Biggboss Kannada 10: ವೀಕೆಂಡ್ ಬಂತು ಅಂದ್ರೆ ಕ್ಯಾಪ್ಟನ್ಸಿ ಟಾಸ್ಕ್ನ ಬಿಸಿ ಬಿಗ್ಬಾಸ್ ಮನೆಯಲ್ಲಿ ಏರಲು ಶುರುವಾಗುತ್ತದೆ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಯಾರು ಭಾಗವಹಿಸಬೇಕು? ಯಾರು ಯಾರನ್ನು ಸಪೋರ್ಟ್ ಮಾಡಬೇಕು? ಲೆಕ್ಕಾಚಾರ ಹೇಗಿರಬೇಕು ಇವೆಲ್ಲ ಚರ್ಚೆಗಳಲ್ಲಿಯೇ ಸ್ಫರ್ಧಿಗಳು ತಲ್ಲೀನರಾಗುತ್ತಿದ್ದರು.
ಈ ಸಲ ಕ್ಯಾಪ್ಟನ್ಸಿ ಟಾಸ್ಕ್ಗೆ ಬಿಗ್ಬಾಸ್ ಒಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಯಾವ ಐದು ಸ್ಪರ್ಧಿಗಳು ಆಡಬೇಕು ಎಂದು ನೀವೇ ನಿರ್ಧರಿಸಿಕೊಳ್ಳಿ ಎಂದು ಹೇಳಿದ್ದಾರೆ!
ನಮ್ರತಾ, ಸಿರಿ, ಕಾರ್ತಿಕ್, ಪ್ರತಾಪ್, ವರ್ತೂರು ಈ ಐವರು ಕ್ಯಾಪ್ಟನ್ಸಿ ಆಡಬೇಕು ಎಂದು ಮನೆಯ ಸದಸ್ಯರು ವೋಟಿಂಗ್ ಮೂಲಕ ಆರಿಸಿದ್ದಾರೆ. ಆದರೆ ತುಕಾಲಿ ಸಂತೋಷ್ ಅವರಿಗೆ ಈ ವೋಟಿಂಗ್ ಬಗ್ಗೆ ಆಕ್ಷೇಪವಿದೆ.
ಇದನ್ನೂ ಓದಿ- BBK10: "ಅಪ್ಪನನ್ನು ನೋಡ್ಬೇಕು, ತಾಯಿ ಹೇಗಿದ್ದಾರೆ ತಿಳಿಯಬೇಕು": ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್!
'ಕರೆಕ್ಟಾಗಿ ವೋಟಿಂಗ್ ಆಗಿಲ್ಲ. ನಾವೂ ಭಾಗವಹಿಸಬೇಕು ಎಂದು ನಮಗೆ ಇರುತ್ತದೆ' ಎಂದು ಅವರು ತಗಾದೆ ತೆಗೆದಿದ್ದಾರೆ. ವಿನಯ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿ, ‘ನೀವು ಆಡಿರುವುದು ಒಂದೇ ಟಾಸ್ಕ್’ ಎಂದು ಚುಚ್ಚಿದ್ದಾರೆ. ತುಕಾಲಿ ಅವರು ಇದರಿಂದ ಸಿಟ್ಟಿಗೆದ್ದು, ‘ಒಂದೇ ಟಾಸ್ಕ್ನಲ್ಲಿ ನನ್ನ ನಾನು ಪ್ರೂವ್ ಮಾಡಿಕೊಂಡಿದ್ದೀನಿ’ ಎಂದು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಮಾತಿನ ಜಟಾಪಟಿಯೂ ನಡೆದಿದೆ.
ಇದನ್ನೂ ಓದಿ- Bigg Boss 10: ಇಷ್ಟೆಲ್ಲಾ ಆದ್ಮೇಲೂ ಹೊರ ಬರಲು ಹೊಸ ದಾರಿ ಹುಡುಕಿದ ವರ್ತೂರ್ ಸಂತೋಷ್!
ಹಾಗಾದ್ರೆ ಕ್ಯಾಪ್ಟನ್ಸಿ ಟಾಸ್ಕ್ಗೆ ಆಡುವ ಸ್ಪರ್ಧಿಗಳ ಲೀಸ್ಟ್ ಬದಲಾಗುತ್ತದೆಯೇ? ತುಕಾಲಿ ಸಂತೋಷ್ ಅವರು ಕ್ಯಾಪ್ಟನ್ಸಿ ಟಾಸ್ಕ್ನ ಕಣಕ್ಕೆ ಇಳಿಯುತ್ತಾರೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು, JioCinemaದಲ್ಲಿ ನೇರಪ್ರಸಾರವಾಗುತ್ತಿರುವ ಬಿಗ್ಬಾಸ್ ಕನ್ನಡವನ್ನು ವೀಕ್ಷಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.