Bangalore : ಬುಡುಬುಡಿಕೆಯವನ ಮಾತು ಕೇಳಿ ಚಿನ್ನಾಭರಣ ಕಳೆದುಕೊಂಡ ದಂಪತಿ

ಮೌಡ್ಯಕ್ಕೆ ಬಲಿಯಾದ ದಂಪತಿ ಮನೆಯಲ್ಲಿ ಸಾವಾಗುತ್ತೆ ಎಂದು ಹೇಳಿದನ್ನ ಬೆದರಿ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಘಟನೆ ಜ್ಞಾನಭಾರತಿಯಲ್ಲಿ ನಡೆದಿದೆ‌. ವರದರಾಜು ಎಂಬುವವರ ತಂದೆ ಇತ್ತೀಚೆಗೆ ಮೃತಪಟ್ಟಿದ್ದರು. 

Written by - VISHWANATH HARIHARA | Last Updated : Aug 28, 2022, 02:24 PM IST
  • ಮೌಡ್ಯಕ್ಕೆ ಬಲಿಯಾದ ದಂಪತಿ
  • ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ದಂಪತಿ
  • ಕುಟುಂಬದ ಸಂಪ್ರದಾಯದ ಪ್ರಕಾರ 11 ದಿನ ಮನೆಯಲ್ಲಿ ದೀಪ ಹಚ್ಚಬೇಕು
Bangalore : ಬುಡುಬುಡಿಕೆಯವನ ಮಾತು ಕೇಳಿ ಚಿನ್ನಾಭರಣ ಕಳೆದುಕೊಂಡ ದಂಪತಿ title=

ಬೆಂಗಳೂರು : ಮೌಡ್ಯಕ್ಕೆ ಬಲಿಯಾದ ದಂಪತಿ ಮನೆಯಲ್ಲಿ ಸಾವಾಗುತ್ತೆ ಎಂದು ಹೇಳಿದನ್ನ ಬೆದರಿ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಘಟನೆ ಜ್ಞಾನಭಾರತಿಯಲ್ಲಿ ನಡೆದಿದೆ‌. ವರದರಾಜು ಎಂಬುವವರ ತಂದೆ ಇತ್ತೀಚೆಗೆ ಮೃತಪಟ್ಟಿದ್ದರು. 

ಕುಟುಂಬದ ಸಂಪ್ರದಾಯದ ಪ್ರಕಾರ 11 ದಿನ ಮನೆಯಲ್ಲಿ ದೀಪ ಹಚ್ಚಬೇಕು . ಹೀಗಾಗಿ ಮನೆಯಲ್ಲಿ ದೀಪ ಹಚ್ಚಿದ್ದನ್ನ‌ ನೋಡಿ ಮನೆಗೆ ಬಂದಿದ್ದ ಬುಡುಬುಡುಕೆ ದಾಸ ಈ ಮನೆಯಲ್ಲಿ ಮತ್ತೆ ಮೂರು ಸಾವಾಗುತ್ತೆ ಎಂದು ಇರುಳು ಹೊತ್ತಿನಲ್ಲಿ ಹೇಳಿ ಹೋಗಿದ್ದ. ಇದನ್ನ ಕೇಳಿ ದಂಪತಿ ಬೆದರಿದ್ದರು. ನಂತರ ಮಾರನೆ ದಿನವೂ ಬಂದಿದ್ದ ಬುಡುಬುಡುಕೆಯವನು , ಮನೆಯಲ್ಲಿ ವರದರಾಜು ಪತ್ನಿ ಒಬ್ಬರೇ ಇರುವುದನ್ನ ನೋಡಿ ಮತ್ತೆ ಮೂರು ಸಾವಗುತ್ತೆ ಎಚ್ಚರ ಎಂದು ಬೆದರಿಸಿದ್ದ . ಎರಡನೇ ಬಾರಿ ಸಾವಿನ ವಿಚಾರ ಕೇಳಿದಾಗ ಭಯಗೊಂಡ ವರದರಾಜು ಪತ್ನಿ, ಬುಡುಬುಡಕೆಯವನನ್ನ ಮನೆಯೊಳಗೆ ಕರೆಸಿ ಮಾತನಾಡಿಸಿದ್ದಳು. 

ಇದನ್ನೂ ಓದಿ : Talikoti : ಮಹಾಗಣಪತಿ ಪ್ರತಿಷ್ಠಾಪನೆ ಸ್ಥಳದ ಭೂಮಿಪೂಜಾದಲ್ಲಿ ಸಾವರ್ಕರ್ ಪೋಟೋ!

ಈ ವೇಳೆ ಪೂಜೆ ಮಾಡಬೇಕು ಐದು ಸಾವಿರ ಆಗುತ್ತೆ ಎಂದಿದ್ದ ಬುಡುಬುಡುಕೆಯವನು . ಐದು ಸಾವಿರ ಕೊಟ್ಟ ಬಳಿಕ ವರದರಾಜು ಪತ್ನಿಗೆ ಕಪ್ಪು ಬೊಟ್ಟನ್ನ ಹಣೆ ಹಚ್ಚಿದ್ದ . ಈ ಸಂದರ್ಭದಲ್ಲಿ ಮೈಮೇಲಿದ್ದ  ಒಡವೆಗಳ ಬುಡುಬುಡಕೆ ದಾಸ ಕೇಳಿದ್ದ. ಆಕೆಗೆ ಅರಿವಿಲ್ಲದಂತೆ ಅದನ್ನ ತೆಗೆದುಕೊಟ್ಟಿದ್ರು. ಒಂದು ಚೈನ್ ಹಾಗು ಎರಡು ಉಂಗುರವನ್ನ ಬಿಚ್ಚಿ ಕೊಟ್ಟಿದ್ರು.   12 ಗಂಟೆಯೊಳಗೆ ಪೂಜೆ ಮಾಡಿ ಕೊಡ್ತಿನಿ ಎಂದು ಹೇಳಿ ತನ್ನ ಹೆಸರು ಕೃಷ್ಣಪ್ಪ ಎಂದು ಹೇಳಿ ಫೋನ್ ನಂಬರ್ ಇಟ್ಟು ಹೋಗಿದ್ದ. ಪತಿ ವರದರಾಜು ಬಂದ ಬಳಿಕ ಅಸಲಿ ಸಂಗತಿ ತಿಳಿದು ಕೃಷ್ಣಪ್ಪನ ನಂಬರ್ ಗೆ ಕರೆ ಮಾಡಿದರೆ ಅದು ಸ್ವಿಚ್ ಆಫ್ ಆಗಿತ್ತು. ಮೋಸ ಹೋಗಿರೋ ವಿಚಾರ ತಿಳಿಯುತ್ತಿದ್ದಂತೆ ಜ್ಞಾನಭಾರತಿ ಪೊಲೀಸರಿಗೆ ದಂಪತಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News