ಬೆಂಗಳೂರು : ಸರ್ಕಾರವು ಸಾವರಿನ್ ಗೋಲ್ಡ್ ಬಾಂಡ್ (SGB) ಮೂಲಕ ಜನರಿಗೆ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಗೆ ಇಲ್ಲಿಯವರೆಗೆ ಅವಕಾಶ ಕಲ್ಪಿಸಿತ್ತು.ಆದರೆ ಇದೀಗ ಈ ಬಾಂಡ್ ಮೂಲಕ ಜನರಿಗೆ ಚಿನ್ನ ಮಾರಾಟ ಮಾಡುವುದನ್ನು ಸರ್ಕಾರ ನಿಲ್ಲಿಸಲಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ,ಹೂಡಿಕೆದಾರರು 67 ಕಂತುಗಳಲ್ಲಿ 72,274 ಕೋಟಿ ಮೌಲ್ಯದ SGB ಗಳನ್ನು ಖರೀದಿಸಿದ್ದಾರೆ.ಇವುಗಳಲ್ಲಿ 4 ಬಾಂಡ್‌ಗಳು ಸಂಪೂರ್ಣವಾಗಿ ಮೆಚ್ಯೂರ್ ಆಗಿದ್ದು,ಹೂಡಿಕೆದಾರರು ತಮ್ಮ ಹಣವನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.ಆದರೆ,ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಎಂಟು ವರ್ಷಗಳಲ್ಲಿ ಹೂಡಿಕೆದಾರರು 228 ಪ್ರತಿಶತ ಲಾಭ :
ಸಾವರಿನ್ ಗೋಲ್ಡ್ ಬಾಂಡ್ (SGB)ಅನ್ನು ಸರ್ಕಾರವು 2015ರಲ್ಲಿ ಪೇಪರ್ ಗೋಲ್ಡ್ ರೂಪದಲ್ಲಿ ಪ್ರಾರಂಭಿಸಲಾಯಿತು.ಬಾಂಡ್ ಎನ್ನುವುದು ಸರ್ಕಾರ ಅಥವಾ ಕಂಪನಿಗಳು ತೆಗೆದುಕೊಳ್ಳುವ ಒಂದು ರೀತಿಯ ಸಾಲವಾಗಿದೆ.ಹೂಡಿಕೆದಾರರು ಈ ಯೋಜನೆಯಲ್ಲಿ ತಮ್ಮ ಹಣವನ್ನು ಠೇವಣಿ ಮಾಡಿದ್ದು, ಸರ್ಕಾರವು ಅವರಿಗೆ ಹೆಚ್ಚಿನ ಮೊತ್ತದ ಹಣವನ್ನು ಹಿಂದಿರುಗಿಸಬೇಕಾಗುತ್ತದೆ. ಈ ಸ್ಕೀಮ್ ಅನ್ನು RBI ನಿರ್ವಹಿಸುತ್ತದೆ. 2015ರಲ್ಲಿ ಯೋಜನೆ ಪ್ರಾರಂಭವಾದಾಗ,ವಿತರಣೆಯ ಬೆಲೆ ಪ್ರತಿ ಗ್ರಾಂಗೆ 2684 ರೂ.ಆಗಿತ್ತು. 2023 ರಲ್ಲಿ ಈ ಬಾಂಡ್ ಮುಕ್ತಾಯದ ಸಮಯದಲ್ಲಿ ಈ ಮೊತ್ತ ಪ್ರತಿ ಗ್ರಾಂಗೆ 6132 ರೂ.ಗೆ ಏರಿಕೆಯಾಗಿದೆ.ಅಂದರೆ ಎಂಟು ವರ್ಷಗಳಲ್ಲಿ ಹೂಡಿಕೆದಾರರು ಈ ಸ್ಕೀಮ್ ನಿಂದ ಗಳಿಸಿದ್ದು ಸುಮಾರು 228 ಪ್ರತಿಶತದಷ್ಟು ಲಾಭ.
ಇದನ್ನೂ ಓದಿ : ರೈಲ್ವೇ ನಿಲ್ದಾಣ ಕಾಮಗಾರಿ: ಬೆಂಗಳೂರಿನ ಈ ರೈಲು ನಿಲ್ದಾಣದಲ್ಲಿ 92 ದಿನಗಳ ಕಾಲ ರೈಲು ನಿಲುಗಡೆ ಬಂದ್!
85,000 ಕೋಟಿ ರೂ. ಬಾಕಿ :
ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಸರಕಾರವು ಹೂಡಿಕೆದಾರರಿಗೆ ಇನ್ನೂ 85,000 ಕೋಟಿ ರೂ.ಬಾಕಿ ನೀಡಬೇಕಾಗಿದೆ ಎಂದು ಹೇಳಿದೆ. ಮೊದಲು,ಸಾವರಿನ್ ಗೋಲ್ಡ್ ಬಾಂಡ್ (ಎಸ್‌ಜಿಬಿ) ಮೂಲಕ ಚಿನ್ನ ಖರೀದಿಸಲು ಬೇಡಿಕೆ ಹೆಚ್ಚಿತ್ತು.ಹೂಡಿಕೆದಾರರು ಆಗಸ್ಟ್ 14 ರವರೆಗೆ ಸರ್ಕಾರ ನಿಗದಿಪಡಿಸಿದ ಖರೀದಿ ಮತ್ತು ಮಾರಾಟದ ಬೆಲೆಗಿಂತ 8% ವರೆಗೆ ಹೆಚ್ಚು ಪಾವತಿಸಲು ಸಿದ್ಧರಾಗಿದ್ದರು.ಸಾವರಿನ್ ಗೋಲ್ಡ್ ಬಾಂಡ್ ಅನ್ನು ಮಾರುಕಟ್ಟೆಯಲ್ಲಿ ಖರೀದಿಸಲೂ ಬಹುದು, ಮಾರಾಟ ಮಾಡಲೂ ಬಹುದು.ನೀವು ಡಿಮ್ಯಾಟ್ ಖಾತೆಯ ಮೂಲಕ BSE ಮತ್ತು NSE ನಲ್ಲಿ ಬಾಂಡ್‌ಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.ಬಾಂಡ್ ಮಾರಾಟ ಮಾಡುವ ಮೂಲಕ ಲಾಭ ಗಳಿಸಿದರೆ,ಲಾಭದ ಮೇಲೆ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಸಾವರಿನ್ ಗೋಲ್ಡ್ ಬಾಂಡ್ ಎಂದರೇನು? :
ಸಾವರಿನ್ ಗೋಲ್ಡ್ ಬಾಂಡ್ ಚಿನ್ನವನ್ನು ಖರೀದಿಸಲು ಇರುವ ಒಂದು ರೀತಿಯ ಆಯ್ಕೆಯಾಗಿದೆ.ಇದನ್ನು ಸರ್ಕಾರದ ಪರವಾಗಿ ಆರ್‌ಬಿಐ ನೀಡುತ್ತದೆ.ದೇಶದಲ್ಲಿ ಚಿನ್ನದ ಆಮದನ್ನು ತಡೆಯಲು ನವೆಂಬರ್ 2015ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.ಈ ಬಾಂಡ್‌ಗಳು ಗ್ರಾಂ ಚಿನ್ನದ ಲೆಕ್ಕದಲ್ಲಿ ಬರುತ್ತವೆ.ಇಲ್ಲಿ ಒಂದು ಗ್ರಾಂ ಚಿನ್ನಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸಲಾಗಿದೆ.ಈ ಬಾಂಡ್‌ಗಳಿಂದ ಸಿಗುವ ಚಿನ್ನವು ಮಾರುಕಟ್ಟೆ ದರಕ್ಕಿಂತ ಅಗ್ಗವಾಗಿರುತ್ತವೆ.ಈ ಬಾಂಡ್‌ಗಳನ್ನು ಸಾಮಾನ್ಯವಾಗಿ 8 ವರ್ಷಗಳ ಕಾಲ ಇಟ್ಟು ಕೊಳ್ಳಬೇಕು.ನಿಮಗೆ ತೀರಾ ಅಗತ್ಯ ಎನಿಸಿದರೆ ಐದು ವರ್ಷಗಳ ನಂತರವೂ ಮಾರಾಟ ಮಾಡಬಹುದು.ಯಾವುದೇ ವ್ಯಕ್ತಿ ಚಿನ್ನದ ಬಾಂಡ್ ಮೂಲಕ ಕನಿಷ್ಠ 1 ಗ್ರಾಂ ಮತ್ತು ಗರಿಷ್ಠ 4 ಕೆಜಿ ಚಿನ್ನವನ್ನು ಖರೀದಿಸಬಹುದು.ಯಾವುದೇ ಟ್ರಸ್ಟ್ ಅಥವಾ ಸಂಸ್ಥೆಯು ಪ್ರತಿ ವರ್ಷ 20 ಕೆಜಿಯಷ್ಟು ಚಿನ್ನವನ್ನು ಖರೀದಿಸಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.