ನವದೆಹಲಿ: ಬಾಲಿವುಡ್ ನ ಪ್ರಣಯ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ ಸಿಂಗ್ ಈಗ ಮದುವೆಯಾಗುತ್ತಿರುವ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ.
ಹೌದು, ಈ ವಿಷಯವನ್ನು ಈಗ ಸ್ವತಃ ದೀಪಿಕಾ ಪಡುಕೋಣೆ ತಮ್ಮ ಟ್ವೀಟರ್ ಖಾತೆಯಲ್ಲಿ ಘೋಷಿಸಿಕೊಂಡಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ನಲ್ಲಿರುವ ಆಮಂತ್ರಣ ಪತ್ರಿಕೆಯಲ್ಲಿ ಅವರು ಇದೆ ನವಂಬರ್ 14 ಮತ್ತು 15 ರಂದು ಮದುವೆ ಕಾರ್ಯಕ್ರಮ ನಡೆಯಲಿದೆ ಎಂದು ಘೋಷಿಸಿಕೊಂಡಿದ್ದಾರೆ.
— Deepika Padukone (@deepikapadukone) October 21, 2018
ಈ ಹಿಂದೆ ಹಲವಾರು ಬಾರಿ ಮದುವೆಯ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು ಫಿಲಂಫೇರ್ ನಿಯತಕಾಲಿಕೆ ಅಂತು ನವಂಬರ್ 19ಕ್ಕೆ ಈ ಜೋಡಿಗಳು ಮದುವೆಯಾಗುತ್ತಾರೆ ಎಂದು ಆಗಲೇ ದಿನಾಂಕವನ್ನು ಕೂಡ ಅಂತಿಮಗೊಳಿಸಿಬಿಟ್ಟಿತ್ತು.ಈಗ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿದ್ದು ಇಬ್ಬರು ಈಗ ಮದುವೆ ಯಾಗುವ ದಿನಾಂಕ ಅಧಿಕೃತವಾಗಿ ನಿಗದಿಯಾಗಿದೆ.
— Ranveer Singh (@RanveerOfficial) October 21, 2018
ಇತ್ತೀಚಿಗೆ ಕರಣ್ ಜೋಹರ್ ಅವರ ತಿರಸ್ಕರಿಸುವ ಅಥವಾ ಸ್ವೀಕರಿಸು ಎನ್ನುವ ಟ್ವಿಟ್ಟರ್ ಗೇಮ್ ನಲ್ಲಿ ರಣವೀರ್ ಸಿಂಗ್ ತಮ್ಮ ಮದುವೆಯಾಗುವ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದರು.