ಮುಂಬೈ: 'ಕ್ಕುಸುಮ್' ಮತ್ತು 'ಕಸೌತಿ ಜಿಂದಗಿ ಕೇ' ನಂತಹ ಶೋಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಖ್ಯಾತ ಕಿರುತೆರೆ ನಟ ಸಿದ್ಧಾಂತ್ ವೀರ್ ಸುರ್ಯವಂಶಿ ಶುಕ್ರವಾರದಂದು ತಮ್ಮ 46 ನೇ ವಯಸ್ಸಿನಲ್ಲಿ ನಿಧನರಾದರು.
ಅವರು ಜಿಮ್ನಲ್ಲಿ ಬೆಳಿಗ್ಗೆ 11 ಗಂಟೆಗೆ ವ್ಯಾಯಾಮ ಮಾಡುವಾಗ ಕುಸಿದ್ದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಅಲೆಸಿಯಾ ರಾವುತ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಇನ್ಸ್ಟಾಗ್ರಾಮ್ನಲ್ಲಿ ನಟ ಜಯ್ ಭಾನುಶಾಲಿ ಅವರು ಶ್ರೀ ಸೂರ್ಯವಂಶಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ : Side Effects Of Earbuds: ಇಯರ್ ಬಡ್ನಿಂದ ಕಿವಿ ಸ್ವಚ್ಛಗೊಳಿಸುವ ಮುನ್ನ ಎಚ್ಚರ!
ಆನಂದ್ ಸೂರ್ಯವಂಶಿ ಎಂದೂ ಕರೆಯಲ್ಪಡುವ ಸಿದ್ದಾಂತ್ ವೀರ್ ಸೂರ್ಯವಂಶಿ ಕಿರುತೆರೆ ಜಗತ್ತಿನಲ್ಲಿ ಜನಪ್ರಿಯ ಮುಖವಾಗಿದ್ದರು. ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ 'ಕ್ಕುಸುಮ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದರು. ಅವರು 'ಕಸೌತಿ ಜಿಂದಗಿ ಕೇ', 'ಸುಫಿಯಾನಾ ಇಷ್ಕ್ ಮೇರಾ', 'ಜಿದ್ದಿ ದಿಲ್ ಮಾನೆ ನಾ' ಮತ್ತು 'ವಾರಿಸ್' ಸೇರಿದಂತೆ ಹಲವಾರು ಇತರ ಟಿವಿ ಕಾರ್ಯಕ್ರಮಗಳ ಭಾಗವಾಗಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.