Bollywood Actor Arvind Swamy : ನಟನಾಗುವುದು ಲಕ್ಷಾಂತರ ಜನರ ಕನಸು. ಕೆಲವರು ಈ ಗುರಿಯನ್ನು ಸುಲಭವಾಗಿ ಸಾಧಿಸುತ್ತಾರೆ, ಆದರೆ ಅನೇಕರು ದೀರ್ಘಕಾಲದವರೆಗೆ ಹೀರೋ ಆಗಲು ಪ್ರಯತ್ನಿಸುತ್ತಾರೆ. ಇಂಡಸ್ಟ್ರಿಯಲ್ಲಿ ಮೊದಲ ಪ್ರಯತ್ನದಲ್ಲಿಯೇ ನಟನಾ ಲೋಕದಲ್ಲಿ ತಮ್ಮ ಸಾಮರ್ಥ್ಯವನ್ನು ತೋರುವ ಅವಕಾಶ ಗಿಟ್ಟಿಸಿಕೊಂಡವರು ಕೆಲವರು ಇದ್ದಾರೆ. ಕೇವಲ 20 ನೇ ವಯಸ್ಸಿನಲ್ಲಿ, ರಜನಿಕಾಂತ್ ಅವರಂತಹ ದೊಡ್ಡ ಸ್ಟಾರ್ಗಳೊಂದಿಗೆ ಮೊದಲ ಬಾರಿಗೆ ನಟಿಸಿದ ಈ ನಟ ಇಂದು 3300 ಕೋಟಿ ಒಡೆಯ. 25ನೇ ವಯಸ್ಸಿಗೆ ಸ್ಟಾರ್ ಆಗಿ 30 ವರ್ಷಕ್ಕೂ ಮುನ್ನವೇ ಸಿನಿಮಾ ಬಿಟ್ಟ ಈ ನಟ ಯಾರೆಂದು ತಿಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಮಣಿರತ್ನಂ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟ ಅರವಿಂದ್ ಸ್ವಾಮಿ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಅರವಿಂದ್ ಸ್ವಾಮಿ ಮೊದಲ ಬಾರಿಗೆ ತಮ್ಮ ವೃತ್ತಿಜೀವನವನ್ನು ರಜನಿಕಾಂತ್ ಮತ್ತು ಮಮ್ಮುಟ್ಟಿಯಂತಹ ಸೂಪರ್ಸ್ಟಾರ್ಗಳೊಂದಿಗೆ ಪ್ರಾರಂಭಿಸಿದರು. ಆಗ ಬರಿಗೆ 20 ವರ್ಷ ವಯಸ್ಸು. ಅರವಿಂದ್ ಸ್ವಾಮಿ ಅವರು ದಳಪತಿ ಚಿತ್ರದ ಮೂಲಕ ಪದಾರ್ಪಣೆ ಮಾಡಿ ದರು. ಅದರಲ್ಲಿ ಅವರು ಅರ್ಜುನ್ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿತು. ನಂತರ ಅರವಿಂದ್ ಸ್ವಾಮಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡರು.
ಇದನ್ನೂ ಓದಿ : Alia Bhatt: ಫಸ್ಟ್ ಲವ್ ಎಂದಿಗೂ ಮರೆಯಲ್ಲ ಎಂದ ಆಲಿಯಾ ಭಟ್.. ಇವರೇ ಮೊದಲ ಪ್ರಿಯಕರ!
ಅರವಿಂದ್ ಸ್ವಾಮಿ ಅವರು ಮಣಿರತ್ನಂ ಅವರ ಎರಡು ಪ್ರಮುಖ ಚಿತ್ರಗಳಾದ 1992 ರಲ್ಲಿ ರೋಜಾ ಮತ್ತು 1995 ರಲ್ಲಿ ಬಾಂಬೆ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಗಳ ಯಶಸ್ಸು ಅವರನ್ನು ಸ್ಟಾರ್ ನಟನಾಗಿ ಮಾಡಿತು. ನಂತರ ಅವರು 1997 ರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ಮಿನ್ಸಾರ ಕಣವುನಲ್ಲಿ ಕಾಜೋಲ್ ಜೊತೆ ನಟಿಸಿದರು. ನಂತರ ಸಾತ್ ರಂಗ್ ಕಾ ಸಪ್ನೆಯಲ್ಲಿ ಜೂಹಿ ಚಾವ್ಲಾ ಅವರೊಂದಿಗೆ ಬಾಲಿವುಡ್ಗೆ ಪದಾರ್ಪಣೆ ಮಾಡಿದರು.
90 ರ ದಶಕದ ಅಂತ್ಯದ ವೇಳೆಗೆ, ಅರವಿಂದ್ ಸ್ವಾಮಿಯವರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಎರಡು ಚಿತ್ರಗಳ ನಿರ್ಮಾಣಕ್ಕೆ ವರ್ಷಗಳೇ ಹಿಡಿದವು ಮತ್ತು ಇದರಿಂದ ಹತಾಶರಾದ ಅರವಿಂದ್ ಸ್ವಾಮಿ 2000 ರ ನಂತರ ಸಿನಿರಂಗವನ್ನು ತೊರೆದರು.
2000 ರ ದಶಕದ ಮಧ್ಯಭಾಗದಲ್ಲಿ ತನ್ನ ತಂದೆಯ ವ್ಯವಹಾರವನ್ನು ನಿರ್ವಹಿಸುತ್ತಿದ್ದ ಅರವಿಂದ್ ಸ್ವಾಮಿ ಅಪಘಾತಕ್ಕೆ ಒಳಗಾದರು. ಇದರಿಂದಾಗಿ ಅವರ ಕಾಲುಗಳು ಭಾಗಶಃ ಶಕ್ತಿಹೀನಗೊಂಡವು. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು 4-5 ವರ್ಷಗಳ ಚಿಕಿತ್ಸೆ ತೆಗೆದುಕೊಂಡರು. ಅವರು ದೀರ್ಘಕಾಲದವರೆಗೆ ನೋವಿನಿಂದ ಬಳಲುತ್ತಿದ್ದರು.
2005 ರಲ್ಲಿ, ಅರವಿಂದ್ ಸ್ವಾಮಿ ತಮ್ಮ ಅತ್ಯಂತ ಯಶಸ್ವಿ ಕಂಪನಿಯನ್ನು ಸ್ಥಾಪಿಸಿದರು. ಟ್ಯಾಲೆಂಟ್ ಮ್ಯಾಕ್ಸಿಮಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಹಲವಾರು ಮಾರುಕಟ್ಟೆ ಟ್ರ್ಯಾಕಿಂಗ್ ಪೋರ್ಟಲ್ಗಳ ಪ್ರಕಾರ, ಟ್ಯಾಲೆಂಟ್ ಮ್ಯಾಕ್ಸಿಮಸ್ನ ಆದಾಯ 2022 ರಲ್ಲಿ $418 ಮಿಲಿಯನ್ (ರೂ.3300 ಕೋಟಿ) ಆಗಿತ್ತು. 2013 ರ ಅರವಿಂದ್ ಸ್ವಾಮಿ ಪ್ರಮುಖ ಪಾತ್ರಗಳ ಬದಲಿಗೆ ಪೋಷಕ ಪಾತ್ರಗಳನ್ನು ಮಾಡಲು ಪ್ರಾರಂಭಿಸಿದರು.
2021 ರಲ್ಲಿ, ಅವರು ಕಂಗನಾ ರಣಾವತ್ ಎದುರು ತಮಿಳು-ಹಿಂದಿ ದ್ವಿಭಾಷಾ ಸಿನಿಮಾ ತಲೈವಿಯಲ್ಲಿ ಎಂ.ಜಿ ರಾಮಚಂದ್ರನ್ ಪಾತ್ರವನ್ನು ನಿರ್ವಹಿಸುವುದರ ಮೂಲಕ ಬಾಲಿವುಡ್ಗೆ ಪುನರಾಗಮನ ಮಾಡಿದರು.
ಇದನ್ನೂ ಓದಿ : ಡಂಕಿ Vs ಸಲಾರ್: ಡಂಕಿ ಚಿತ್ರದ ಬಜೆಟ್ ರಿವಿಲ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.