ನವದೆಹಲಿ: ಸದ್ಯ ವಿಶ್ವಾದ್ಯಂತ ಪಸರಿಸಿರುವ ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಭಾರತದಲ್ಲಿಯೂ ಕೂಡ ಲಾಕ್ ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜನಸಾಮಾನ್ಯರು ಅಷ್ಟೇ ಅಲ್ಲ ಸೆಲಿಬ್ರಿಟಿಗಳೂ ಕೂಡ ತಮ್ಮ ಬಂಧು-ಮಿತ್ರರನ್ನು ಭೇಟಿಯಾಗುತ್ತಿಲ್ಲ. ಬಿ-ಟೌನ್ ನ ಬಹುತೇಕ ನಟ-ನಟಿಯರು ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ತಮ್ಮ ತಮ್ಮ ಮನೆಗಳಲ್ಲಿಯೇ ಬಂಧಿಯಾಗಿದ್ದಾರೆ. ಆದರೆ, ಇವರಲ್ಲಿ ಅನೇಕರು ಸಾಮಾಜಿಕ ಮಾಧ್ಯಮ ತಾಣಗಳಾಗಿರುವ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ಭಾರಿ ಆಕ್ಟಿವ್ ಆಗಿದ್ದಾರೆ.
ಇತ್ತೀಚೆಗೆ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರೂ ಕೂಡ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಕಪಿಲ್ ದೇವ್ ಅವರು ತಮ್ಮ ತಲೆ ಕೂದಲನ್ನು ಬೋಳಿಸಿಕೊಂಡಿದ್ದಾರೆ. ಬಳಿಕ ಅವರ ಭಾವಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಲಾರಂಭಿಸಿದೆ. ಕಪಿಲ್ ಅವರ ಈ ಚಿತ್ರವನ್ನು ಬಾಲಿವುಡ್ ಖ್ಯಾತ ಹಿರಿಯ ಅನುಪಮ್ ಖೇರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಕಾಲೆಳೆಯುವ ಪ್ರಯತ್ನ ಮಾಡಿದ್ದು, 'ನನ್ನ ಸ್ನೇಹಿತ ಕಪಿಲ್ ದೇವ್ ಅವರೂ ಕೂಡ ಬೋಳಾಗಿದ್ದಾರೆ, ಫ್ಯಾಷನ್ ನಲ್ಲಿ ಇದನ್ನು ಶೇವ್ಡ್ ಎಂದು ಕರೆಯಲಾಗುತ್ತದೆ' ಎಂದು ಬರೆದುಕೊಂಡಿದ್ದಾರೆ.
So my dear friend @therealkapildev has also gone bald, fashionably also referred as “shaved”. I have always said that there are two kinds of men in this world - Baldies and Future Baldies. Welcome to the club Sir!! गंजो की महफ़िल में आपका “बालों रहित” स्वागत है। 🙏🤓😍 pic.twitter.com/lLQxvLcdhE
— Anupam Kher (@AnupamPKher) April 21, 2020
ತನ್ನ ಟ್ವೀಟ್ ಅನ್ನು ಮುಂದುವರೆಸಿರುವ ಅನುಪಮ್ ಖೇರ್, " ಈ ಪ್ರಪಂಚದಲ್ಲಿ ಎರಡು ವಿಭಿನ್ನ ರೀತಿಯ ಪರುಷರಿರುತ್ತಾರೆ ಎಂದು ನಾನು ಯಾವಾಗಲು ಹೇಳುತ್ತೇನೆ. ಬೋಳು ತಲೆಯವರು ಹಾಗೂ ಭವಿಷ್ಯದ ಬೋಳುತಲೆಯವರು. ಬೋಳು ತಲೆಯವರ ಕ್ಲಬ್ ಗೆ ನಿಮಗೆ ಸ್ವಾಗತ ಸರ್.. ಬೋಳು ತಲೆಯವರ ಮೆಹ್ಫಿಲ್ ನಲ್ಲಿ ಕೂದಲು ರಹಿತರಾಗಿರುವ ನಿಮಗೆ ಸ್ವಾಗತ' ಎಂದು ಬರೆದುಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆಯಲ್ಲಿ ಬುಧವಾರ ಮತ್ತಷ್ಟು ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 19,984 ಕ್ಕೆ ತಲುಪಿದೆ. ಇವರಲ್ಲಿ 15,474 ಜನರೂ ಇನ್ನೂ ಕೂಡ ಸೋಂಕಿನಿಂದ ಬಳಲುತ್ತಿದ್ದರೆ, 3,869 ಸೊಂಕಿತರನ್ನು ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇನ್ನೊಂದೆಡೆ ಬುಧವಾರ ಬೆಳಗ್ಗೆ 6 ಗಂಟೆಯವರೆಗೆ ಈ ಮಾರಕ ಕಾಯಿಲೆಗೆ ಸುಮಾರು 64೦ ಜನ ಬಲಿಯಾಗಿದ್ದಾರೆ.