Union Budget 2025: ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವರ ಆ ಒಂದು ಘೋಷಣೆ ಬಳಿಕ ಸುಧಾರಿಸುತ್ತಾ ಷೇರು ಮಾರುಕಟ್ಟೆ?

Stock Market after Budget 2025: ಈ ಬಾರಿ ತೆರಿಗೆ ವಿನಾಯಿತಿ ಮೇಲೆ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆದಾಯ ತೆರಿಗೆ ವಿನಾಯಿತಿ, ಜಿಎಸ್‌ಟಿ ಕಡಿತದಂತಹ ಪ್ರಮುಖ ನಿರ್ಧಾರಗಳನ್ನು ಘೋಷಿಸುವ ಬಗ್ಗೆ ವಿಶ್ವಾಸವಿದೆ. ಆದರೆ ಇದೀಗ ಷೇರು ಹೂಡಿಕೆದಾರರಲ್ಲಿ ಕಾಡುತ್ತಿರುವ ಪ್ರಶ್ನೆಯೆಂದರೆ, ಬಜೆಟ್‌ ಬಳಿಕ ಷೇರು ಮಾರುಕಟ್ಟೆ ಸುಧಾರಣೆ ಕಾಣುತ್ತದೆಯೋ? ಅಥವಾ ಇಲ್ಲವೋ? ಎಂಬುದು. ಇದಕ್ಕೆ ತಜ್ಞರ ಅಭಿಪ್ರಾಯ ಹೀಗಿದೆ.

Written by - Bhavishya Shetty | Last Updated : Jan 31, 2025, 02:32 PM IST
    • ಫೆಬ್ರವರಿ 1 ರಂದು 2025-26ನೇ ಸಾಲಿನ ಬಜೆಟ್ ಮಂಡನೆ
    • ಮೂರನೇ ಬಾರಿಗೆ ಬಜೆಟ್‌ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
    • ಈ ದಿನ ಷೇರು ಮಾರುಕಟ್ಟೆಗಳಲ್ಲಿ ಸಾಮಾನ್ಯ ವಹಿವಾಟು ನಡೆಯಲಿದೆ
Union Budget 2025: ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವರ ಆ ಒಂದು ಘೋಷಣೆ ಬಳಿಕ ಸುಧಾರಿಸುತ್ತಾ ಷೇರು ಮಾರುಕಟ್ಟೆ? title=
Union Budget

Stock Market after Budget 2025: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಅಂದರೆ ಫೆಬ್ರವರಿ 1 ರಂದು 2025-26ನೇ ಸಾಲಿನ ಬಜೆಟ್ ಅನ್ನು ಮಂಡಿಸಲಿದ್ದಾರೆ. ಶನಿವಾರವಾಗಿದ್ದರೂ ಸಹ ಈ ದಿನ ಷೇರು ಮಾರುಕಟ್ಟೆಗಳಲ್ಲಿ ಸಾಮಾನ್ಯ ವಹಿವಾಟು ನಡೆಯಲಿದೆ. FY25 ಬಜೆಟ್‌ನಲ್ಲಿ ಬಂಡವಾಳ ಹೂಡಿಕೆಗೆ 11.1 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಐದು ವರ್ಷಗಳಲ್ಲಿ, GDP ಯ ಪಾಲಾಗಿ ಬಂಡವಾಳ ಹೂಡಿಕೆಯು 3.2% ಕ್ಕೆ ದ್ವಿಗುಣಗೊಂಡಿದೆ. ಈ ಆವೇಗ ಮುಂದುವರಿಯುವ ನಿರೀಕ್ಷೆಯಿದೆ.\

ಇದನ್ನೂ ಓದಿ: ಫೆ.1ರಿಂದ ಈ ರಾಶಿಯವರಿಗೆ ಶುಕ್ರ ದೆಸೆ: ಈ ಜನ್ಮರಾಶಿಗೆ ಭಾರೀ ಅದೃಷ್ಟ, ಮನೆ, ಕಾರು ಖರೀದಿ ಯೋಗ

ಅಂದಹಾಗೆ ಈ ಬಾರಿ ತೆರಿಗೆ ವಿನಾಯಿತಿ ಮೇಲೆ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆದಾಯ ತೆರಿಗೆ ವಿನಾಯಿತಿ, ಜಿಎಸ್‌ಟಿ ಕಡಿತದಂತಹ ಪ್ರಮುಖ ನಿರ್ಧಾರಗಳನ್ನು ಘೋಷಿಸುವ ಬಗ್ಗೆ ವಿಶ್ವಾಸವಿದೆ. ಆದರೆ ಇದೀಗ ಷೇರು ಹೂಡಿಕೆದಾರರಲ್ಲಿ ಕಾಡುತ್ತಿರುವ ಪ್ರಶ್ನೆಯೆಂದರೆ, ಬಜೆಟ್‌ ಬಳಿಕ ಷೇರು ಮಾರುಕಟ್ಟೆ ಸುಧಾರಣೆ ಕಾಣುತ್ತದೆಯೋ? ಅಥವಾ ಇಲ್ಲವೋ? ಎಂಬುದು. ಇದಕ್ಕೆ ತಜ್ಞರ ಅಭಿಪ್ರಾಯ ಹೀಗಿದೆ.

2024ರ ಸೆಪ್ಟೆಂಬರ್ ತಿಂಗಳಿನಲ್ಲಿ 85,000 ದಾಟಿದ್ದ ಸೆನ್ಸೆಕ್ಸ್ ನಾಲ್ಕು ತಿಂಗಳಿನಲ್ಲಿ 10,000 ಅಂಕಗಳು ಕುಸಿತ ಕಂಡಿತ್ತು. ಜಾಗತಿಕ ವಿದ್ಯಮಾನಗಳು, ಆರ್ಥಿಕ ಹಿಂಜರಿತ, ಉದ್ಯೋಗ ಕಡಿತ, ಮಧ್ಯ ಪ್ರಾಚ್ಯ ದೇಶಗಳ ಬಿಕ್ಕಟ್ಟು, ಅಮೆರಿಕ ಚುನಾವಣೆ ಈ ಎಲ್ಲಾ ಅಂಶಗಳು ಇಲ್ಲಿನ ಷೇರು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿತ್ತು. ಹೀಗಿರುವಾಗ ಬಜೆಟ್‌ ಬಳಿಕವಾದರೂ ಷೇರು ಸುಧಾರಣೆಯಾಗುತ್ತಾ? ಎಂಬುದು ಸದ್ಯ ಹೂಡಿಕೆದಾರರ ಗೊಂದಲವಾಗಿದೆ
 
ಒಂದು ವೇಳೆ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಘೋಷಿಸಿದರೆ ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಕಾಣಬಹುದು. ಅಂದರೆ ಆದಾಯ ತೆರಿಗೆ ವಿನಾಯಿತಿಯಿಂದ ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಹರಿದುಬರುತ್ತದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಖಚಿತವಾಗಿಯೂ ಬದಲಾವಣೆಗಳಬಹುದು ಎಂದು ನಿರೀಕ್ಷಿಸಲಾಗಿದೆ.

ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್ ಮಂಡಿಸಲಿದ್ದು, ಯಾವೆಲ್ಲಾ ನಿರೀಕ್ಷೆಗಳು ಈಡೇರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ಎಂಎಸ್‌ ಧೋನಿ ಬಳಿಕ ಮೈಸೂರು ಸ್ಯಾಂಡಲ್‌ ಸೋಪ್‌ಗೆ ಈ ನಟಿ ಬ್ರ್ಯಾಂಡ್‌ ಅಂಬಾಸಿಡರ್‌? ಕರ್ನಾಟಕದ ಹೆಮ್ಮೆಗೆ ಕನ್ನಡದವರು ಯಾರು ಗತಿಯೇ ಇಲ್ವಾ?

ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿ ಮತ್ತು ಸಲಹೆಗಳು ತಜ್ಞರ ಅಭಿಪ್ರಾಯವೇ ಹೊರತು ಇದನ್ನು ಜೀ ಕನ್ನಡ ನ್ಯೂಸ್‌ ಖಚಿತಪಡಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News