Sarkari Naukri: 10ನೇ ತರಗತಿ ಪಾಸ್ ಆದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ

Sarkari Naukri: ಹತ್ತನೇ ತರಗತಿ ಉತ್ತೀರ್ಣರಾಗಿದ್ದು ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಭಾರತೀಯ ಅಂಚೆ ಇಲಾಖೆಯಲ್ಲಿ ನಿಮಗಾಗಿ ಸುವರ್ಣಾವಕಾಶವಿದೆ. 

Written by - Yashaswini V | Last Updated : Jun 11, 2024, 12:25 PM IST
  • ಭಾರತೀಯ ಅಂಚೆ ಇಲಾಖೆಯ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ
  • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
Sarkari Naukri: 10ನೇ ತರಗತಿ ಪಾಸ್ ಆದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ  title=

Sarkari Naukri India Post Recruitment 2024: ನೀವು 10ನೇ ತರಗತಿ ಉತ್ತೀರ್ಣರಾಗಿದ್ದು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ, ಭಾರತೀಯ ಪೋಸ್ಟ್‌ನಲ್ಲಿ  ನಿಮಗೆ ಸುವರ್ಣಾವಕಾಶವಿದೆ. ಭಾರತೀಯ ಅಂಚೆ ಇಲಾಖೆಯು ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಕಟಿಸಿದ್ದು, ಈ ಹುದ್ದೆಗೆ ನೇಮಕಗೊಳ್ಳಲು  10ನೇ ತರಗತಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ. 

ಈಗಾಗಲೇ, ಭಾರತೀಯ ಅಂಚೆ (India Post) ಇಲಾಖೆಯ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 
10ನೇ ತರಗತಿ ಉತ್ತೀರ್ಣರಾದವರಿಗೆ ಇಂಡಿಯಾ ಪೋಸ್ಟ್ ನೇಮಕಾತಿ 2024ರಲ್ಲಿ  (India Post Recruitment 2024) ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು 23 ಜುಲೈ 2024 ಕೊನೆಯ ದಿನವಾಗಿದೆ. 

ಇದನ್ನೂ ಓದಿ- ಬರಹಗಾರರಿಗಾಗಿ ಇಲ್ಲಿದೆ ಸುವರ್ಣ ಅವಕಾಶ.. ಸ್ಕ್ರಿಪ್ಟ್ ಬರೆದು ಹಣ ಗೆಲ್ಲಿ !

ಅರ್ಹತೆ: 
ಭಾರತೀಯ ಪೋಸ್ಟ್‌ನಲ್ಲಿ ಕೆಲಸ (India Post Jobs) ಮಾಡಲು ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದಲ್ಲದೆ, ಮೋಟಾರು ಕಾರ್ಯವಿಧಾನವು ಕಾರ್ಯನಿರ್ವಹಿಸಬೇಕು. ಅಲ್ಲದೆ, ಕಾರು ಚಾಲನೆ ಮಾಡುವಲ್ಲಿ 3 ವರ್ಷಗಳ ಅನುಭವವನ್ನು ಹೊಂದಿರಬೇಕು. ನಾಗರಿಕ ಸ್ವಯಂಸೇವಕರಾಗಿ 3 ವರ್ಷಗಳ ಅನುಭವವೂ ಇರಬೇಕು.

ವಯಸ್ಸಿನ ಮಿತಿ: 
ಭಾರತೀಯ ಅಂಚೆ ಇಲಾಖೆಯ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಗರಿಷ್ಠ ವಯೋಮಿತಿಯನ್ನು 56 ವರ್ಷಕ್ಕಿಂತ ಕಡಿಮೆ ಇರಬೇಕು. 

ವೇತನ: 
ಭಾರತೀಯ ಅಂಚೆ ಇಲಾಖೆಯ (Indian Department of Posts) ಸ್ಟಾಫ್ ಕಾರ್ ಡ್ರೈವರ್ ಹುದ್ದೆಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳಿಗೆ 19,900 ರೂ.ನಿಂದ 63,200 ರೂ.ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ. 

ಇದನ್ನೂ ಓದಿ- JEE Advanced Result 2024: ಜೆಇಇ ಅಡ್ವಾನ್ಸ್ಡ್‌ ಫಲಿತಾಂಶ ರಿಲೀಸ್‌... ರಿಸಲ್ಟ್‌ ಚೆಕ್‌ ಮಾಡುವ ನೇರ ಲಿಂಕ್‌ ಮತ್ತು ವಿಧಾನ ಇಲ್ಲಿದೆ

ಭಾರತೀಯ ಪೋಸ್ಟ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಇಲ್ಲಿದೆ ಸುಲಭ ಪ್ರಕ್ರಿಯೆ: 
* ಭಾರತೀಯ ಪೋಸ್ಟ್‌ನಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ವೆಬ್‌ಸೈಟ್ indiapost.gov.in  ಗೆ ಭೇಟಿ ನೀಡಿ. 
* ಮುಖ ಪುಟದಲ್ಲಿ ಕಾಣುವ ಇಂಡಿಯಾ ಪೋಸ್ಟ್ ನೇಮಕಾತಿ 2024 ಲಿಂಕ್ ಅನ್ನು ಕ್ಲಿಕ್ ಮಾಡಿ. 
* ನಿಗದಿತ ಪುಟದಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. 
* ಅರ್ಜಿ ಭರ್ತಿ ಮಾಡಿದ ಬಳಿಕ, ಅಗಾಯ್ತವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. 
* ಬಳಿಕ  ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
* ಅಪ್ಲಿಕೇಶನ್ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಭವಿಷ್ಯದ ಉಪಯೋಗಕ್ಕಾಗಿ ಇದರ ಪ್ರಿಂಟ್ ಔಟ್ ತೆಗೆದಿರಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News