Toll Tax Rules: ನೀವು ಸಹ ಹೆದ್ದಾರಿಯಲ್ಲಿ ಪ್ರಯಾಣಿಸಲು ಹೊರಟಿದ್ದರೆ ಅಥವಾ ಪ್ರಯಾಣಿಸಲು ಯೋಜನೆ ರೂಪಿಸುತ್ತಿದ್ದರೆ, ನಿಮಗಾಗಿ ನಿಮಗಾಗಿ ಒಂದು ಪ್ರಮುಖ ಸುದ್ದಿ ಪ್ರಕಟಗೊಂಡಿದೆ. ಇತ್ತೀಚೆಗೆ ಕೆಲವರಿಗೆ ಸರ್ಕಾರದಿಂದ ತೆರಿಗೆ ವಿನಾಯಿತಿ ಸಿಗಲಿದೆ, ಅಂದರೆ ಟೋಲ್ ಟ್ಯಾಕ್ಸ್ ಕಟ್ಟಬೇಕಾಗಿಲ್ಲ ಎಂಬ ಸಂದೇಶವೊಂದು ಹೊರಹೊಮ್ಮುತ್ತಿದೆ.
ಸರ್ಕಾರ ನಿಜವಾಗಿಯೂ ಕೆಲವರಿಗೆ ಟೋಲ್ ತೆರಿಗೆಯಲ್ಲಿ ವಿನಾಯಿತಿ ನೀಡುತ್ತಿದೆಯೇ?
ಪಿಐಬಿ ಟ್ವೀಟ್ ನಲ್ಲೆನಿದೆ?
ಭಾರತದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಪತ್ರಕರ್ತರು ಟೋಲ್ ತೆರಿಗೆಯಲ್ಲಿ ವಿನಾಯಿತಿ ಪಡೆಯುತ್ತಾರೆ ಎಂದು ವಾಟ್ಸಾಪ್ ಸಂದೇಶದಲ್ಲಿ ಹೇಳಲಾಗುತ್ತಿದೆ ಎಂದು ಪಿಐಬಿ ತನ್ನ ಅಧಿಕೃತ ಟ್ವೀಟ್‌ನಲ್ಲಿ ಬರೆದುಕೊಂಡಿದೆ, ಇದಕ್ಕಾಗಿ ಐಡಿ ಕಾರ್ಡ್ ತೋರಿಸುವುದು ಅವಶ್ಯಕ ಎಂದೂ ಕೂಡ ಹೇಳಲಾಗುತ್ತಿದೆ.
एक #WhatsApp मैसेज में दावा किया जा रहा है कि भारत के सभी टोल प्लाजा पर पत्रकारों को टोल टैक्स पर मिलेगी छूट, जिसके लिए आईडी कार्ड दिखाना होगा आवश्यक#PIBFactCheck:
▶️यह दावा #फर्जी है
▶️@MORTHIndia ने ऐसा कोई आदेश नहीं दिया है
▶️अधिक जानकारी के लिए👇 https://t.co/gMqvYZPaly pic.twitter.com/wWseuIx3oy
— PIB Fact Check (@PIBFactCheck) November 15, 2022
ಇದೊಂದು ಸಂಪೂರ್ಣ ನಕಲಿ ಸಂದೇಶವಾಗಿದೆ
ಈ ಕುರಿತಾದ ಸಂದೇಶ ಸಂಪೂರ್ಣವಾಗಿ ನಕಲಿ ಎಂದು ಪಿಐಬಿ ವಾಸ್ತವ ಪರಿಶೀಲನೆಯ ನಂತರ ತಿಳಿಸಿದೆ. ಇಂತಹ ಯಾವುದೇ ಆದೇಶವನ್ನು MORTHIndia ನೀಡಿಲ್ಲ.
ಅಧಿಕೃತ ಲಿಂಕ್ ಪರಿಶೀಲಿಸಿ
ಈ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಅಧಿಕೃತ ಲಿಂಕ್ https://morth.nic.in/sites/default/files/faqs_exemptions.pdf ಗೆ ಭೇಟಿ ನೀಡಬಹುದು.
ಇದನ್ನೂ ಓದಿ-Business Opportunity: ಸರ್ಕಾರ ನಡೆಸುವ ಈ ಚಿಕ್ಕ ಪರೀಕ್ಷೆ ಪಾಸಾಗಿ, ಸ್ವಂತ ಉದ್ಯಮ ಆರಂಭಿಸಿ ಕೈತುಂಬಾ ಸಂಪಾದಿಸಿ
ಯಾರು ಟೋಲ್ ತೆರಿಗೆ ವಿನಾಯಿತಿ ಪಡೆಯುತ್ತಾರೆ?
ಇನ್ನೊಂದೆಡೆ ಭಾರತದಲ್ಲಿ ಯಾರಿಗೆ ಟೋಲ್ ತೆರಿಗೆಯಿಂದ ವಿನಾಯ್ತಿ ನೀಡಲಾಗುತ್ತದೆ ಎಂಬುದರ ಕುರಿತೂ ಕೂಡ PIB ತನ್ನ ಟ್ವೀಟ್ ನಲ್ಲಿ ಹೇಳಿಕೊಂಡಿದೆ, ಇದು ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು, ಲೋಕಸಭೆ-ರಾಜ್ಯಸಭೆ ಸ್ಪೀಕರ್ ಗಳು ಮತ್ತು ಸಂಸದರು ಇತ್ಯಾದಿಗಳನ್ನು ಒಳಗೊಂಡಿದೆ. ಇದರೊಂದಿಗೆ ಆಂಬ್ಯುಲೆನ್ಸ್ ಮತ್ತು ಶವ ವಾಹನಗಳಿಗೂ ಟೋಲ್ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಅದು ಹೇಳಿದೆ.
ಇದನ್ನೂ ಓದಿ-ಈ ದಿನ ಖಾತೆ ಸೇರುವುದು ಪಿಎಂ ಕಿಸಾನ್ 13ನೇ ಕಂತಿನ ಹಣ.! ಟ್ವೀಟ್ ಮೂಲಕ ರೈತರಿಗೆ ಪ್ರಮುಖ ಮಾಹಿತಿ ನೀಡಿದ ಪ್ರಧಾನಿ
ನೀವು ಕೂಡ ಈ ಪರಿಶೀಲನೆಯನ್ನು ಮಾಡಬಹುದು
ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ, ಕೆಲವೊಮ್ಮೆ ತಪ್ಪು ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತವೆ. ನಿಮ್ಮ ಸಾಮಾಜಿಕ ಮಾಧ್ಯಮ ಖಾತೆ ಅಥವಾ WhatsApp ನಲ್ಲಿ ಬರುವ ಯಾವುದೇ ಸುದ್ದಿಗಳ ಬಗ್ಗೆ ನಿಮಗೆ ಸಂದೇಹವಿದ್ದರೆ, ನೀವು PIB ಮೂಲಕ ಈ ವಾಸ್ತವ ಪರೀಕ್ಷೆಯನ್ನು ಮಾಡಿ ಪರಿಶೀಲಿಸಬಹುದು. ಇದಕ್ಕಾಗಿ ನೀವು ಅಧಿಕೃತ ಲಿಂಕ್ https://factcheck.pib.gov.in/ ಗೆ ಭೇಟಿ ನೀಡಬೇಕು. ಇದಲ್ಲದೆ, ನೀವು WhatsApp ಸಂಖ್ಯೆ 8799711259 ಅಥವಾ ಇಮೇಲ್: pibfactcheck@gmail.com ಗೆ ಮಾಹಿತಿಯನ್ನು ಕಳುಹಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.