ರೈಲ್ವೆ ನೀಡಿರುವ ಮಾಹಿತಿಗಳ ಪ್ರಕಾರ, ಸದ್ಯ ಈ ವ್ಯವಸ್ಥೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇತರ ನಿಲ್ದಾಣಗಳಲ್ಲೂ ಇದೇ ರೀತಿಯ ವ್ಯವಸ್ಥೆ ಪರಿಚಯಿಸಲು ಯೋಜಿಸಲಾಗಿದೆ ಎಂದು ತಿಳಿದುಬಂದಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News