ದಾವಣಗೆರೆ : ಭವಿಷ್ಯದ ಆರ್ಥಿಕ ಅನಿಶ್ಚಿತತೆ ತೊಡೆದು ಹಾಕಲು, ಕುಟುಂಬದ ರಕ್ಷಣೆಗೆ ಇನ್ಶುರೆನ್ಸ್ ಮಾಡಿಸಲಾಗುತ್ತದೆ. ಆದರೆ ಇಲ್ಲಿ ವಿಮೆ ಹಣಕ್ಕಾಗಿ ಮರ್ಡರ್ ನಡೆದು ಹೋಗಿದೆ. 40 ಲಕ್ಷ ರೂಪಾಯಿ ಆಸೆಗೆ ಸ್ವಂತ ಮಾವನನ್ನೇ ಅಳಿಯ ಚಟ್ಟಕೇರಿಸಿ ಬಿಟ್ಟಿದ್ದಾನೆ.
ಭವಿಷ್ಯದ ಆರ್ಥಿಕ ಭದ್ರತೆಗೆ, ಜೀವಕ್ಕೆ ಅಪಾಯ ಆದರೆ ಕುಟುಂಬಕ್ಕೆ ಆಸರೆ ಆಗಲಿ ಅಂತಾ ಇನ್ಶುರೆನ್ಸ್ ಮಾಡಿಕೊಡಲಾಗುತ್ತದೆ. ಆದರೆ ಇಲ್ಲಿ ಇದೇ ಇನ್ಶುರೆನ್ಸ್ ಗಾಗಿ ಹೆಣವೊಂದು ಬಿದ್ದಿದೆ. ದಾವಣಗೆರೆ ನಗರದ ಅರಳಿ ಮರ ವೃತ್ತ ಸಮೀಪದ ಇಮಾಂಮ ನಗರದಲ್ಲಿ 32 ವರ್ಷದ ದುಗ್ಗೇಶ್ ಎಂಬಾತ, ಹಣ್ಣಿನ ವ್ಯಾಪಾರ ಮಾಡುತ್ತಾ, ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದ. ಯಾರ ತಂಟೆಗೂ ಹೋಗದ ದುಗ್ಗೇಶ್ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದ.ಇದು ಸಹಜ ಸಾವೋ, ಕೊಲೆಯೋ, ಕುಡಿದು ಬಿದ್ದು ಸತ್ತನೋ ಅನ್ನುವ ಅನುಮಾನ ಕುಟುಂಬಸ್ಥರನ್ನು ಕಾಡುತ್ತಲೇ ಇತ್ತು. ರಸ್ತೆ ಪಕ್ಕ ಬಿದ್ದಿದ್ದ ದುಗ್ಗೇಶನನ್ನ ನಾವು ಆಸ್ಪತ್ರೆಗೆ ತೋರಿಸಿದೆವು ಆದರೆ ಆತ ಬದುಕಿ ಉಳಿಯಲಿಲ್ಲತಾ ಸೋದರಳಿಯ ಗಣೇಶ ಹಾಗೂ ಅವನ ಸ್ನೇಹಿತರು ಕುಟುಂಬಸ್ಥರಿಗೆ ಹೇಳಿದ್ದರು. ಅನುಮಾನಗೊಂಡ ಸಂಬಂಧಿಕರು ಅಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ನಂತರ ವಿಚಾರಣೆ ನಡೆಸಿದಾಗ ಸತ್ಯ ಹೊರ ಬಿದ್ದಿದೆ.
ಇದನ್ನೂ ಓದಿ : ಯೋಗ ಶಿಕ್ಷಕಿ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ನಾಲ್ವರು ವ್ಯಕ್ತಿಗಳ ಬಂಧನ
ದುಗ್ಗೇಶನ ತಮ್ಮ ಗೋಪಿ, ಅಳಿಯ ಗಣೇಶನ ಬಳಿ ವಾರದ ಬಡ್ಡಿಯಂತೆ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಪಡೆದಿದ್ದ ಲಕ್ಷ ಅಸಲಿಗೆ ಎರದು ಮೂರು ಲಕ್ಷ ಬಡ್ಡಿಯನ್ನೇ ಕಟ್ಟಿದ್ದ. ಬಡ್ಡಿ ಕಟ್ಟಿ ಕಟ್ಟಿ ಸಾಕಾಗಿ ಗೋಪಿ ಊರನ್ನೇ ಬಿಟ್ಟಿದ್ದ.ಈ ಗಣೇಶನಿಗೆ ದುಡ್ಡಿನ ದಾಹ ಅದೆಷ್ಟು ಇತ್ತೆಂದರೆ, ಪ್ರತಿ ಕ್ಷಣ ದುಡ್ಡು ಮಾಡುವುದರ ಬಗ್ಗೆ ವಿಚಾರ ಮಾಡ್ತಾ ಇದ್ದನಂತೆ.ಇದೇ ವೇಳೆ ತೆಲುಗಿನ ಭದ್ರಂ ಸಿನಿಮಾ ನೋಡಿದ್ದಾನೆ. ಇನ್ಶುರೆನ್ಸ್ ಮಾಡಿಸಿ ನಂತರ ಮರ್ಡರ್ ಮಾಡಿ ಹಣ ಪಡೆದುಕೊಳ್ಳುವ ಆ ಸಿನಿಮಾದ ಕತೆ ಇವನಿಗೆ ಇಷ್ಟವಾಗಿದೆ.
ಅದರಂತೆ ಸ್ಕೆಚ್ ಹಾಕಿ ಸುಲಭವಾಗಿ ಹಣ ಮಾಡಲು ಗಣೇಶ ಮುಂದಾಗಿದ್ದಾನೆ.ಆಗ ಅವನ ಕಣ್ಣಿಗೆ ಬಿದ್ದ ವ್ಯಕ್ತಿ ಇದೆ ದುಗ್ಗೇಶ್. ಪ್ರತಿ ನಿತ್ಯ ಕುಡಿದು ಕುಡಿದು ಸರಿಯಾಗಿ ಊಟ ಮಾಡದೇ ದುಗ್ಗೇಶ್ ಅಶಕ್ತನಾಗಿದ್ದ. ಈತ ಇನ್ನೊಂದು ವರ್ಷದಲ್ಲಿ ಸಾಯುತ್ತಾನೆ ಇವನು ತನ್ನ ಪ್ಲಾನಿಂಗ್ ಗೆ ಸೂಕ್ತ ವ್ಯಕ್ತಿ ಎಂದು ಪ್ಲಾನ್ ಹಾಕಿದ್ದಾನೆ. ಅದರಂತೆ ಸೋದರ ಮಾವ ದುಗ್ಗೇಶ್ ಮತ್ತು ಆತನ ತಾಯಿ ಹುಲಿಗೆಮ್ಮಳನ್ನು ನಿಮಗೆ ಸಾಲ ಕೊಡೆಸುವೆ ಎಂದು ಕರೆದುಕೊಂಡು ಹೋಗಿ ಇನ್ಶುರೆನ್ಸ್ ಬಾಂಡ್ ಮೇಲೆ ಸೈನ್ ಮಾಡಿಸಿದ್ದಾನೆ.ದುಗ್ಗೇಶ್ ತಾಯಿ ಹುಲಿಗೆಮ್ಮಳನ್ನು ಆತನಿಗೆ ನಾಮಿನಿ ಮಾಡಿದ್ದಾನೆ.ಹುಲಿಗೆಮ್ಮಳ ಸಹಿ ಇರುವ ಎರಡು ಖಾಲಿ ಚೆಕ್ ತನ್ನ ಬಳಿ ಉಳಸಿಕೊಂಡಿದ್ದಾನೆ.ದುಗ್ಗೇಶ್ ಸತ್ತ ನಂತರ ಆತನ ಮರಣ ಪ್ರಮಾಣ ಪತ್ರ ನೀಡಿದ ನಂತರ, ಇನ್ಶುರೆನ್ಸ್ ಅಮೌಂಟ್ ಹುಲಿಗೆಮ್ಮಳ ಅಕೌಂಟ್ ಗೆ ಜಮಾ ಆಗುತ್ತಿತ್ತು. ಆಕೆ ಕೊಟ್ಟ ಖಾಲಿ ಚೆಕ್ ಮೂಲಕ ಆ ಹಣ ಕಬಳಿಸುವ ಮಾಸ್ಟರ್ ಪ್ಲಾನ್ ಮಾಡಿದ್ದ. ನಲವತ್ತು ಲಕ್ಷ ವಿಮೆಗೆ ಎರಡು ಲಕ್ಷ ತಾನೇ ಸಂದಾಯ ಮಾಡಿದ್ದ.ಅಂದಿನಿಂದ ದುಗ್ಗೇಶ್ ಸಾಯುವುದನ್ನೆ ಕಾಯುತ್ತಾ ಕುಳಿತಿದ್ದ ಗಣೇಶ್.
ಇದನ್ನೂ ಓದಿ : ಮಾರಕಾಸ್ತ್ರಗಳಿಂದ ಕೊಚ್ಚಿ ಪೊಲೀಸ್ ಕಾನ್ಸ್‌ಟೇಬಲ್ ಭೀಕರ ಹತ್ಯೆ!; ಲಗ್ನ ಪತ್ರಿಕೆ ಕೊಡಲು ಹೋದವನಿಗೆ ಏನಾಯ್ತು..?
ಒಂದು ಕಡೆ ಸಾಲ ವಾಪಸ್ ಕೊಡದೆ ಊರುಬಿಟ್ಟಿದ್ದ ಗೋಪಿ ತಲೆನೋವಾಗಿದ್ದರೆ, ಇನ್ನೊಂದೆಡೆ ಎರಡು ಲಕ್ಷ ಖರ್ಚು ಮಾಡಿ ವಿಮೆ ಮಾಡಿಸಿದ್ದ ದುಗ್ಗೇಶ್ ವರ್ಷವಾದರೂ ಸಾಯುತ್ತಿಲ್ಲ ಅನ್ನೋ ಸಂಕಟ ಕಾಡುತ್ತಿತ್ತು. ಇವರ ಕುಟುಂಬದಿಂದ ನನಗೆ ಲಕ್ಷಾಂತರ ರೂಪಾಯಿ ಲಾಸ್ ಆಗುತ್ತಿದ್ದು, ಹೇಗಾದರೂ ಮಾಡಿ ಇನ್ಶುರೆನ್ಸ್ ಹಣ ಪಡೆಯಲೆಬೇಕು ಎಂದು ದುಗ್ಗೇಶ್ ನನ್ನು ಹತ್ಯೆ ಮಾಡಲು ಮುಂದಾಗುತ್ತಾನೆ.
ದುಗ್ಗೇಶನನ್ನ ಹೊರ ವಲಯಕ್ಕೆ ಕರೆಸಿ ಹಿಗ್ಗಾ ಮುಗ್ಗ ಹೊಡೆದು ಟವಲ್ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.ನಂತರ ರಸ್ತೆ ಪಕ್ಕ ಬಿದ್ದಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು, ಬದುಕಿ ಉಳಿಯಲಿಲ್ಲ ಎಂದು ಗಣೇಶ ಕಥೆ ಕಟ್ಟಿದ್ದ.ಆದರೆ ದೂರು ದಾಖಲಾಗಿ 24 ಗಂಟೆಯಲ್ಲಿಯೇ ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ಗಣೇಶ ನಡೆದ ಎಲ್ಲಾ ವಿಷಯವನ್ನ ಕಕ್ಕಿದ್ದಾನೆ.
ಇದನ್ನೂ ಓದಿ : Benz ಕಾರು ಡಿಕ್ಕಿಯಾಗಿ ಟೆಕ್ಕಿ ಸಾವು; ಕೇಸ್ ವಾಪಸ್‌ಗೆ ಕೋಟಿ ಕೋಟಿ ಆಫರ್, ಐಷಾರಾಮಿ ಕಾರಿನ ಮಾಲೀಕ ಯಾರು ಗೊತ್ತಾ..?
ಪ್ರಕರಣ ಸಂಬಂಧ ಗಣೇಶ, ಅನಿಲ್, ಶಿವಕುಮಾರ್, ಲೋಕೇಶ್ ನನ್ನ ಈಗಾಗಲೇ ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಒಟ್ಟಾರೆ ಹಣಕ್ಕಾಗಿ ಸ್ವಂತ ಮಾವನನ್ನೇ ಹತ್ಯೆ ಮಾಡಲಾಗಿದೆ. ಈ ಘಟನೆ ಕಲಿಯುಗದಲ್ಲಿ ಸಂಬಂಧಕ್ಕಿಂತ ಹಣಕ್ಕೆ ಬೆಲೆ ಜಾಸ್ತಿ ಅನ್ನೋ ಮಾತನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ