ನವದೆಹಲಿ: Punjab National Bank Free Training - ಮಹಿಳೆಯರ ಸಬಲೀಕರಣಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (Panjab National Bank) ಹಲವು ಸೌಕರ್ಯಗಳನ್ನು ಒದಗಿಸುತ್ತದೆ. ಇದೀಗ ಮತ್ತೊಮ್ಮೆ ಸಾರ್ವಜನಿಕ ವಲಯದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಶೇಷವಾಗಿ ಮಹಿಳೆಯರಿಗೆಂದೇ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಸರ್ಕಾರ ಕೂಡ ಸಹಾಯ ಮಾಡುತ್ತಿದೆ. ಅಷ್ಟೇ ಅಲ್ಲ ಮಹಿಳೆಯರು ಈ ಕಾರ್ಯಕ್ರಮಕ್ಕಾಗಿ ಉಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ. ನೀವೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯುಸುತ್ತಿದ್ದರೆ, ಕೆಲ ಮಹತ್ವದ ಸಂಗತಿಗಳನ್ನು ಗಮನದಲ್ಲಿಡಬೇಕು.
Enroll in the online training program 'Empowering Women Through Entrepreneurship' and open the doors of opportunity for yourself.
The registration for the program can be done through https://t.co/aqutPkFAUw.
The last date to apply is 15th April 2021. pic.twitter.com/XIothmXecJ
— Punjab National Bank (@pnbindia) April 12, 2021
ಟ್ವೀಟ್ ಮಾಡುವ ಮೂಲಕ ಬ್ಯಾಕ್ ಈ ಕುರಿತು ಮಾಹಿತಿ ನೀಡಿದೆ. ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಬ್ಯಾಂಕ್, ಈ ಕಾರ್ಯಕ್ರಮಕ್ಕಾಗಿ ನೀವು ಆನ್ಲೈನ್ ನಲ್ಲಿ ಹೆಸರನ್ನು ನೊಂದಾಯಿಸಬಹುದು. ರಿಜಿಸ್ಟ್ರೇಷನ್ ಗಾಗಿ ಏಪ್ರಿಲ್ 15, 2021 ಕೊನೆಯ ದಿನಾಂಕ ಎಂದು ಹೇಳಲಾಗಿದೆ.
NCW ವತಿಯಿಂದ ಆಯೋಜಿಸಲಾಗುತ್ತಿದೆ ಈ ಕಾರ್ಯಕ್ರಮ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಯೋಜಿಸುತ್ತಿರುವ ಈ ತರಬೇತಿ ಕಾರ್ಯಕ್ರಮ ರಾಷ್ಟ್ರೀಯ ಮಹಿಳಾ ಆಯೋಗದ (National Commission For Women) ವತಿಯಿಂದ ಆಯೋಜಿಸಲಾಗುತ್ತಿದೆ. ಬ್ಯಾಂಕ್ (Punjab National Bank) ಈ ಕಾರ್ಯಕ್ರಮಕ್ಕೆ 'ಎಂಪೌರಿಂಗ್ ವಿಮೆನ್ ಥ್ರೂ ಅಂತ್ರಾಪ್ರಿನ್ಯೂರ್ ಶಿಪ್ (Empowering Women Through Entrepreneurship)' ಹೆಸರನ್ನಿಟ್ಟಿದೆ. ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನೀವು https://innovateindia.mygov.in/ncw-challenge/ ಜಾಲತಾಣಕ್ಕೆ ಭೇಟಿ ನೀಡಬಹುದು.
ಎಷ್ಟು ವಾರಗಳವರೆಗೆ ಈ ಕೋರ್ಸ್ ನಡೆಯಲಿದೆ
ಈ ಕಾರ್ಯಕ್ರಮದ ಅಡಿ ಮಹಿಳೆಯರಿಗೆ ಒಟ್ಟು ವಾರಗಳ ವಾರಗಳವರೆಗೆ ತರಬೇತಿ ನೀಡಲಾಗುತ್ತಿದೆ. ಇದೊಂದು ಆಕ್ಷನ್ ಓರಿಎಂಟೆಡ್ ಬಿಸಿನೆಸ್ ಹಾಗೂ ಮ್ಯಾನೇಜ್ಮೆಂಟ್ ಕೋರ್ಸ್ ಆಗಿದೆ. ಈ ಕಾರ್ಯಕ್ರಮದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದರ ಜೊತೆಗೆ ವೈಜ್ಞಾನಿಕ ಸಂಗತಿಗಳು ಹಾಗೂ ಅವಕಾಶಗಳ ಪರೀಕ್ಷೆಯ ಕುರಿತು ಮಾಹಿತಿ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಯಾವುದೇ ಪ್ರದೇಶಲ್ಲಿರುವ ಮಹಿಳೆಯರು ಭಾಗವಹಿಸಬಹುದು. ಈ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪ್ರತಿಭಾನ್ವಿತ ಮಹಿಳೆಯರಿಗೆ 'ಡೂ ಯುವರ್ ವೆಂಚರ್' ವಿಚಾರಧಾರೆಯ ಅಡಿ ಉದ್ಯೋಗ ಆರಂಭಿಸುವ ಮಾರ್ಗ ತೋರಿಸಲಾಗುವುದು.
ಇದನ್ನೂ ಓದಿ-ಹೈಟೆಕ್ ಆದ PNB, ಹೊಸ ವ್ಯವಸ್ಥೆಯಲ್ಲಿ ತಕ್ಷಣವೇ ಸಿಗುತ್ತೆ ಸಾಲ
ಈ ಷರತ್ತುಗಳು ಅನ್ವಯ
>>ಈ ಕೋರ್ಸ್ ಗಾಗಿ ನೀವು ನಿತ್ಯ 3 ರಿಂದ 4 ಗಂಟೆ ಸಮಯಾವಕಾಶ ನೀಡಬೇಕು.
>>ಕಾರ್ಯಕ್ರಮದಲ್ಲಿ ಭಾಗವಹಿಸುವವರ ವಯಸ್ಸು 18 ಕ್ಕಿಂತ ಹೆಚ್ಚಾಗಿರಬೇಕು.
>>ಭಾಗವಹಿಸಲು ಇಚ್ಚಿಸುವ ಮಹಿಳೆಯರು ಭಾರತೀಯ ಮೂಲದವರಾಗಿರಬೇಕು.
>>ಕಾರ್ಯಕ್ರಮದಲ್ಲಿ ಭಾಗವಹಿಸಲು ನೀವು ಕನಿಷ್ಠ ಅಂದರೆ ಸುಮಾರು 5 ನಿಮಿಷಗಳ ವಿಡಿಯೋವೊಂದನ್ನು ಕಳುಹಿಸಬೇಕು.
>>ಈ ವಿಡಿಯೋ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿರಬೇಕು.
>>ಬಳಿಕ ನೀವು ಆ ವಿಡಿಯೋ ಅನ್ನು ಯುಟ್ಯೂಬ್ ಅಥವಾ ವಾಯಿಮೋ ಮೂಲಕ ಕಳುಹಿಸಬೇಕು.
ಇದನ್ನೂ ಓದಿ- ಮಹಿಳೆಯರಿಗಾಗಿ PNB ವತಿಯಿಂದ ವಿಶೇಷ ಸ್ಕೀಮ್, ದ್ವಿಚಕ್ರ ವಾಹನ ಖರೀದಿಗೆ ಜಬರ್ದಸ್ತ್ ಆಫರ್
ಒಟ್ಟು 5 ಸಾವಿರ ಮಹಿಳೆಯರ ಆಯ್ಕೆ
ಈ ಕಾರ್ಯಕ್ರಮದ ಉದ್ಯಮಿಯಾಗಲು ಕನಸು ಕಾಣುವ ಸುಮಾರು 5000 ಮಹಿಳೆಯರನ್ನು ಆಯ್ಕೆ ಮಾಡಲಾಗುವುದು. ಆಯ್ದ ಮಹಿಳೆಯರಿಗೆ IIM ಪ್ರೊಫೆಸರ್ ಗಳು ತರಬೇತಿ ನೀಡಲಿದ್ದಾರೆ.
ಇದನ್ನೂ ಓದಿ-.Old Cheque Book Valid News : ಜೂನ್ ೩೦ರವರೆಗೆ ಮಾತ್ರ ಮಾನ್ಯವಾಗಿರಲಿದೆ ಹಳೆಯ ಚೆಕ್ ಬುಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.