Sandalwood : ಪುನೀತ್ ರಾಜ್ ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೆಚ್ಚು ಉದ್ದದ ರಸ್ತೆಯಿದೆ. ಮೈಸೂರು ರಸ್ತೆಯ ನಾಯಂಡಳ್ಳಿ ಜಂಕ್ಷನ್ ಯಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್ ವರೆಗಿನ ರಸ್ತೆಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ರಸ್ತೆ ಎಂದು ಹೆಸರಿಡಲಾಗಿದೆ.12 ಕಿಲೋ ಮೀಟರ್ ಉದ್ದದ ರಸ್ತೆ ಇದಾಗಿದ್ದು, ಇದು ಕರ್ನಾಟಕದ ನಟರ ಹೆಸರಿನಲ್ಲಿರುವ ಅತಿ ಉದ್ದದ ರಸ್ತೆಗಳಲ್ಲಿ ಒಂದಾಗಿದೆ. ಪುನೀತ್ ಅವರು ಎಲೆಮರೆ ಕಾಯಿಯಂತೆ ಅನಾಥಾಶ್ರಮ, ಗೋ ಶಾಲೆ, ಮಕ್ಕಳಿಗೆ ಶಿಕ್ಷಣಕ್ಕಾಗಿ ನೆರವು, ವೃದ್ಧಾಶ್ರಮ ಹೀಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ.
ಪಾರ್ವತಮ್ಮ ರಾಜ್ ಕುಮಾರ್
ವರನಟ, ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಅವರ ಧರ್ಮಪತ್ನಿಯಾದ ಪಾರ್ವತಮ್ಮ ಅವರು, ಅನೇಕ ನಟ-ನಟಿಯರು, ಗಾಯಕರು ಹಾಗೂ ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಜೊತೆಗೆ 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರು ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಸೌತ್ ಎಂಡ್ ರಸ್ತೆ ಬಳಿಯ ಮಾಧವ ರಾಮ್ ಸರ್ಕಲ್ ನಿಂದ ನಾಗಸಂದ್ರದ ವರೆಗಿನ ರಸ್ತೆಗೆ ಪಾರ್ವತಮ್ಮ ರಾಜ್‌ಕುಮಾರ್ ರಸ್ತೆ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ-Pooja Bhatt: ಈ ಖ್ಯಾತ ನಟಿಗೆ ಕುಡಿತದ ಚಟ, ಆ ನಟನೊಂದಿಗೆ ಅಕ್ರಮ ಸಂಬಂಧ.. ಇದು ಕಥೆಯಲ್ಲ ಜೀವನ.!
ಡಾ.ರಾಜಕುಮಾರ್
ವರನಟ, ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಅವರ ಹೆಸರನ್ನು ಕರ್ನಾಟಕದ ಹಲವಾರು ರಸ್ತೆಗಳಿಗೆ ಇಡಲಾಗಿದೆ. ಅಣ್ಣಾವ್ರ ಅಭಿಮಾನಿಗಳು ಅವರ ಮೇಲಿನ ಅಭಿಮಾನದ ಸಂಗೀತವಾಗಿ ಹಲವಾರು ರಸ್ತೆಗಳಿಗೆ ಡಾ.ರಾಜ್‌ಕುಮಾರ್ ರಸ್ತೆ ಎಂದು ಹೆಸರಿಟ್ಟಿದ್ದಾರೆ. ಬೆಂಗಳೂರಿನ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯ ಉದ್ದ 6 ಕಿ ಮೀ ಇದೆ. ಆದರೆ, ಅತಿಹೆಚ್ಚು ರಸ್ತೆಗಳು ಇವರ ಹೆಸರಲ್ಲಿವೆ.
ವಿಷ್ಣುವರ್ಧನ್
ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ ವಿಷ್ಣುವರ್ಧನ್ ಒಬ್ಬರು. ಇವರ ಹೆಸರಿನಲ್ಲಿರುವ ರಸ್ತೆ ದಾಖಲೆ ಮಾಡಿರುವ ರಸ್ತೆ ಎನ್ನಬಹುದು. ಬನಶಂಕರಿಯಿಂದ ಕೆಂಗೇರಿ ತನಕ ಇರುವ ರಸ್ತೆಗೆ ಡಾ. ವಿಷ್ಣುವರ್ಧನ್ ಹೆಸರಿಡಲಾಗಿದ್ದು, ಅದು 14.5 ಕಿ ಮೀ ಉದ್ದವಿದೆ.
ಶಂಕರ್ ನಾಗ್
ಶಂಕರನಾಗ್ ಕನ್ನಡ ಚಿತ್ರರಂಗದ ದಂತಕಥೆ. ಕನ್ನಡ ಚಿತ್ರ ಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಶಂಕರ ನಾಗ್ ಕನ್ನಡಿಗರ ತಾದ್ಯಾತ್ಮದಲ್ಲಿ ಬೆರೆತು ಹೋಗಿದ್ದಾರೆ. ಲಂಡನ್‌ನಲ್ಲಿನ ಮೇಟ್ರೋ ನೋಡಿದ್ದ ಇವರು ಬೆಂಗಳೂರಿಗೆ ಒಂದು ಮೆಟ್ರೋ ಇರಬೇಕೆಂದು ಒಂದು ನೀಲಿ ನಕ್ಷೆಯನ್ನು ಕೂಡ ತಯಾರಿಸಿದ್ದರು. ಇದರ ಜೊತೆಗೆ ಹಲವಾರು ಕನಸು ಕಂಡಿದ್ದರು. ಕರಾಟೆಕಿಂಗ್ ಶಂಕರ್ ನಾಗ್ ಹೆಸರಲ್ಲೂ ಅನೇಕ ರಸ್ತೆಗಳಿವೆ. ಇಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಿಂದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ರಸ್ತೆಗೆ ಶಂಕರ್ ನಾಗ್ ಹೆಸರಿಡಲಾಗಿದೆ.
ಇದನ್ನೂ ಓದಿ-Amitabh Bachchan ಜೊತೆ ಕುಳಿತ ಈ ಮಗು ಈಗ ಸೂಪರ್ ಸ್ಟಾರ್: ಯಾರೆಂದು ಗೆಸ್ ಮಾಡಿ ನೋಡೋಣ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.