ಬೆಂಗಳೂರು: ರಾಬರಿ ಮಾಡಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪ್ರಾಯಶ್ಚಿತ ಮಾಡಿಕೊಂಡಿದ್ದ ಇಬ್ಬರು ಬಾಲಾಪರಾಧಿಗಳು ಸೇರಿ ನಾಲ್ವರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಶ್ರೀಧರ್ (29), ನಿತಿನ್ ರಾಜ್ (18) ಬಂಧಿತ ಆರೋಪಿಗಳು. ಇನ್ನಿಬ್ಬರು ಬಾಲಪರಾಧಿಗಳನ್ನು ವಿಚಾರಣೆ ನಡೆಸಿ ಬಾಲಮಂದಿರಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಬೈಕ್ ಡಿಕ್ಕಿಗೆ ಹೊತ್ತಿ ಉರಿದ ಡಿಸೇಲ್ ಟ್ಯಾಂಕರ್ : ಸುಟ್ಟು ಕರಕಲಾದ ಬೈಕ್ ಸವಾರ
ಆರೋಪಿ ಶ್ರೀಧರ್ ಪಧವೀದರನಾಗಿದ್ದು, ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿದ್ದ. ಮೈತುಂಬಾ ಸಾಲ ಮಾಡಿಕೊಂಡಿದ್ದ ಈತ ಸಾಲಗಾರರ ಕಾಟಕ್ಕೆ ಬೇಸತ್ತು ಮನೆ ತೊರೆದಿದ್ದ.ಪುಂಡರ ಜೊತೆ ಸೇರಿ ಗಾಂಜಾ ಚಟ ಅಂಟಿಸಿಕೊಂಡಿದ್ದ.
ಜೂನ್ 02 ರಂದು ಗಿರಿನಗರದ ಬ್ಯಾಂಕ್ ಕಾಲೋನಿಯ ಬಾರ್ ನಲ್ಲಿ ಕುಡಿದು ಮನೆಗೆ ಹೋಗುವಾಗ ಆರೋಪಿಗಳಾದ ಶ್ರೀಧರ್, ನಿತಿನ್ ರಾಜ್ ಸೇರಿ ಬೈಕ್ ನಲ್ಲಿ ಬಂದು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಲಾಂಗ್ ನಿಂದ ಹಲ್ಲೆಮಾಡಿದ್ದಾರೆ. 50 ಸಾವಿರ ಮೌಲ್ಯದ ಎರಡು ಚಿನ್ನದ ಉಂಗುರ, 1.40 ಲಕ್ಷ ಮೌಲ್ಯದ 28 ಗ್ರಾಂ ಚಿನ್ನದ ಸರ ಹಾಗೂ ಪರ್ಸ್ ನಲ್ಲಿದ್ದ 20 ಸಾವಿರ ನಗದು ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರ ದುರ್ಮರಣ..!
ಕೃತ್ಯವೆಸಗಿದ ಬಳಿಕ ಗೋವಾಕ್ಕೆ ತೆರಳಿ ಮೋಜು-ಮಸ್ತಿ ಮಾಡಿದ್ದಾರೆ. ನಂತರ ಪ್ರಾಯಶ್ಚಿತ ಮಾಡಿಕೊಳ್ಳಲು ಮಲೆಮಹದೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ರಾಬರಿ ಬಳಿಕ ಬೈಕ್ ನಲ್ಲಿ ಓಡಾಡುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೇ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.