Jacqueline Fernandez: "ನನ್ನ ವೃತ್ತಿಜೀವನ ನಾಶವಾಗಿದೆ.." ಸುಕೇಶ್‌ ವಿರುದ್ದ ಜಾಕ್ವೆಲಿನ್ ಹೇಳಿಕೆ

Jacqueline Fernandez : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಸುಖೇಶ್ ಚಂದ್ರಶೇಖರ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಸುಕೇಶ್ ವಿರುದ್ಧ ಜಾಕ್ವೆಲಿನ್ ಹಲವು ಆರೋಪಗಳನ್ನು ಮಾಡಿದರು.

Written by - Chetana Devarmani | Last Updated : Jan 19, 2023, 09:40 AM IST
  • ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್
  • "ನನ್ನ ವೃತ್ತಿಜೀವನ ನಾಶವಾಗಿದೆ.."
  • ಸುಕೇಶ್‌ ವಿರುದ್ದ ಜಾಕ್ವೆಲಿನ್ ಹೇಳಿಕೆ
Jacqueline Fernandez: "ನನ್ನ ವೃತ್ತಿಜೀವನ ನಾಶವಾಗಿದೆ.." ಸುಕೇಶ್‌ ವಿರುದ್ದ ಜಾಕ್ವೆಲಿನ್ ಹೇಳಿಕೆ  title=
ಜಾಕ್ವೆಲಿನ್ ಫರ್ನಾಂಡಿಸ್

Jacqueline Fernandez : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಸುಖೇಶ್ ಚಂದ್ರಶೇಖರ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಸುಕೇಶ್ ವಿರುದ್ಧ ಜಾಕ್ವೆಲಿನ್ ಹಲವು ಆರೋಪಗಳನ್ನು ಮಾಡಿದರು. ನನ್ನ ಭಾವನೆಗಳೊಂದಿಗೆ ಸುಖೇಶ್ ಆಟವಾಡಿದ್ದಾರೆ. ತನ್ನ ವೃತ್ತಿಜೀವನ ನಾಶವಾಗಿದೆ ಎಂದು ನಟಿ ಹೇಳಿದ್ದಾರೆ. 

ಇದನ್ನೂ ಓದಿ : FACT CHECK : ಸಚಿನ್ ಪುತ್ರಿ ಸಾರಾ ಜೊತೆ ಶುಭಮನ್ ಗಿಲ್ ಎಂಗೇಜ್ಮೆಂಟ್‌.!

ಮಾಧ್ಯಮ ವರದಿಗಳ ಪ್ರಕಾರ, ನ್ಯಾಯಾಲಯದಲ್ಲಿ ತಾನು ಸರ್ಕಾರಿ ಅಧಿಕಾರಿ ಎಂದು ಸುಕೇಶ್ ಚಂದ್ರಶೇಖರ್ ಹೇಳಿದ್ದರು ಎಂದು ಜಾಕ್ವೆಲಿನ್ ಫರ್ನಾಂಡಿಸ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಹೇಳಿಕೆಯಲ್ಲಿ ಸುಕೇಶ್ ತನ್ನನ್ನು ಸನ್ ಟಿವಿಯ ಮಾಲೀಕ ಎಂದು ಬಣ್ಣಿಸಿದ್ದಾರೆ. ಜಯ ಜಯಲಲಿತಾ ಅವರ ಚಿಕ್ಕಮ್ಮ ಮತ್ತು ಅವರು ನನ್ನ ದೊಡ್ಡ ಅಭಿಮಾನಿ ಎಂದು ಹೇಳಿದ್ದರು. ಇಷ್ಟೇ ಅಲ್ಲ, ಸುಕೇಶ್ ನನ್ನೊಂದಿಗೆ ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡಲು ಬಯಸಿದ್ದರು ಎಂದು ಜಾಕ್ವೆಲಿನ್‌ ಹೇಳಿದ್ದಾರೆ ಎನ್ನಲಾಗಿದೆ.

ನಾವಿಬ್ಬರೂ ದಿನಕ್ಕೆ ಕನಿಷ್ಠ ಮೂರು ಬಾರಿ ಕಾಲ್‌ ಮತ್ತು ವಿಡಿಯೋ ಕರೆಗಳಲ್ಲಿ ಮಾತನಾಡುತ್ತಿದ್ದೆವು ಎಂದು ನಟಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ಬೆಳಿಗ್ಗೆ ನನ್ನ ಚಿತ್ರೀಕರಣದ ಮೊದಲು, ಮಧ್ಯಾಹ್ನ ಮತ್ತು ಕೆಲವೊಮ್ಮೆ ರಾತ್ರಿ ಮಲಗುವ ಮೊದಲು ನನಗೆ ಕರೆ ಮಾಡುತ್ತಿದ್ದರು. ಜೈಲಿನಿಂದ ಮಾತನಾಡುತ್ತಿದ್ದೇನೆ ಮತ್ತು ಜೈಲಿನಲ್ಲಿದ್ದೇನೆ ಎಂದು ಅವರು ಎಂದಿಗೂ ಹೇಳಲಿಲ್ಲ. ನಾನು ಯಾವಾಗಲೂ ವಿಡಿಯೋ ಕರೆಗಳ ಹಿನ್ನೆಲೆಯಲ್ಲಿ ಸೋಫಾ ಮತ್ತು ಪರದೆಯನ್ನು ನೋಡುತ್ತಿದ್ದೆ ಎಂದು ಜಾಕ್ವೆಲಿನ್‌ ತಿಳಿಸಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ : Sonu Sood : ವ್ಯಕ್ತಿಗೆ ಸಿಪಿಆರ್ ಕೊಟ್ಟು ಜೀವ ಉಳಿಸಿದ ಸೋನು ಸೂದ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News