ಹಿರಿಯ ನಾಗರಿಕರಿಗೆ ಸುರಕ್ಷಿತ ಉಳಿತಾಯ ಯೋಜನೆ ಇದು ! ಈ ಸ್ಕೀಮ್ ನ ರಿಟರ್ನ್ ಕೂಡಾ ಅಧಿಕ

Senior Citizens Saving Scheme:  ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಪೋಸ್ಟ್ ಆಫೀಸ್ ನೀಡುವ ಸರ್ಕಾರಿ ಹೂಡಿಕೆ ಯೋಜನೆಯಾಗಿದೆ. ಇದು ಪೋಸ್ಟ್ ಆಫೀಸ್‌ನ ಸಣ್ಣ ಉಳಿತಾಯ ಯೋಜನೆಗಳ ಅಡಿಯಲ್ಲಿ ಬರುತ್ತದೆ.   

Written by - Ranjitha R K | Last Updated : Feb 23, 2024, 09:49 AM IST
  • ಈ ಯೋಜನೆಯನ್ನು ಪ್ರಾರಂಭಿಸಲು ಕನಿಷ್ಠ 1000 ರೂ. ಹೂಡಿಕೆ ಮಾಡಿದರೆ ಸಾಕು.
  • ಗರಿಷ್ಠ 30 ಲಕ್ಷ ಹೂಡಿಕೆ ಮಾಡಬಹುದು.
  • ಖಾತೆಯನ್ನು ಆರಂಭದಲ್ಲಿ ಐದು ವರ್ಷಗಳವರೆಗೆ ತೆರೆಯಲಾಗುತ್ತದೆ.
ಹಿರಿಯ ನಾಗರಿಕರಿಗೆ ಸುರಕ್ಷಿತ ಉಳಿತಾಯ ಯೋಜನೆ ಇದು ! ಈ ಸ್ಕೀಮ್ ನ ರಿಟರ್ನ್ ಕೂಡಾ ಅಧಿಕ  title=

Senior Citizens Saving Scheme : ಮನುಷ್ಯನ ಜೀವನದಲ್ಲಿ ಹಣದ ಅವಶ್ಯಕತೆ ಇದ್ದೇ ಇರುತ್ತದೆ.ನಾವು ವಯಸ್ಸಾದಂತೆ ನಮ್ಮ ಆದಾಯ ಮತ್ತು ಹಣದ ಅಗತ್ಯಗಳು ಕೂಡಾ ಬದಲಾಗುತ್ತವೆ. ಒಂದು ನಿರ್ದಿಷ್ಟ ವಯಸ್ಸಿನ ನಂತರ ದೈಹಿಕ ಶಕ್ತಿ ಕುಂದುತ್ತದೆ. ಆಗ ಸಂಪಾದನೆ ಮಾಡುವುದು ಉಳಿತಾಯ ಮಾಡುವುದು ಕಷ್ಟವಾಗಬಹುದು. ಆದ್ದರಿಂದ, ಚಿಕ್ಕ ವಯಸ್ಸಿನಲ್ಲಿ ವೃದ್ಧಾಪ್ಯಕ್ಕಾಗಿ ಹಣವನ್ನು ಕೂಡಿಡುವುದು ಬಹಳ ಮುಖ್ಯ.  ಇದನ್ನು ಗಮನದಲ್ಲಿಟ್ಟುಕೊಂಡು ಅನೇಕರು ನಿವೃತ್ತಿಯ ನಂತರದ ವಿವಿಧ ಹೂಡಿಕೆ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಇದಲ್ಲದೆ, ಹಿರಿಯ ನಾಗರಿಕರು ತಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಮತ್ತು ಆದಾಯವನ್ನು ಗಳಿಸಲು ಸಹಾಯ ಮಾಡುವ ಕೆಲವು ಯೋಜನೆಗಳಿವೆ. 

ಹಿರಿಯ ನಾಗರಿಕರ ಉಳಿತಾಯ ಯೋಜನೆ :
ಹಿರಿಯ ನಾಗರಿಕ ಉಳಿತಾಯ ಯೋಜನೆಯು ಪೋಸ್ಟ್ ಆಫೀಸ್ ನೀಡುವ ಸರ್ಕಾರಿ ಹೂಡಿಕೆ ಯೋಜನೆಯಾಗಿದೆ. ಇದು ಪೋಸ್ಟ್ ಆಫೀಸ್‌ನ ಸಣ್ಣ ಉಳಿತಾಯ ಯೋಜನೆಗಳ ಅಡಿಯಲ್ಲಿ ಬರುತ್ತದೆ. 60 ವರ್ಷ ಮೇಲ್ಪಟ್ಟ ಯಾರೂ ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಸ್ವಯಂ ನಿವೃತ್ತಿ ಯೋಜನೆಯಡಿ VRS ಪಡೆದವರು ಅಂದರೆ ನಿವೃತ್ತರು ಮತ್ತು 55 ವರ್ಷಕ್ಕಿಂತ ಕಡಿಮೆ ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ವ್ಯಕ್ತಿಗಳು SCSS ಖಾತೆಯನ್ನು ತೆರೆಯಬಹುದು. ಇದಲ್ಲದೆ, ರಕ್ಷಣಾ ಸೇವೆಗಳಿಂದ ನಿವೃತ್ತರಾದ 50 ವರ್ಷಕ್ಕಿಂತ ಮೇಲ್ಪಟ್ಟವರು SCSS ನಲ್ಲಿ ಖಾತೆಯನ್ನು ತೆರೆಯಬಹುದು.

ಇದನ್ನೂ ಓದಿ : Arecanut Price in Karnataka: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ

SCSS ನಲ್ಲಿ ಕನಿಷ್ಠ ಹೂಡಿಕೆ ಎಷ್ಟಿರಬೇಕು ? : 
ಈ ಯೋಜನೆಯನ್ನು ಪ್ರಾರಂಭಿಸಲು ಕನಿಷ್ಠ ಹೂಡಿಕೆ 1000 ರೂಪಾಯಿ, ಗರಿಷ್ಠ 30 ಲಕ್ಷ.  ಇದರಲ್ಲಿ, ಆರಂಭದಲ್ಲಿ ಐದು ವರ್ಷಗಳವರೆಗೆ ಖಾತೆಯನ್ನು  ತೆರೆಯಲಾಗುತ್ತದೆ. ನಂತರ, ಅದನ್ನು ಮೂರು ವರ್ಷಗಳವರೆಗೆ ವಿಸ್ತರಿಸಬಹುದು. 

ಆದಾಯ ತೆರಿಗೆ ವಿನಾಯಿತಿ :
ಹಿರಿಯ ನಾಗರಿಕರು ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಯ ಪ್ರಯೋಜನವನ್ನು ಪಡೆಯಬಹುದು. ಇದರ ಮೂಲಕ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ : Formula 12-15-20, ಇದು 25ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ 40ನೇ ವಯಸ್ಸಲ್ಲಿ ಕೋಟ್ಯಾಧಿಪತಿಯಾಗುವ ಸರಳ ಸೂತ್ರ!

SCSS: ಸಂಪೂರ್ಣ ಲೆಕ್ಕಾಚಾರ
- ಒಟ್ಟು ಠೇವಣಿ:  5 ಲಕ್ಷ
- ಯೋಜನೆಯ ಅವಧಿ: 5 ವರ್ಷಗಳು
- ಬಡ್ಡಿ ದರ: 8.2%
- ಮೆಚುರಿಟಿ ಮೊತ್ತ:  7,05,000 ರೂ.
- ಬಡ್ಡಿ ಆದಾಯ:  2,05,000 ರೂ.
- ತ್ರೈಮಾಸಿಕ ಆದಾಯ:  10,250 ರೂ.

ಹಿರಿಯ ನಾಗರಿಕರಿಗಾಗಿ ಒಂದು ವಿಶಿಷ್ಟ ಕಾರ್ಯಕ್ರಮ : 
ಅಂಚೆ ಕಚೇರಿ ಹಿರಿಯ ನಾಗರಿಕ ಉಳಿತಾಯ ಯೋಜನೆಯು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇರುವ ಒಂದು ಯೋಜನೆಯಾಗಿದೆ. ಈ ಯೋಜನೆಯು VRS ಪಡೆದವರಿಗೂ ಅನ್ವಯಿಸುತ್ತದೆ. ಪ್ರಸ್ತುತ, ಯೋಜನೆಯಲ್ಲಿ  8.2 ಶೇಕಡಾ ಬಡ್ಡಿಯನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ, ಹಿರಿಯ ನಾಗರಿಕರು 5 ಲಕ್ಷ ರೂಪಾಯಿ ಠೇವಣಿ ಮೇಲೆ ಪ್ರತಿ ತ್ರೈಮಾಸಿಕಕ್ಕೆ 10,250 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯಬಹುದು. ಕೇವಲ ಬಡ್ಡಿಯಿಂದಲೇ 5 ವರ್ಷಗಳಲ್ಲಿ 2 ಲಕ್ಷ ರೂಪಾಯಿ ಗಳಿಸಬಹುದು. 

SCSS ಯೋಜನೆಯ ಪ್ರಮುಖ ಪ್ರಯೋಜನಗಳು :
- ಈ ಉಳಿತಾಯ ಯೋಜನೆಯು ಭಾರತ ಸರ್ಕಾರದಿಂದ ಬೆಂಬಲಿತವಾದ ಸಣ್ಣ ಉಳಿತಾಯ ಯೋಜನೆಯಾಗಿದೆ. 
- ಆದ್ದರಿಂದ ಇದು ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ 
- ಈ ಯೋಜನೆಯಡಿಯಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿಯನ್ನು ಪಾವತಿಸಲಾಗುತ್ತದೆ. 
- ಪ್ರತಿ ವರ್ಷ ಏಪ್ರಿಲ್, ಜುಲೈ, ಅಕ್ಟೋಬರ್ ಮತ್ತು ಜನವರಿ ಮೊದಲ ದಿನದಂದು ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆ.
- ಅದರ ಪ್ರಸ್ತುತ ಬಡ್ಡಿ ದರವು 8.2% ಆಗಿದೆ, ಇದನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು. 
- ಈ ಖಾತೆಯನ್ನು ದೇಶದಲ್ಲಿ ಎಲ್ಲಿ ಬೇಕಾದರೂ ವರ್ಗಾಯಿಸಬಹುದು. 
- ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ, ಪ್ರತಿ ವರ್ಷ  1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News