SBI Platinum Deposits : ಸೆಪ್ಟೆಂಬರ್ 14 ರೊಳಗೆ ಎಸ್ ಬಿಐ ಯಲ್ಲಿ ಈ ವಿಶೇಷ ಡಿಪಾಸಿಟ್ ಮಾಡಿಸಿದರೆ ಸಿಗಲಿದೆ ಅಧಿಕ ಬಡ್ಡಿ

ಭಾರತದ 75 ನೇ ವರ್ಷದ ಸ್ವಾತಂತ್ರ್ಯವನ್ನು ಪ್ಲಾಟಿನಂ ಠೇವಣಿಗಳೊಂದಿಗೆ ಆಚರಿಸುವ ಸಮಯ ಬಂದಿದೆ ಎಂದು, ಎಸ್‌ಬಿಐ ಹೇಳಿದೆ.

Written by - Ranjitha R K | Last Updated : Sep 8, 2021, 01:25 PM IST
  • ಎಸ್‌ಬಿಐ ವಿಶೇಷ ಠೇವಣಿ ಯೋಜನೆಯನ್ನು ಆರಂಭಿಸಿದೆ
  • ಮಾಹಿತಿಯನ್ನು ಟ್ವೀಟ್ ಮಾಡಿರುವ ಬ್ಯಾಂಕ್
  • ವಿಶೇಷ ಠೇವಣಿ ಯೋಜನೆಯ ವೈಶಿಷ್ಟ್ಯಗಳು ಇವು
SBI Platinum Deposits : ಸೆಪ್ಟೆಂಬರ್ 14 ರೊಳಗೆ ಎಸ್ ಬಿಐ ಯಲ್ಲಿ ಈ ವಿಶೇಷ ಡಿಪಾಸಿಟ್ ಮಾಡಿಸಿದರೆ ಸಿಗಲಿದೆ  ಅಧಿಕ ಬಡ್ಡಿ  title=
ಎಸ್‌ಬಿಐ ವಿಶೇಷ ಠೇವಣಿ ಯೋಜನೆಯನ್ನು ಆರಂಭಿಸಿದೆ (file photo)

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of India) 75 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ, ತನ್ನ ಗ್ರಾಹಕರಿಗೆ ಒಂದು ಯೋಜನೆಯನ್ನು ಪರಿಚಯಿಸಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಈ ವಿಶೇಷ ಠೇವಣಿ ಯೋಜನೆಯನ್ನು ಆರಂಭಿಸಿದೆ. ಬ್ಯಾಂಕ್ (Bank) ನೀಡಿದ ಮಾಹಿತಿಯ ಪ್ರಕಾರ, ಎಸ್‌ಬಿಐ ಪ್ಲಾಟಿನಂ ಡಿಪೋಸಿಟ್ (SBI Platinum specal deposit), ವಿಶೇಷ ಠೇವಣಿ ಯೋಜನೆಯಾಗಿದ್ದು, ಇದು ಸೀಮಿತ ಅವಧಿವರೆಗೆ ಮಾತ್ರ ಲಭ್ಯವಿರಲಿದೆ. ನೀವು ಕೂಡ ಹೆಚ್ಚಿನ ಲಾಭ ಗಳಿಸಲು ಬಯಸುವುದಾದರೆ, ಸೆಪ್ಟೆಂಬರ್ 14 ರ ಮೊದಲು ಈ ವಿಶೇಷ ಠೇವಣಿಯನ್ನು ಮಾಡಿಸಬೇಕು.  ಎಸ್‌ಬಿಐ  ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ.

ಟ್ವೀಟ್ ಮೂಲಕ ಮಾಹಿತಿ ನೀಡಿದ ಬ್ಯಾಂಕ್ :
ಭಾರತದ 75 ನೇ ವರ್ಷದ ಸ್ವಾತಂತ್ರ್ಯವನ್ನು ಪ್ಲಾಟಿನಂ ಠೇವಣಿಗಳೊಂದಿಗೆ (SBI Platinum specal deposit) ಆಚರಿಸುವ ಸಮಯ ಬಂದಿದೆ ಎಂದು, ಎಸ್‌ಬಿಐ ಹೇಳಿದೆ. ಎಸ್‌ಬಿಐನಲ್ಲಿ ಟರ್ಮ್ ಡಿಪೋಸಿಟ್ ಮತ್ತು ವಿಶೇಷ ಟರ್ಮ್ ಡಿಪೋಸಿಟ್  (Term deposit benefits) ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಆದರೆ ನೆನಪಿರಲಿ ಈ ವಿಶೇಷ ಕೊಡುಗೆ ಸೆಪ್ಟೆಂಬರ್ 14 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಇದನ್ನೂ  ಓದಿ : Card Tokenisation Rules: ಆರ್‌ಬಿಐ ಕಾರ್ಡ್ ಟೋಕನೈಸೇಶನ್ ನಿಯಮ, ಜನವರಿ 1 ರಿಂದ ಬದಲಾಗಲಿದೆ Card Payment Method

ವಿಶೇಷ ಠೇವಣಿ ಯೋಜನೆಯ ವೈಶಿಷ್ಟ್ಯಗಳು :
1. ಈ ಯೋಜನೆಯಡಿ, ಗ್ರಾಹಕರು ಹಣವನ್ನು 75 ದಿನಗಳು, 525 ದಿನಗಳು ಮತ್ತು 2250 ದಿನಗಳವರೆಗೆ ಡಿಪೋಸಿಟ್ ಮಾಡಬಹುದು .
2. ಅಲ್ಲದೆ, NRE ಮತ್ತು NRO ಟರ್ಮ್ ಡಿಪೋಸಿಟ್ (Term deposit benefits) ಒಳಗೊಂಡಂತೆ, ಡೋಮ್ಯಾಸ್ಟಿಕ್ ರಿಟೇಲ್ ಟರ್ಮ್ ಡಿಪೋಸಿಟ್   (2 ಕೋಟಿಗಿಂತ ಕಡಿಮೆ) ಈ ಸ್ಕೀಮ್  ಲಾಭವನ್ನು ಪಡೆಯಬಹುದು.  
3. ಇದರ ಅಡಿಯಲ್ಲಿ, ಹೊಸ ಮತ್ತು ರಿನಿವಲ್ ಠೇವಣಿಗಳನ್ನು ಸಹ ಮಾಡಬಹುದು.
4. ಹಾಗೆಯೇ ಕೇವಲ ಟರ್ಮ್ ಡಿಪೋಸಿಟ್ ಮತ್ತು ವಿಶೇಷ ಟರ್ಮ್ ಡಿಪೋಸಿಟ್ ಪ್ರಾಡಕ್ಟ್ ಇದೆ. 
5. NRE ಡಿಪೋಸಿಟ್ ಕೇವಲ 525 ಮತ್ತು 2250 ದಿನಗಳವರೆಗೆ ಮಾತ್ರ ಇರಲಿದೆ 

ಇದನ್ನೂ  ಓದಿ : PM Kisan: ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯುವುದು ಇನ್ನೂ ಸುಲಭ, ಎಸ್‌ಬಿಐನಲ್ಲಿ ಕೆಸಿಸಿಗೆ ಈ ರೀತಿ ಅರ್ಜಿ ಸಲ್ಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News