Bigg Boss Kannada OTT : ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮದ ವಿಚಾರ ಹೊಸದೇನಲ್ಲ. ಪ್ರತಿ ಬಾರಿಯೂ ಲವ್ ಸ್ಟೋರಿಗಳು ನಡೆಯುತ್ತಲೇ ಇರುತ್ತವೆ. ಸಾಕಷ್ಟು ಪ್ರೀತಿ-ಪ್ರೇಮಗಳು ದೊಡ್ಮನೆಯಲ್ಲಿ ಹುಟ್ಟಿಕೊಂಡಿದ್ದನ್ನು ವೀಕ್ಷಕರು ನೋಡಿದ್ದಾರೆ. ಕೆಲವು ಪ್ರೇಮ ಕಹಾನಿಗಳು ಮನೆಯಲ್ಲೇ ಅಂತ್ಯವಾದರೆ, ಇನ್ನೂ ಕೆಲವು ದಾಂಪತ್ಯ ಜೀವನಕ್ಕೆ ಬದಲಾದ ಉದಾಹರಣೆಯೂ ಇದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ಪ್ರೀತಿ-ಪ್ರೇಮದ ವಿಚಾರ ಪ್ರಸ್ತಾಪ ಆಗಿದೆ. ಬಿಗ್ ಬಾಸ್ ಕನ್ನಡ ಒಟಿಟಿಗೆ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿದ ಅನೇಕರು ಬಂದಿದ್ದಾರೆ. ಇದೀಗ ನಟ ರಾಕೇಶ್ ಅಡಿಗ ಮತ್ತು ಸ್ಫೂರ್ತಿ ಗೌಡ ಇಬ್ಬರ ನಡುವೆ ಒಂದಷ್ಟು ಸಂಭಾಷಣೆ ನಡೆದಿದ್ದು, ಇದು ಪ್ರೀತಿ ಪ್ರೇಮದ ವಿಚಾರವಾಗಿದೆ. ನೋಡುಗರಿಗೆ ಈ ಚರ್ಚೆ ಸಾಕಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: BBK OTT : ರಾಕೇಶ್ - ರೂಪೇಶ್ ನಡುವೆ ನಿಜವಾಗ್ಲೂ ನಡೀತಾ ಕಿರಿಕ್!?
ಬಿಗ್ ಬಾಸ್ ಮನೆಯ ಡೈನಿಂಗ್ ಏರಿಯಾದಲ್ಲಿ ರಾಕೇಶ್, ರೂಪೇಶ್ ಹಾಗೂ ಸ್ಫೂರ್ತಿ ಗೌಡ ಮಾತನಾಡುತ್ತಿರುತ್ತಾರೆ. ಈ ವೇಳೆ ರಾಕೇಶ್ ಅಡಿಗ ಅವರ ಕೈಹಿಡಿದುಕೊಂಡು ಸ್ಫೂರ್ತಿ ಗೌಡ ಭವಿಷ್ಯ ಹೇಳುತ್ತಿರುತ್ತಾರೆ. ದುಡ್ಡು ಎಷ್ಟೇ ಬಂದರೂ ಅರ್ಧಂಬರ್ಧ ಬರುತ್ತದೆ ಎಂದು ಸ್ಫೂರ್ತಿ ಗೌಡ ಹೇಳುತ್ತಾರೆ. ಹೀಗೆ ಸ್ಫೂರ್ತಿ ಗೌಡ ಕಥೆ ಹೇಳಲು ಶುರು ಮಾಡ್ತಾರೆ. ಆಗ ರಾಕೇಶ್ ಹಾಗೂ ರೂಪೇಶ್ ಅವರ ಕಾಲೆಳೆದು ನಗಲು ಆರಂಭಿಸುತ್ತಾರೆ. ನಂತರ ರಾಕೇಶ್ ಅವರು ಸ್ಫೂರ್ತಿ ಅವರ ಕೈ ಹಿಡಿದುಕೊಂಡು ಭವಿಷ್ಯ ಹೇಳ್ತೀನಿ ಅಂತಾರೆ. ರಾಕೇಶ್ ಅವರು ಸ್ಫೂರ್ತಿಗೆ ನಿಮಗೆ ಬಿಗ್ ಬಾಸ್ ಮನೆಯಲ್ಲಿ ಲವ್ ಆಗುತ್ತದೆ ಎನ್ನುತ್ತಾರೆ. ಬಳಿಕ ಅವರು ಯಾರು ಅಂದಾಗ.. ಆ ವ್ಯಕ್ತಿ ನಿಮ್ಮ ಕೈ ನೋಡುತ್ತಿರುತ್ತಾರೆ ಎಂದು ರಾಕೇಶ್ ಹೇಳುತ್ತಾರೆ. ಅವರು ಫ್ಲರ್ಟ್ ಮಾಡಿದ್ದನ್ನು ನೋಡಿ ಸ್ಫೂರ್ತಿ ಜೋರಾಗಿ ನಗಲು ಶುರು ಮಾಡುತ್ತಾರೆ. ಈ ವಿಚಾರ ಕೇವಲ ಸಂಭಾಷಣೆಯಲ್ಲಿ ಮುಗಿಯುತ್ತಾ ಅಥವಾ ಇಬ್ಬರ ಮಧ್ಯೆ ನಿಜವಾಗಲೂ ಪ್ರೇಮಾಂಕುರವಾಗುತ್ತಾ ಎಂದು ಕಾದು ನೋಡಬೇಕಿದೆ.
ಬಿಗ್ ಬಾಸ್ ಒಟಿಟಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ ಅನೇಕರು ಬಂದಿದ್ದಾರೆ. ಶುರುವಾದ ಎರಡೇ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವಿಚಾರಗಳು ನಡೆದಿವೆ. ಮೊದಲ ದಿನ ಕಣ್ಣೀರ ಕಹಾನಿ ನಡೆಯಿತು. ಎರಡನೇ ದಿನ ಜಗಳದಲ್ಲೇ ದಿನ ಕಳೆಯಿತು. ಇನ್ನೂ ಮುಂದಿನ 40 ದಿನಗಳ ಕಾಲ ಈ ಶೋ ಯಾವ ರೀತಿ ಸಾಗಲಿದೆ ಎಂಬ ಕುತೂಹಲ ನೋಡುಗರನ್ನು ಕಾಡುತ್ತಿದೆ.
ಇದನ್ನೂ ಓದಿ: Sonu Gowda: ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರ ನಡೀತಾರಾ ಸೋನು ಗೌಡ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.