ನವದೆಹಲಿ: Salary On Weekends - ಇನ್ಮುಂದೆ ನೀವು ನಿಮ್ಮ ವೇತನಕ್ಕಾಗಿ ಶನಿವಾರ ಹಾಗೂ ಭಾನುವಾರ ಅಂದರೆ ವಾರಾಂತ್ಯ (Weekend) ಮುಗಿಯುವ ನಿರೀಕ್ಷೆ ಮಾಡಬೇಕಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI), National Automated Clearing House (NACH) ನಿಯಮಗಳಲ್ಲಿ ಬದಲಾವಣೆ ತಂದಿದೆ. ಬರುವ ಆಗಸ್ಟ್ 1, 2021 ರಿಂದ NATCH ಸೌಲಭ್ಯ ವಾರದ ಏಳು ದಿನಗಳವರೆಗೆ ಲಭ್ಯವಿರಲಿದೆ. ಪ್ರಸ್ತುತ ಬ್ಯಾಂಕ್ ಗಳು ಕಾರ್ಯನಿರ್ವಹಿಸುವ ದಿನಗಳಂದು ಮಾತ್ರ ಈ ಸೇವೆ ನೀಡಲಾಗುತ್ತಿದೆ. ಅಂದರೆ, ಸಾಮಾನ್ಯವಾಗಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ NACH ಸೌಕರ್ಯ ಸಿಗುತ್ತದೆ.
ಇದೀಗ ವಾರವಿಡಿ NACH ಸೌಕರ್ಯ ಸಿಗಲಿದೆ
ಹಲವು ಬಾರಿ ವಾರದ ಮೊದಲ ದಿನ ವಾರಾಂತ್ಯಇಕ್ಕೆ ಬೀಳುತ್ತದೆ. ಇದರಿಂದ ವೇತನ ಪಡೆಯುವವ ನೌಕರರು ತಮ್ಮ ವೇತನ ಖಾತೆಗೆ ಬರುವುದಕ್ಕಾಗಿ ಸೋಮವಾರದವರೆಗೆ ಕಾಯಬೇಕಾಗುತ್ತದೆ. RBI ಗವರ್ನರ್ ಶಕ್ತಿಕಾಂತ್ ದಾಸ್, ಇಂದಿನ ತಮ್ಮ ಕ್ರೆಡಿಟ್ ಪಾಲಸಿ ರಿವ್ಯೂ ಸಂದರ್ಭದಲ್ಲಿ ಗ್ರಾಹಕರ ಸೌಕರ್ಯವನ್ನು ಮತ್ತಷ್ಟು ಹೆಚ್ಚಿಸಲು ಹಾಗೂ 24 X7 ಪ್ರಸ್ತುತ ಇರುವ RTGS (Real Time Gross Settlement) ಲಾಭ ಪಡೆಯಲು, NACH ಸೌಲಭ್ಯವನ್ನು ವಾರದ ಏಳೂ ದಿನಗಳಿಗೆ ನೀಡಲು ಪ್ರಸ್ತಾವನೆಯೊಂದನ್ನು ನೀಡಲಾಗಿದ್ದು, ಇದು ಆಗಸ್ಟ್ 1, 2021ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದ್ದಾರೆ.
ಇನ್ಮುಂದೆ ವಾರಾಂತ್ಯದಲ್ಲಿಯೂ ಕೂಡ ವೇತನ, ಪೆನ್ಷನ್, EMI
NACH ಒಂದು ಬಲ್ಕ್ ಪೇಮೆಂಟ್ ಪ್ಲಾಟ್ ಫಾರ್ಮ್ ಆಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ನಿರ್ವಹಿಸುತ್ತದೆ. ಇದು ಹಲವು ರೀತಿಯ ಕ್ರೆಡಿಟ್ ಟ್ರಾನ್ಸ್ಫರ್ ಸೇವೆಗಳಾಗಿರುವ ಡಿವಿಡೆಂಡ್ (Dividend), ಬಡ್ಡಿ, ವೇತನ ಹಾಗೂ ಪೆನ್ಷನ್ (Pension) ಸೌಕರ್ಯ ಒದಗಿಸುತ್ತದೆ. ಇದಲ್ಲದೆ ವಿದ್ಯುತ್ ಬಿಲ್, ಅಡುಗೆ ಅನಿಲ, ಟೆಲಿಫೋನ್, ನೀರು. ಸಾಲ, EMI, ಮ್ಯೂಚವಲ್ ಫಂಡ್ ಹಾಗೂ ಇನ್ಸುರನ್ಸ್ ಪಾವತಿಯ ಸೌಲಭ್ಯ ನೀಡುತ್ತದೆ. ಅಂದರೆ, ಇನ್ಮುಂದೆ ಈ ಎಲ್ಲಾ ಸೇವೆಗಳನ್ನು ಪಡೆಯಲು ಸೋಮವಾರದಿಂದ ಶುಕ್ರವಾರದವರೆಗೆ ಕಾಯಬೇಕಾಗಿಲ್ಲ. ಇವುಗಳನ್ನು ನೀವು ವೀಕ್ ಎಂಡ್ ನಲ್ಲಿಯೂ ಕೂಡ ಮಾಡಬಹುದು.
ಇದನ್ನೂ ಓದಿ- Covid-19 Vaccine: 'ಭಾರತದಲ್ಲಿ ಮಕ್ಕಳಿಗೂ ಕೂಡ Pfizer Corona Vaccine ಹಾಕಲಾಗುವುದು'
ಈ ಕುರಿತು ಹೇಳಿಕೆ ನೀಡಿರುವ RBI, NACH ಲಾಭಾರ್ಥಿಗಳಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (DBT) ಒಂದು ಪ್ರಮುಖ ಡಿಜಿಟಲ್ ಮೋಡ್ ರೂಪದಲ್ಲಿ ಮುಂದೆ ಬಂದಿದ್ದು, ಪ್ರಸ್ತುತ ಸಮಯದಲ್ಲಿ ಕೊವಿಡ್-19 (Covid-19) ಕಾಲಾವಧಿಯಲ್ಲಿ ಸಮಯಕ್ಕೆ ಹಾಗೂ ಪಾರದರ್ಶಕವಾಗಿ ಸಬ್ಸಿಡಿ ವರ್ಗಾವಣೆಯಲ್ಲಿ ಸಹಾಯ ಮಾಡುತ್ತಿದೆ. ಪ್ರಸ್ತುತ NACH ಸೇವೆಗಳನ್ನು ಕೇವಲ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿರುವ ದಿನಗಳಲ್ಲಿ ಮಾತ್ರ ಲಭ್ಯವಿದೆ. ಆದರೆ, ಆಗಸ್ಟ್ 1 ರಿಂದ ಈ ಸೇವೆ ವಾರದ ಏಳೂ ದಿನಗಳವರೆಗೆ ಲಭ್ಯವಿರಲಿದೆ.
ಇದನ್ನೂ ಓದಿ- CSIR ಸಭೆಯಲ್ಲಿ PM Modi ನೀಡಿದ ಮುನ್ಸೂಚನೆಯ ಎಚ್ಚರಿಕೆ ಏನು?
ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ (RBI Credit Policy)
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಸತತ ಆರನೇ ಬಾರಿಗೆ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೊರೊನಾ ಮಹಾಮಾರಿಯ ಎರಡನೇ ಅಲೆ ಹಾಗೂ ಹಣದುಬ್ಬರದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು RBI ಗವರ್ನರ್ ಶಕ್ತಿಕಾಂತ್ ದಾಸ್, ಮಾರುಕಟ್ಟೆಯ ಭರವಸೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು (ಶೇ.4 ರಷ್ಟು), ರಿವರ್ಸ್ ರೆಪೋ ರೇಟ್ ಅನ್ನು (ಶೇ.3.35 ರಷ್ಟು) ಹಾಗೂ ಕ್ಯಾಶ್ ರಿಜರ್ವ್ ರೆಶ್ಯೂ (CRR-4% ರಷ್ಟು)ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇದನ್ನೂ ಓದಿ-RBI Credit Policy: 6ನೇ ಸಲವೂ ಬಡ್ಡಿದರದಲ್ಲಿ ಬದಲಾವಣೆ ಇಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ