ಇನ್ನು 10 ದಿನಗಳಲ್ಲಿ ಪಿಪಿಎಫ್ , ಸುಕನ್ಯ ಸಮೃದ್ದಿ ಹೂಡಿಕೆದಾರರಿಗೆ ಸಿಹಿ ಸುದ್ದಿ ಘೋಷಿಸಲಿದೆ ಸರ್ಕಾರ

ಸರ್ಕಾರ ಸೆಪ್ಟೆಂಬರ್ 30 ರಂದು ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಪಿಪಿಎಫ್‌ನ ಬಡ್ಡಿ ದರವನ್ನು ಬದಲಾಯಿಸುವ ನಿರೀಕ್ಷೆಯಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಿದೆ. 

Written by - Ranjitha R K | Last Updated : Sep 20, 2022, 12:42 PM IST
  • ಅಕ್ಟೋಬರ್ 1, ಜಾರಿಗೆ ಬರಲಿದೆ ಹೊಸ ನಿಯಮ
  • ಈ ದಿನ ನಡೆಯಲಿದೆ ಬಡ್ಡಿ ದರ ಪರಿಶೀಲನೆ
  • ಸಣ್ಣ ಉಳಿತಾಯ ಯೋಜನೆಯ ಹೂಡಿಕೆದಾರರಿಗೆ ಆಗುವುದು ಲಾಭ
ಇನ್ನು 10 ದಿನಗಳಲ್ಲಿ ಪಿಪಿಎಫ್ , ಸುಕನ್ಯ ಸಮೃದ್ದಿ ಹೂಡಿಕೆದಾರರಿಗೆ  ಸಿಹಿ ಸುದ್ದಿ ಘೋಷಿಸಲಿದೆ ಸರ್ಕಾರ  title=
small saving scheme interest rate (file photo)

ಬೆಂಗಳೂರು : ನೀವು ಕೂಡಾ ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಎನ್‌ಪಿಎಸ್ ಅಥವಾ ಕಿಸಾನ್ ವಿಕಾಸ್ ಪತ್ರ ಮುಂತಾದ ಸರ್ಕಾರ ನಡೆಸುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ, ಈ ಸುದ್ದಿಯನ್ನು ನೀವು ಓದಲೇ ಬೇಕು. ಮೂಲಗಳ ಪ್ರಕಾರ, ಸರ್ಕಾರ ಸೆಪ್ಟೆಂಬರ್ 30 ರಂದು ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಪಿಪಿಎಫ್‌ನ ಬಡ್ಡಿ ದರವನ್ನು ಬದಲಾಯಿಸುವ ನಿರೀಕ್ಷೆಯಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಿದೆ. 

ಅಕ್ಟೋಬರ್ 1, ಜಾರಿಗೆ ಬರಲಿದೆ ಹೊಸ ನಿಯಮ : 
ಹಣದುಬ್ಬರ ಮಟ್ಟವನ್ನು ತಗ್ಗಿಸುವ ಸಲುವಾಗಿ ಕಳೆದ ದಿನಗಳಲ್ಲಿ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಬಡ್ಡಿದರವನ್ನು ಕೂಡಾ ಹೆಚ್ಚಿಸಿದೆ. ಬಡ್ಡಿದರ ಹೆಚ್ಚಿಸಿರುವುದರಿಂದ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಉಳಿತಾಯ ಯೋಜನೆಗಳ ಮೇಲೆ ಹೆಚ್ಚಿನ ಬಡ್ಡಿ ಪಡೆಯುವ ನಿರೀಕ್ಷೆಯಿದೆ. ಬಡ್ಡಿ ದರದಲ್ಲಿ ಮಾಡಲಾದ ಬದಲಾವಣೆ ಅಕ್ಟೋಬರ್ ಒಂದರಿಂದ ಜಾರಿಗೆ ಬರಲಿದೆ. 

ಇದನ್ನೂ ಓದಿ : ಅಗ್ಗದ ಬೆಲೆಯ ಬೈಕ್ ಬಿಡುಗಡೆ ಮಾಡಿದ ಹೀರೋ.! ಅತ್ಯಾಕರ್ಷಕವಾಗಿದೆ ಇದರ ಕಲರ್

ಈ ದಿನ ಬಡ್ಡಿ ದರ ಪರಿಶೀಲನೆ : 
ಬಡ್ಡಿ ದರ ಪರಾಮರ್ಶೆಗೆ ಇನ್ನು 10 ದಿನ ಮಾತ್ರ ಬಾಕಿ ಇದೆ. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಸೆಪ್ಟೆಂಬರ್ 30 ರಂದು ಪರಿಶೀಲಿಸಲಾಗುತ್ತದೆ. ಈ ಪರಿಶೀಲನೆಯು ಅಕ್ಟೋಬರ್‌ನಿಂದ ಡಿಸೆಂಬರ್ ನ ತ್ರೈಮಾಸಿಕದಲ್ಲಿ ನಡೆಯಲಿದೆ. ಮೂಲಗಳ ಪ್ರಕಾರ, ಬಡ್ಡಿದರವನ್ನು 60 ರಿಂದ 70 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ದೀರ್ಘಕಾಲದಿಂದ ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. 

ಬಡ್ಡಿದರ ಏಕೆ ಬದಲಾಗುತ್ತದೆ?
ಆರ್‌ಬಿಐ ಮೇ ತಿಂಗಳಿನಿಂದ ಮೂರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ರೆಪೋ ದರ ಮತ್ತೊಮ್ಮೆ ಹೆಚ್ಚಾಗುವ ನಿರೀಕ್ಷೆ ಇದೆ. ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ, ರೆಪೊ ದರವನ್ನು ಮತ್ತೆ 25 ರಿಂದ 35 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಬಹುದು ಎನ್ನಲಾಗಿದೆ. ಆದರೆ ಉಳಿತಾಯ ಯೋಜನೆಗಳ ಬಡ್ಡಿಯಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ : ಕಿಸಾನ್ ಕ್ರೆಡಿಟ್ ಕಾರ್ಡ್‌ಗಾಗಿ ಬ್ಯಾಂಕ್ ಸುತ್ತುವ ಅವಶ್ಯಕತೆ ಇಲ್ಲ, ಮೊಬೈಲ್‌ನಿಂದ ಈ ಕೆಲಸ ಮಾಡಿದರಷ್ಟೇ ಸಾಕು

ಪ್ರತಿ ಮೂರು ತಿಂಗಳಿಗೊಮ್ಮೆ ಉಳಿತಾಯ ಯೋಜನೆಯನ್ನು ಪರಿಶೀಲನೆ :
ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸುತ್ತದೆ. ಈ ಪರಿಶೀಲನೆಯ ಸಮಯದಲ್ಲಿ, ಬಡ್ಡಿದರವನ್ನು ಹೆಚ್ಚಿಸಬೇಕೆ, ಕಡಿಮೆ ಮಾಡಬೇಕೆ ಅಥವಾ ಸ್ಥಿರವಾಗಿರಿಸಿಕೊಳ್ಳಬೇಕೆ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಈ ಬಡ್ಡಿದರಗಳನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ನಿರ್ಧಾರ  ಹಣಕಾಸು ಸಚಿವಾಲಯದ್ದಾಗಿರುತ್ತದೆ.  

ಸುಕನ್ಯಾ ಸಮೃದ್ಧಿ ಹೂಡಿಕೆಯ ಮೇಲೆ ಹೆಚ್ಚಿನ ಬಡ್ಡಿ : 
ಪ್ರಸ್ತುತ, ಪಿಪಿಎಫ್ ನಲ್ಲಿ ವಾರ್ಷಿಕ 7.1% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ  ಮಾಡಿದ ಹೂಡಿಕೆ ಮೇಲೆ 7.6% ವಾರ್ಷಿಕ  ಬಡ್ಡಿ ಸಿಗುತ್ತದೆ. ಇನ್ನು ನ್ಯಾಷನಲ್ ಸೇವಿಂಗ್ ರಿಕರಿಂಗ್ ಡಿಪಾಸಿಟ್  ಮೇಲೆ  5.8% ನಷ್ಟು ಲಾಭ ಪಡೆಯಬಹುದು. ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿ ದರವು 6.9 ಪ್ರತಿಶತವಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News